ವನ್ಯಾ ಸ್ಟೀಲ್ಸ್ ವತಿಯಿಂದ ೧೨ ಆಕ್ಸೀಜನ್ ಕನ್ಸಂಟ್ರೇಟರ್


ಕೊಪ್ಪಳ :ಕೋವಿಡ್-೧೯ ಸೋಂಕಿತರ ಚಿಕಿತ್ಸೆಗೆ ವನ್ಯಾ ಸ್ಟೀಲ್ಸ್ ಪ್ರೈ.ಲಿ ಹೊಸಪೇಟೆ ಇವರು ೧೨ ಆಕ್ಸೀಜನ್ ಕನ್ಸಂಟ್ರೇಟರ್ (Oxygen Concentrator) ನ್ನು ಉಚಿತವಾಗಿ ಇಂದು (ಮೇ ೧೨) ಜಿಲ್ಲಾಡಳಿತ ಭವನದಲ್ಲಿ ಡಿ.ಸಿ ಯವರಿಗೆ ನೀಡಿದರು.
ಕೋವಿಡ್-೧೯ರ ೨ನೇ ಅಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ವನ್ಯಾ ಸ್ಟೀಲ್ಸ್ ಪ್ರೈ.ಲಿ ಹೊಸಪೇಟೆ ಇವರ ವತಿಯಿಂದ ೧೨ ಆಕ್ಸೀಜನ್ ಕನ್ಸಂಟ್ರೇಟರ್ (Oxygen Concentrator)ನ್ನು ಉಚಿತವಾಗಿ ಸೋಕಿತರ ಚಿಕಿತ್ಸಾ ಸೌಲಭ್ಯಕ್ಕಾಗಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರಿಗೆ ಹಸ್ತಾಂತರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀದರ್, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ.ಲಿಂಗರಾಜು ಹಾಗೂ ವನ್ಯಾ ಸ್ಟೀಲ್ಸ್ ಪ್ರೈ.ಲಿ ಸಂಸ್ಥೆಯವರರು ಹಾಗೂ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!