ವಾಲ್ಮೀಕಿ ಸಮಾಜಕ್ಕೆ ಕೊಟ್ಟ ಮಾತು ಸರ್ಕಾರ ಮರೆತು ಬಿಟ್ಟಿದೆ

 

ಯಲಬುರ್ಗಾ: ಮೀಸಲಾತಿ ಬಗ್ಗೆ ನಮ್ಮ ಸಮಾಜಕ್ಕೆ ಬಹಳ ಅನ್ಯಾಯವಾಗಿದೆ. ಸಮಾಜದವರು ಜಾಗೃತರಾಗಿ ಮೀಸಲಾತಿ ಪಡೆಯಲು ಹೋರಾಟಕ್ಕೆ ಮುಂದಾಗಿ ಎಂದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ತಾಲೂಕಿನ ವಜ್ರಬಂಡಿ ಗ್ರಾಮದಲ್ಲಿ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕಾ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ನಾಯಕ ಜನಜಾಗೃತಿ ಸಮ್ಮೇಳನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದಲ್ಲಿ ವಾಲ್ಮೀಕಿ ಸಮಾಜಕ್ಕೆ ೭.೫ ಮೀಸಲಾತಿ ಹೆಚ್ಚಿಸುವಂತೆ ಕೇಂದ್ರ ಮತ್ತು ರಾಜ್ಯದ ಸರ್ಕಾರಗಳಿಗೆ ಮನವಿ ಸಲ್ಲಿಸಿದರೂ ಇದರ ಬಗ್ಗೆ ಸರ್ಕಾರವೂ ಯಾವು ನಿರ್ಧಾರ ಮಾಡಿಲ್ಲ ಜೊತೆಗೆ ಸಮಾಜಕ್ಕೆ ನೀಡಿದ ಮಾತುಗಳನ್ನು ಸರ್ಕಾರ ಮರೆತು ಬಿಟ್ಟಿದೆ ಎಂದರು.
ಮೀಸಲಾತಿ ವಿಚಾರದಲ್ಲಿ ನಮ್ಮ ಸಮಾಜದವರೇ ನಮಗೆ ದಾರಿ ತಪ್ಪಿಸುತ್ತಿದ್ದಾರೆ. ವಾಲ್ಮೀಕಿ ಸಮಾಜಕ್ಕೆ ೭.೫ ಮೀಸಲಾತಿಯನ್ನು ಅಧಿಕಾರಕ್ಕೆ ತಕ್ಷಣವೇ ಕೊಡಿಸುತ್ತೇನೆಂದು ಭರವಸೆ ನೀಡಿ ನಾಪತ್ತೆಯಾಗಿದ್ದಾರೆ. ಪೂರ್ಣಪ್ರಮಾಣ ಸರ್ಕಾರಗಳು ಇದ್ದರೂ ಕೂಡ ಮೀಸಲಾತಿ ವಿಚಾರದಲ್ಲಿ ನಿರ್ಲಕ್ಷ ವಹಿಸಿದ್ದಾರೆ. ಸಮಾಜದವರು ಜಾಗೃತರಾಗಿ ಹೋರಟ ಮಾಡಬೇಕು ಎಂದರು.
ಮಾಜಿ ಸಚಿವರಾದ ಬಸವರಾಜ ರಾಯರೆಡ್ಡಿ, ಶಿವರಾಜ ತಂಗಡಗಿ, ಶಾಸಕ ಅಮರೇಗೌಡ ಬಯ್ಯಾಪೂರ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಟಿ.ರತ್ನಾಕರ, ಮಾತನಾಡಿದರು. ವಾಲ್ಮೀಕಿ ಸಮಾಜದ ತಾಲೂಕ ಅಧ್ಯಕ್ಷ ಮಾನಪ್ಪ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ವಾಲ್ಮೀಕಿ ಸಮಾಜದ ಗುರುಗಳಾದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ. ರಾಜಾ ನವೀನಚಂದ್ರ ನಾಯಕ ಸಾನಿಧ್ಯ ವಹಿಸಿದ್ದರು. ಗ್ರಾಪಂ ಅದ್ಯಕ್ಷೆ ಸುಮಾ ಪಾಟೀಲ, ತಹಸೀಲ್ದಾರ್ ಶ್ರೀಶೈಲ ತಳವಾರ, ನಟ ಅಂಜನ್, ಗಣ್ಯರಾದ ರಾಜು ನಾಯಕ, ಬಸವರಾಜ ಉಳ್ಳಾಗಡ್ಡಿ, ವೀರನಗೌಡ ಬಳೂಟಗಿ, ಕೆರಿಬಸಪ್ಪ ನಿಡಗುಂದಿ, ರೂಪಾ ನಾಯಕ ಶರಣಪ್ಪ ಉಪ್ಪಾರ, ಪಕೀರಪ್ಪ ತಳವಾರ, ಶರಣಪ್ಪ ಗುಂಗಾಡಿ, ಈರಪ್ಪ ಕುಡಗುಂಟಿ, ಜೋಗದ ನಾರಾಯಣಪ್ಪ, ಹನಮೇಶ ನಾಯಕ, ಗಿರಿಜಾ ಸಂಗಟಿ, ಹೊಳಿಯಮ್ಮ ಪಾಟೀಲ, ಗುಂಡನಗೌಡ ಪಾಟೀಲ, ಯಲ್ಲಪ್ಪ ಹಡಗಲಿ, ಹಂಚ್ಯಾಳಪ್ಪ ತಳವಾರ, ಬೀಮಣ್ಣ ಹವಳಿ, ಶರಣಪ್ಪ ತಳವಾರ ಇದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!