ವಿದ್ಯಾರ್ಥಿಗಳಿಗೆ ಐ.ಎ.ಎಸ್, ಐ.ಪಿ.ಎಸ್, ಕೆ.ಎ.ಎಸ್ ಪರೀಕ್ಷೆಗಳ ಕುರಿತು ಜಿಲ್ಲಾಧಿಕಾರಿಯಿಂದ ತರಬೇತಿ

ಕೊಪ್ಪಳ: ವಿಡಿಯೋಸಂವಾದದಲ್ಲಿ ಜಿಲ್ಲಾಧಿಕಾರಿಗಳಾದ ವಿಕಾಸ್ ಕಿಶೋರ್ ಸುರಳ್ಕರ್ ಐ.ಎ.ಎಸ್ ಹಾಗೂ ಹೇಮಂತ್ ಎನ್ , ಪ್ರೊಬೆಷನರಿ ಐ.ಎ.ಎಸ್ ಅಧಿಕಾರಿ ( ೨೦೨೦ ನೇ ಬ್ಯಾಚ್ ) ಆಸಕ್ತ ಅಭ್ಯರ್ಥಿಗಳಿಗೆ ನಾಗರಿಕ ಸೇವೆಗಳ ಪರೀಕ್ಷೆ ಕುರಿತಾದ ಮಾಹಿತಿ
ದ್ವಿತೀಯ ಪಿಯುಸಿ ಓದುತ್ತಿರುವ ಹಾಗೂ ಹೆಚ್ಚಿನ ವಿದ್ಯಾರ್ಹತೆ ಹೊಂದಿದ ವಿದ್ಯಾರ್ಥಿಗಳ ಬೇಡಿಕೆ ಮೇರೆಗೆ ಜಿಲ್ಲಾಡಳಿತದ ವತಿಯಿಂದ ಐ.ಎ.ಎಸ್, ಐ.ಪಿ.ಎಸ್, ಕೆ.ಎ.ಎಸ್ ಸೇರಿದಂತೆ ವಿವಿಧ ನಾಗರಿಕ ಸೇವೆಗಳ ಪರೀಕ್ಷೆಗಳ ಕುರಿತು ದಿ ೧೯-೦೬-೨೦೨೧ ರಂದು ವಿಡಿಯೋ ಸಂವಾದದ ಮೂಲಕ ಮಾಹಿತಿಯನ್ನು ನೀಡಲಾಗುತ್ತಿದೆ.
ದಿ ೧೯-೦೬-೨೦೨೧ ರಂದು ಮಧ್ಯಾಹ್ನ ೦೩.೩೦ ಗಂಟೆಯಿಂದ ಸಂಜೆ ೦೫.೦೦ ಗಂಟೆಯವರೆಗೆ ನಡೆಯಲಿರುವ ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿಗಳಾದ ವಿಕಾಸ್ ಕಿಶೋರ್ ಸುರಳ್ಕರ್ ಐ.ಎ.ಎಸ್ ಹಾಗೂ ಹೇಮಂತ್ ಎನ್ , ಪ್ರೊಬೆಷನರಿ ಐ.ಎ.ಎಸ್ ಅಧಿಕಾರಿ ( ೨೦೨೦ ನೇ ಬ್ಯಾಚ್ ) ಇವರು ಆಸಕ್ತ ಅಭ್ಯರ್ಥಿಗಳಿಗೆ ನಾಗರಿಕ ಸೇವೆಗಳ ಪರೀಕ್ಷೆ ಕುರಿತಾದ ಮಾಹಿತಿಯನ್ನು ನೀಡುವರು.
ದ್ವಿತೀಯ ಪಿಯುಸಿ ಓದುತ್ತಿರುವ ಮತ್ತು ಪೂರ್ಣಗೊಳಿಸಿದ, ಪದವಿ ಕೊನೆಯ ವರ್ಷ ಓದುತ್ತಿರುವ ಹಾಗೂ ಪದವಿ ಪಡೆದ ಆಸಕ್ತ ಅಭ್ಯರ್ಥಿಗಳು ದಿನಾಂಕ : ೧೮-೦೬-೨೦೨೧ ರ ಸಾಯಂಕಾಲ ೦೫.೦೦ ಗಂಟೆಯ ಒಳಗೆ ತಮ್ಮ ಹೆಸರು, ವಿಳಾಸ , ಮೊಬೈಲ್ ಸಂಖ್ಯೆ , ವಯಸ್ಸು, ವಿದ್ಯಾರ್ಹತೆಯ ಮಾಹಿತಿಯೊಂದಿಗೆ ಮೊ.ಸಂ. ೮೭೯೨೦-೧೧೮೩೫ ಗೆ ವಾಟ್ಸಪ್ ಮೂಲಕ ನೋಂದಣಿ ಮಾಡಿಕೊಳ್ಳುವುದು.
ನೋಂದಣಿ ಮಾಡಿಕೊಂಡವರಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು ಮತ್ತು ಲಿಂಕ್ ಅನ್ನು ನೋಂದಣಿ ಮಾಡಿಕೊಂಡವರ ವಾಟ್ಸಪ್ ನಂಬರ್‌ಗೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆ ನೀಡಿದ್ದಾರೆ

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!