ರೌಡಕುಂದ ಗ್ರಾ. ಪಂ.ಯಲ್ಲಿ ವಸತಿ ಯೋಜನೆಯಡಿ ಕೋಟ್ಯಂತರ ರೂಪಾಯಿ ಅಕ್ರಮ: ಕ್ರಮಕ್ಕೆ ಆಗ್ರಹ

ಸಿಂಧನೂರು : ತಾಲೂಕಿನ ರೌಡಕುಂದ ಗ್ರಾಮ ಪಂಚಾಯತಯಲ್ಲಿ ಕರ ವಸೂಲಿ ಮಾಡುವ ರಂಜಾನ್ ಸಾಬ್ ಎನ್ನುವ ವ್ಯಕ್ತಿಯು ಸರ್ಕಾರದಿಂದ ಮಂಜೂರಾಗಿದ್ದ ವಿವಿಧ ವಸತಿ ಯೋಜನೆಯಡಿ ಮನೆಗಳನ್ನು ಹಾಗೂ ಸ್ವಚ್ ಭಾರತ ಅಭಿಯಾನ ಯೋಜನೆಯಡಿ ಮಂಜೂರಾದ ಶೌಚಾಲಯಗಳನ್ನು ನಿಜವಾದ ಫಲಾನುಭವಿ ಗಳಿಲ್ಲದೆ ಸತ್ತ ವ್ಯೆಕ್ತಿಗಳ ಹೆಸರಿನಲ್ಲಿ ಸುಳ್ಳು ದಾಖಲೆ ಗಳನ್ನು ಸೃಷ್ಟಿಸಿ ಸರ್ಕಾರದ ಎರೆಡು ಕೋಟಿ ರೂಪಾಯಿಗಳ ಅಧಿಕ ಹಣವನ್ನು ಲೂಟಿ ಮಾಡಿದ್ದಾನೆ.ಈ ಕೂಡಲೇ ಕರ ವಸೂಲಿಗಾರನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ನೂತನ ಗ್ರಾಮ ಪಂಚಾಯತ ಅಧ್ಯಕ್ಷ ಮಹಾಂತಶ್ ಹಿರೆಗೌಡರ ಮತ್ತು ಗ್ರಾಮ ಪಂಚಾಯತ ಸದಸ್ಯರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಆಗ್ರಹಿಸಿದ್ದಾರೆ.
೨೦೧೪ ರಿಂದ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಹಾಗೂ ಕ್ಯಾಂಪುಗಳಲ್ಲಿ ನಿಜವಾದ ಫಲಾನುಭವಿಗಳು ಯಾರು ಇಲ್ಲದೆ ಬೇನಾಮಿ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ.ಕರ ವಸೂಲಿಗಾರ ರಂಜಾನ್ ಸಾಬ್ ಕೋಟಿ ಗಟ್ಟಲೇ ಸರ್ಕಾರದ ಹಣವನ್ನು ದುರ್ಭಳಿಕೆ ಮಾಡಿಕೊಂಡಿದ್ದಾನೆ.ಈ ಹಿಂದಿನ ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ವೀರಭದ್ರಪ್ಪ.ಯಂಕಪ್ಪ ಕುರುಕುಂದ ಸಹ ಪಾಲುದಾರರಾಗಿ ಕಮಿಷನ ಪಡೆದು ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ತಕ್ಷಣ ತಪ್ಪಿತಸ್ಥ ಎಲ್ಲರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶೇ ೯೦ ರಷ್ಟು ಫಲಾನುಭವಿಗಳ ಮನೆಗೆ ಸಂಬಂಧ ಪಟ್ಟ ಮೂಲ ದಾಖಲೆಗಳು ಗ್ರಾಮ ಪಂಚಾಯತಿಯಲ್ಲಿ ಇಲ್ಲವೇ ಇಲ್ಲ.ಅಮಾಯಕ ಜನಗಳಿಗೆ ಮನೆ ಮಂಜೂರು ಮಾಡಿಸಿ ಕೊಡುತ್ತೇನೆ ಎಂದು ಕರವಸೂಲಿಗಾರ ಜನಗಳ ಹತ್ತಿರ ತಲಾ ೧೦ ಸಾವಿರ ಮತ್ತೆ ಇನ್ನೂ ಕೆಲವರ ಹತ್ತಿರ ೨೦ ಸಾವಿರ ರೂಪಾಯಿಗಳ ಲಂಚ್ ಪಡೆದು ವಂಚಿಸಿದ್ದಾನೆ. ಹಾಗೂ ಒಂದು ಹೆಜ್ಜೆ ಮುಂದೆ ಹೋಗಿ ಸತ್ತ ವ್ಯಕ್ತಿಗಳ ಹೆಸರಿನಲ್ಲಿ ಮತ್ತು ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋದ ಮಹಿಳೆಯರ ಹೆಸರಿನಲ್ಲಿ ಬೋಗಸ್ ಬಿಲ್ ಮಾಡಿದ್ದಾನೆ.ಶೌಚಾಲಯ ಇದ್ದರು ಸಹ ಶೌಚಾಲಯ ಕಟ್ಟಿಸಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಲಾಗಿದೆ.ಇನ್ನೂ ಕರ ವಸೂಲಿಗಾರ ತನ್ನ ಮನೆಯನ್ನೇ ತೋರಿಸಿ ಸುಮಾರು ಆರು ಮನೆಗಳನ್ನು ಕಟ್ಟಿಕೊಂಡು ಬಿಲ್ ಎತ್ತಿ ಕೊಂಡಿದ್ದಾನೆ.
ಸುಮಾರು ೭೦ ಫಲಾನುಭವಿಗಳ ಮನೆಗಳನ್ನು ನಿರ್ಮಿಸಲಾಗಿದೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ.ಇಂತಹ ಅಕ್ರಮ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಮೇಲೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು. ಈ ಗ್ರಾಮ ಪಂಚಾಯತಯಲ್ಲಿ ಸರ್ಕಾರದ ವಸತಿ ಯೋಜನೆಯಡಿಯಲ್ಲಿ ಆಗಿರುವ ಅವ್ಯವಹಾರದ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಲಾಯಿತು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷೆ ಲಕ್ಷ್ಮಿ.ಸದಸ್ಯರಾದ ಖಾಸಿಂ ಸಾಬ್.ಗಂಗಪ್ಪ. ಆಯಾಬ್ ಕಾಗೇರಿ.ದುರುಗಪ್ಪ.ಶ್ರೀನಿವಾಸ. ಮರಿಯಮ್ಮ.ಚಂದ್ರಶೇಕರ ಸೇರಿದಂತೆ ಇತರ ಸದಸ್ಯರು ಇದ್ದರ

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!