ಲೋಕಕಲ್ಯಾಣಕ್ಕಾಗಿ ಹೋಮ


ಕೊಪ್ಪಳ. ಭಾಗ್ಯನಗರದ ಶಾಸ್ತ್ರೀ ಕಾಲೋನಿಯಲ್ಲಿನ ವಿನಾಯಕ ಭಟ್ಟ ಸಿದ್ಧಾಂತಿ ಇವರ ಮನೆಯಲ್ಲಿ ಲೋಕಕಲ್ಯಾಣಕ್ಕಾಗಿ ಮೃತ್ಯುಂಜಯ ಹೋಮವು ಜರುಗುತ್ತಿದೆ. ಇಂದು ನೆಡೆದ 101 ನೇ ಹೋಮ ಕಾರ್ಯಕ್ರಮದಲ್ಲಿ ಶ್ರೀ ಸದ್ಗುರು ದತ್ತಪ್ಪಯ್ಯ ಸ್ವಾಮಿಗಳು ಭೀಮಾಮಾಶಂಕರ ಮಠ ಸಿಂಧಗಿ ಸಾನಿಧ್ಯ ವಹಿಸಿದ್ದರು. ಇಂದು ಹೋಮದ ನಿಮಿತ್ಯ 121 ವಿವಿಧ ಊರುಗಳಲ್ಲಿ ಏಕಕಾಲಕ್ಕೆ ರುದ್ರಾಭಿಷೇಕ ಜರುಗಿದ್ದು ವಿಶೇಷ. ಲೋಕಕಲ್ಯಾಣಕ್ಕಾಗಿ ಜರುಗುವ ಈ ಹೋಮದ ಮೂಲಕ ಸಮಸ್ತ ಜನರ ಆರೋಗ್ಯ ಸದೃಢವಾಗಿರಲಿ , ಲೋಕಕ್ಕೆ ಕಲ್ಯಾಣವಾಗಲಿ ಎಂಬುದು ಇದರ ಉದ್ದೇಶ ಎಂದು ವಿನಾಯಕ ಭಟ್ಟ ಸಿದ್ಧಾಂತಿ ಹೇಳುತ್ತಾರೆ. ಸುತ್ತಮುತ್ತಲಿನ ಜನರು ಈ ಹೋಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!