ವಿಧಾನ ಸಭಾ ಕ್ಷೇತ್ರಗಳನ್ನು ಮರವಿಂಗಡನೆಗೆ ಒತ್ತಾಯ

ಅಖಿಲ ವಾಣಿ ಸುದ್ದಿ
ಗಂಗಾವತಿ: ಭೌಗೋಳಿಕ ಪ್ರದೇಶ ಹಾಗೂ ಜನಸಂಖ್ಯೆ ಆಧಾರದ ಮೇಲೆ ಜಿಲ್ಲಾ ಪಂಚಾಯತ, ತಾಲ್ಲೂಕು ಪಂಚಾಯತ, ಕ್ಷೇತ್ರಗಳನ್ನು ಜನತೆಗೆ ಅನುಕೂಲವಾಗು ದೃಷ್ಟಿಯಿಂದ. ಮರವಿಂಗಡಣೆ ಮಾಡಿರುವುದಕ್ಕೆ ವೈಯಕ್ತಿಕವಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಜಿಲ್ಲಾ ಪಂಚಾಯತ ಸೇವಾಕಾಂಕ್ಷಿ,ನಿವೃತ್ತ ಶಿಕ್ಷಕ ಬಸವರಾಜ್ ಮ್ಯಾಗಳಮನಿ ಹೇಳಿದರು.
ಮುಂದಿನ ೨೦೨೩ ರಲ್ಲಿ ನಡೆಯುವ ಕರ್ನಾಟಕ ಸಾರ್ವತ್ರಿಕ ವಿಧಾನ ಸಭಾ ಕ್ಷೇತ್ರದ ಚುನಾವಣೆ, ಭೌಗೋಳಿಕ ಪ್ರದೇಶ, ಜನಸಂಖ್ಯೆ, ಹಾಗೂ ತಾಲ್ಲೂಕು ಕಚೇರಿ, ಒಳಪಡಿಸುವಂತೆ ಮರವಿಂಗಡನೆ ಮಾಡಬೇಕೆಂದು ಒತ್ತಾಯಿಸುತ್ತೇನೆ. ೧೯೭೮ ರಲ್ಲಿ ೨೨೪ ಕ್ಷೇತ್ರಗಳಿದ್ದು ಅಂದಿನ ಜನಸಂಖ್ಯೆ ಕಡಿಮೆ ಇದ್ದು ಇಂದಿಗೆ ಸುಮಾರು ೨ ಎರಡು ಕೋಟಿ ಜನಸಂಖ್ಯೆ ಹೆಚ್ಚಾಗಿರುವ ಸಾದ್ಯತೆ ಕಂಡು ಬರುತ್ತದೆ. ೨೦೦೮ ರಲ್ಲಿ ಕ್ಷೇತ್ರಗಳ ಮರವಿಂಗಡನೆ ಮಾಡಿದರೂ ಜನಸಂಖ್ಯೆ ಅಧಾರದ ಮೇಲೆ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಿರುವುದಿಲ್ಲ.ಅದರಿಂದ ಜನಸಂಖ್ಯೆ ಆಧಾರವನ್ನಿಟ್ಟು ಕೊಳ್ಳವುದರ ಜೊತೆಗೆ ತಾಲ್ಲೂಕು ಕೇಂದ್ರ ಸಮೀಪ ಇರುವಂತೆ ನೋಡಿಕೊಳ್ಳಬೇಕು. ಗಂಗಾವತಿ ವಿಧಾನ ಸಭಾ ಉದಾ : ತೆಗೆದುಕೊಂಡರೆ,ಕಿನ್ನಾಳ ಮತ್ತು ಇರಕಲ್ಲಗಡಾ ಕೊಪ್ಪಳ ತಾಲ್ಲೂಕಿನ ಪ್ರದೇಶವಾಗಿದ್ದು ಅಲ್ಲಿನ ಜನರ ತಾಲ್ಲೂಕಿನ ಕೆಲಸಗಳನ್ನು ಮಾಡಿಕೊಳ್ಳಲು ಗಂಗಾವತಿ ವಿಧಾನ ಸಭಾ ಕ್ಷೇತ್ರದ ಸದಸ್ಯರು ಹತ್ತಿರ ಇರಬೇಕಾಗುತ್ತದೆ. ಇರಕಲಗಾಡ ಕೊಪ್ಪಳಕ್ಕೆ ೧೪ ಕಿಮೀ ಮೀಟರ್ ಇದ್ದು ಗಂಗಾವತಿ ವಿಧಾನ ಸಭಾ ಕ್ಷೇತ್ರದ ಶಾಸಕರನ್ನು ಬೇಟಿಯಾಗಲು ೫೦ ಕಿಮೀ ದೂರದಿಂದ ಇರಬೇಕಾಗುತ್ತದೆ. ಅದರಿಂದ ಜನರು ತೀವ್ರ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ತಾಲ್ಲೂಕಿಗೆ ಒಳಪಡುವಂತಯೊ ವಿಧಾನ ಸಭಾ ಕ್ಷೇತ್ರಗಳನ್ನು ಮರವಿಂಗಡನೆ ಮಾಡಿ, ಕರ್ನಾಟಕ ರಾಜ್ಯ ವಿಧಾನ ಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗುವುದರಿಂದ ಅಧಿಕಾರ ವಿಕೇಂದ್ರೀಕರಣ ಜೊತೆಗೆ ಜನತೆಗೆ ಬಹಳ ತೊಂದರೆಯಾಗಲಿದೆ.೨೦೨೩ ರ ಸಾರ್ವತ್ರಿಕ ಚುನಾವಣೆ ಒಳಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ, ಚುನಾವಣಾ ಆಯೋಗ ಪಡೆಯಲು ಆಗಿನಿಂದಲೂ ಸಿದ್ದತೆಯನ್ನು ಕಾನೂನು ಪ್ರಕಾರ ವಿಧಾನ ಸಭಾ ಕ್ಷೇತ್ರಗಳನ್ನು ಮರವಿಂಗಡನೆ ಮಾಡಬೇಕೆಂದು ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಹನುಮಂತಪ್ಪ ನಾಯಕ
ಹರೀಶ್,ಚೌವಣ್ಣ ,ಲಕ್ಷ್ಮಿಕಾಂತ್ ಹೊಸಕೆರೆ, ದೇವಪ್ಪ ಬಡಿಗೇರ ವಕೀಲರು, ಇತರರು ಇದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!