ಲಾಕ್ ಡೌನ್ : ಆರ್ಥಿಕ ನೆರವಿಗೆ ಸರ್ಕಾರ ಮುಂದಾಗಲು ಬಿ. ಎಸ್. ಪಿ ಆಗ್ರಹ

ಸಿಂಧನೂರು : ದೇಶ ಮತ್ತು ರಾಜ್ಯದಲ್ಲಿ ಕೊರೋನಸೋಂಕಿನ 2 ನೇ ಅಲೆ ತೀವ್ರತೆಯಿಂದಾಗಿ  ದಿನಕ್ಕೆ ನೂರಾರು ಜನರ ಸಾವು ನೋವಿನ ಪ್ರಕರಣಗಳು ಹೆಚ್ಚಾಗುತ್ತಲಿರುವದು ಒಂದು ಕಡೆಯಾದರೆ ಮತ್ತೊಂದು ಕಡೆ ಬೀದಿ ವ್ಯಾಪಾರಿಗಳು. ಆಟೋ ಚಾಲಕರು.ಕ್ಶೌರಿಕರು ಮತ್ತು ಕೂಲಿಕಾರ್ಮಿಕರು ಕೈಗೆ ಕೆಲಸವಿಲ್ಲದ ಜೀವನ ನಿರ್ವಹಣೆ ಮಾಡಲು ತತ್ತರಿಸುತ್ತಿದ್ದಾರೆ ಕೂಡಲೇ ಸರ್ಕಾರ ಆರ್ಥಿಕ ನೆರವಿಗೆ ಮುಂದಾಗಬೇಕು ಎಂದು  ಬಹುಜನ ಸಮಾಜ ಪಕ್ಷ ತಾಲೂಕ ಘಟಕವು ತಹಶಿಲ್ದಾರರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿತುರಾಜ್ಯದಲ್ಲಿ 14 ದಿನಗಳ ಕಾಲ ತಮ್ಮ ಸರ್ಕಾರ ಕಟ್ಟು ನಿಟ್ಟಿನ ಲಾಕ್ ಡೌನ್ ಜಾರಿಮಾಡಿದೆ.ಇದರಿಂದ ಬೀದಿ ವ್ಯಾಪಾರಿಗಳಿಗೆ.ಮತ್ತು ಆಟೋ ರಿಕ್ಷಾ ಚಾಲಕ ರಿಗೆ ಸೇರಿದಂತೆ ಕೂಲಿಕಾರರಿಗೆ ಹಾಗೂ ಇನ್ನಿತರ ವೃತ್ತಿ ಕೆಲಸ ಮಾಡಿಕೊಂಡು ಉಪ ಜೀವನ ಮಾಡುವ ಬಡ ಜನರಿಗೆ ತುಂಬಾ ಸಂಕಷ್ಟ ಎದುರಾಗಿದೆ. ಲಾಕ್ ಡೌನ್ ಜಾರಿಯಿಂದಾಗಿ ಕುಟುಂಬದ ಯಾರೊಬ್ಬರೂ ಕೆಲಸಕ್ಕೆ ಹೋಗದೆ ಮನೆಯಲ್ಲಿ ಕುಳಿತು ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಡಲು ಕೆಲಸವಿಲ್ಲದೆ.ಜೀವನ ನಿರ್ವಹಣೆ ಮಾಡಲು ಕೈಯಲ್ಲಿ ದುಡ್ಡು ಇರದೇ ತುಂಬಾ ತೊಂದರೆಯನ್ನು ಅನುಭಅವಿಸುತ್ತಿದ್ದಾರೆ.ಲಾಕ್ ಡೌನ್ ಜಾರಿಯಾದುದ್ದರಿಂದ ಜನರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತಷ್ಟು ದುಬಾರಿಯಾಗಿವೆ.ಜನ ಸಾಮಾನ್ಯರು ಮತ್ತು ಬಡವರು ಏನನ್ನು ಕೊಂಡುಕೊಳ್ಳದ ಸ್ಥಿತಿ ಉಂಟಾಗಿದೆ. ರಾಜ್ಯಾದ್ಯಂತ ಕೆಲವು ಕಿರಾಣಿ ಅಂಗಡಿಗಳ ಮಾಲೀಕರಿಗೇ ಮತ್ತು ದಿನಸಿ ವ್ಯಾಪಾರಸ್ತರಿಗೆ ಸುಗ್ಗಿ ಸಮಯ ಒಲಿದು ಬಂದಂತೆ ಆಗಿದೆ. ಜನ ಬಳಕೆ ಅಗತ್ಯ ವಸ್ತುಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಾ ಸಾಮಾನ್ಯ ಜನರನ್ನು ಸುಲಿಗೆ ಮಾಡುವ ಧಂದೆಗೆ ಇಳಿದಿದ್ದಾರೆ.ಇಂತಹ ವ್ಯಾಪಾರಸ್ಥರ ಅಕ್ರಮ ಚಟುವಟಿಕೆಗಳಿಗೆ ಇವತ್ತು ಕಡಿವಾಣ ಹಾಕಲು ಯಾವಬ್ಬ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ ಎನ್ನುವದು ದೊಡ್ಡ ದುರಂತ .ಇಂತಹ ದುರಂತದ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕಾಗಿದೆ ಎಂದು ತಿಳಿಸಿದರುನಗರ ಮತ್ತು ಗ್ರಾಮೀಣ ಪ್ರದೇಶಗಳ ಜನರ ಬದುಕಿನ ನಿರ್ವಹಣೆಗೆ ತಕ್ಷಣ ಸರ್ಕಾರ  ಪ್ರತಿ ಕುಟುಂಬಗಳಿಗೆ 25.000 ರೂಪಾಯಿಗಳನ್ನು ಒದಗಿಸಿ ಕೊಡಬೇಕು.ಪಡಿತರ ಚೀಟಿ ಹೊಂದಿದ ಪ್ರತಿಯೊಂದು ಕುಟುಂಬದ ಪ್ರತಿಯೊಬ್ಬರಿಗೂ 10 ಕೆ ಜಿ ಅಕ್ಕಿ ಸೇರಿದಂತೆ ಇನ್ನಿತರ ದವಸ ಧಾನ್ಯಗಳನ್ನು ಕೂಡಲೇ ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು. ಪ್ರತಿಯೊಂದು ತಾಲೂಕ ಆಸ್ಪತ್ರೆಯಿಂದ ಜನರಿಗೆ ಉಚಿತ ಮಾಸ್ಕ್ ಹಾಗೂ ಸ್ಯಾನಿ ತೈಸರಗಳನ್ನು ವಿತರಣೆ ಮಾಡಬೇಕು ಎಂದು ಆಗ್ರಹಿಸಿದರುಈ ಸಂದರ್ಭದಲ್ಲಿ ತಾಲೂಕ ಘಟದ ಅಧ್ಯಕ್ಷ ಹುಲುಗಪ್ಪ ಮಲ್ಲಾಪುರ ಉಪಾಧ್ಯಕ್ಷ ವೀರೇಶ ಕೆ ಹಂಚಿನಾಳ.ನಗರ ಘಟಕದ ಅಧ್ಯಕ್ಷ ಚನ್ನಬಸವ ಹಮಿನಗಡ ಉಪಸ್ಥಿತರಿದ್ದರು

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!