ವಿರೋಧ ಪಕ್ಷದ ನಾಯಕರ ಘನತೆಗೆ ಶೋಭೆಯಲ್ಲ : ಕೆ.ವಿರೂಪಾಕ್ಷಪ್ಪ

ಅಖಿಲ ವಾಣಿ ಸುದ್ದಿ
ಸಿಂಧನೂರು : ರಾಜ್ಯದಲ್ಲಿ ಅತಿ ವೇಗವಾಗಿ ಹಬ್ಬುತ್ತಿರುವ ಕರೋನ ಸೋಂಕು ೨ ನೇ ಅಲೆಯನ್ನು ತಡೆಗಟ್ಟಲು ಮಾಜಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ. ಹೆಚ್. ಡಿ. ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸರ್ಕಾರಕ್ಕೆ ಉತ್ತಮ ಸಲಹೆ ನೀಡುವ ಬದಲಿಗೆ ಮುಖ್ಯ ಮಂತ್ರಿ ಯಡಿಯೂರಪ್ಪ ನವರನ್ನು ಗುರಿಯಾಗಿಸಿಕೊಂಡು ಇಲ್ಲ ಸಲ್ಲದ ವಿಷಯಗಳಿಂದ ಟೀಕಿಸುವುದು ವಿರೋಧ ಪಕ್ಷದ ನಾಯಕರ ಘನತೆಗೆ ಶೋಭೆಯಲ್ಲ ಎಂದು ಕೊಪ್ಪಳದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು
ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತ ರಾಜ್ಯದಲ್ಲಿ ಕರೋನ ಸೋಂಕಿಗೆ ಬಲಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಮುಖ್ಯ ಮಂತ್ರಿ ಬಿ. ಎಸ್. ಯಡಿಯುರಪ್ಪ ಅವರು ತಮ್ಮ ಆರೋಗ್ಯ ಮತ್ತು ಜೀವ ರಕ್ಷಣೆಗಾಗಿ ವೀಡಿಯೋ ಸಂವಾದ ನಡೆಸುವ ಮೂಲಕ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ರಾಜ್ಯದಲ್ಲಿ ಕರೋನ ಸೋಂಕು ನಿಯಂತ್ರಣ ಕ್ಕಾಗೀ ಅಗತ್ಯ ಕ್ರಮ ಕೈಗೊಂಡು ತಮ್ಮ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದಾರೆ.ಆದರೆ ವಿರೋಧ ಪಕ್ಷದ ನಾಯಕರು ವೃತ ಕಾಲಹರಣದಲ್ಲಿ ತೊಡಗಿ ಮುಖ್ಯ ಮಂತ್ರಿಗಳ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಸರ್ಕಾರದೊಂದಿಗೆ ಎಲ್ಲರು ಸಹಕಾರ ನೀಡಿ ಸೋಂಕು ನಿಯಂತ್ರಣ ನಿಯಮಗಳನ್ನು ಪಾಲಿಸಿದರೆ ಮಾತ್ರ ಕರೋನ ಸೋಂಕನ್ನು ತಡೆಯಲು ಸಾಧ್ಯ. ಮೇ ೧ ರಿಂದ ೧೮ ವರ್ಷದ ಮೆಲ್ಪಟ್ಟವರು ಕರೋನ ತಡೆ ಸೋಂಕಿನ ಲಸಿಕೆಯನ್ನು ಹಾಕಿಸಿಕೊಂಡು ಮುಖಕ್ಕೆ ಮಾಸ್ಕ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು
ನೀರಿನ ರಾಜಕೀಯ ಬಿಡಬೇಕು : ಅವಳಿ ಜಿಲ್ಲೆಗಳಲ್ಲಿ ರೈತರು ಬೆಳೆದ ಬೇಸಿಗೆ ಕಾಲದ ಭತ್ತದ ಬೆಳೆಗಳ ರಕ್ಷಣೆಗೆ ತುಂಗಭದ್ರಾ ಜಲಾಶಯ ಎಡದಂಡೆ ನಾಲೆ ಗೆ ಸಮರ್ಪಕವಾಗಿ ನೀರು ಹರಿಸುವಂತೆ ನಾನು ಸೇರಿದಂತೆ ಕನಕಗಿರಿ ಶಾಸಕ ಬಸವರಾಜ ದಡೆ ಸುಗೂರು. ಕೃಷಿ ಆಯೋಗದ ಅಧ್ಯಕ್ಷ ಹನುಮನ ಗೌಡ ಬೆಳಗುರ್ಕಿ. ಪರಣ್ಣ ಮನವಳ್ಳಿ ಸೇರಿದಂತೆ ಬೆಂಗಳೂರಿನಲ್ಲಿ ಮುಖ್ಯ ಮಂತ್ರಿ ಯಡಿಯೂರಪ್ಪ ನವರನ್ನ ಭೇಟಿ ಮಾಡಿ ರೈತರು ಬೆಳೆದ ಭತ್ತದ ಬೆಳೆಗಳ ರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿಕೊಂಡಿದ್ದೇವೆ. ಮಸ್ಕಿ ಉಪ ಚುನಾವಣೆ ಪ್ರಚಾರ ನಿಮಿತ್ಯ ಮಸ್ಕಿಗೆ ಬಂದಾಗಲೂ ರೈತರ ಬೆಳೆಗಳಿಗೆ ನೀರು ಹರಿಸುವಂತೆ ಗಮನ ಸೆಳೆಯ ಲಾಗಿತ್ತು. ನಮ್ಮ ಮನವಿಗೆ ಸ್ಪಂದಿಸಿ ತುಂಗಭದ್ರಾ ಜಲಾಶಯ ಎಡದಂಡೆ ಕಾಲುವೆಗೆ ನೀರು ಹರಿಸಿ ರೈತರ ನೆರವಿಗೆ ಮುಖ್ಯಮಂತ್ರಿಗಳು ಬಂದಿದ್ದಾರೆ. ಆದರೆ ಶಾಸಕ ವೆಂಕಟರಾವ ನಾಡಗೌಡ ಈ ಹಿಂದೆ ಈ ರಾಜ್ಯದ ಸಚಿವರಿದ್ದಾಗ ರೈತರ ಬೆಳೆಗಳಿಗೆ ನೀರು ಹರಿಸಲು ಆಗಲಿಲ್ಲ.ಈಗ ರೈತರ ಬೆಳೆಗಳಿಗೆ ನೀರು ಹರಿಸಲು ನಾನೇ ಕಾರಣ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ. ಶಾಸಕರು ಮತ್ತೊಮ್ಮೆ ನೀರಿನ ರಾಜಕಾರಣ ಮಾಡುವದು ಬಿಟ್ಟು ಉಳಿದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನ ಹರಿಸಲಿ ಎಂದು ಕುಟುಕಿದರು
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಘಟಕದ ಕಾರ್ಯಕಾರಣಿ ಸದಸ್ಯ ಕೊಲ್ಲಶೇಷಗಿರಿರಾವ್. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ. ದೊಡ್ದ ಬಸವರಾಜ. ಗ್ರಾಮೀಣ ಮಂಡಲ ಅಧ್ಯಕ್ಷ ಹನುಮೇಶ ಸಾಲಗುoದ.ಸೇರಿದಂತೆ ಇತರರು ಇದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!