ವಿಶ್ವದ ಮಹಾಜ್ಞಾನಿ ಪ್ರತಿಯೊಬ್ಬ ವ್ಯಕ್ತಿಗೂ ಇವರೇ ಸ್ಪೂರ್ತಿ : ರಮೇಶ ಸುಗ್ಗೇನಹಳ್ಳಿ

ಅಖಿಲ ವಾಣಿ ಸುದ್ದಿ
ಕಾರಟಗಿ : ಬಾಬ ಸಾಹೇಬರು ಎಸ್ಸಿ, ಎಸ್ಟಿಗಳಿಗೆ ಮಾತ್ರ ಮೀಸಲಿಲ್ಲ, ಅವರು ಪ್ರತಿಯೊಬ್ಬ ಭಾರತೀಯರ ಸ್ವತ್ತು, ಇಡಿ ವಿಶ್ವವೇ ಅವರ ಜ್ಞಾನವನ್ನು ಕೊಂಡಾಡುತ್ತಿದೆ, ಅಲ್ಲದೆ ಅವರ ಜನ್ಮದಿನವನ್ನು ವಿಶ್ವದ ಮಹಾನ್ ಜ್ಞಾನಿ ದಿನವನ್ನಾಗಿ ಆಚರಣೆ ಮಾಡುತ್ತಿದೆ. ಪ್ರತಿಯೊಬ್ಬ ಸಾಧಕರಿಗೂ ಈ ಮಹಾನ್ ವ್ಯಕ್ತಿ ಸ್ಪೂರ್ತಿದಾಯಕ ರಾಗಿದ್ದಾರೆ ಎಂದು ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ಜರುಗಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸರಕಾರಿ ನೌಕರರ ಸಂಘ, ದಲಿತ ಪರ ಸಂಘಟನೆಗಳು, ರೈತ ಪರ ಸಂಘಟನೆಗಳ ಸಹಯೋಗದಲ್ಲಿ ಜರುಗಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೧೩೦ನೇ ಜಯಂತ್ಯೂತ್ಸವದಲ್ಲಿ ಮಾತನಾಡಿದರು.
ವಿಶ್ವದಲ್ಲಿ ಅವರ ಜ್ಞಾನವನ್ನು ಮೀರಿಸಿದ ವ್ಯಕ್ತಿಗಳಿಲ್ಲ, ದೇಶದ ಸಂವಿಧಾನವನ್ನು ರಚಿಸಿದ ಮಹಾನ್ ವ್ಯಕ್ತಿ ಯವರು, ಮತಪೆಟ್ಟಿಗೆಯಲ್ಲಿ ರಾಜನನ್ನು ಹುಟ್ಟಿಸಿ ದೇಶವಾಳುವ ಕಾನೂನು ನೀಡಿದ ಮಹಾನ್ ಪುರುಷರವರು ಎಂದು ಹೇಳಿದರು.
ನಂತರ ಪ್ರೊ.ಎಸ್.ವಿ ಚಂದ್ರಶೇಖರ್ ಮರಿಯಮ್ಮನಹಳ್ಳಿ ಮಾತನಾಡಿ ಡಾ.ಬಿ.ಆರ್ ಅಂಬೇಡ್ಕರ್ ಅವರು ವಿಶ್ವದ ಮಹಾನ್ ಶಕ್ತಿಯಾಗಿದ್ದಾರೆ, ಅವರ ಜ್ಞಾನ, ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬ ವ್ಯಕ್ತಿಯು ತಿಳಿದುಕೊಳ್ಳಬೇಕಾಗಿದೆ. ಮತದಾನ ಹಾಕುವ ಹಕ್ಕನ್ನು ನೀಡಿದ ಮಹಾನ್ ವ್ಯಕ್ತಿ, ಮಹಿಳೆಯರಿಗೆ ವಿಶಿಷ್ಟ ಸ್ಥಾನಮಾನಗಳನ್ನು ನೀಡುವಲ್ಲಿ ಇವರ ಪರಿಶ್ರಮ ಅಧಿಕವಾಗಿದೆ, ಹಳ್ಳಿಯಿಂದ ದಿಲ್ಲಿಯವರೆಗೂ ದೇಶದ ಪ್ರತಿಯೊಬ್ಬ ಪ್ರಜೆಯೂ ಪಾಲಿಸುವಂತೆ ಮಹಾನ್ ಸಂವಿಧಾನವನ್ನು ರಚಿಸಿದ ಜ್ಞಾನಿ ಇವರು, ಇಂತಹ ಮಹಾನ್ ಜ್ಞಾನಿಯನ್ನು ಒಂದು ಜಾತಿಗೆ ಮೀಸಲಿಡದೆ ಸರ್ವಧರ್ಮ ಜಾತಿಯವರು ಪೂಜಿಸುವಂತಾಗಬೇಕು, ಕೆಲವೊಂದು ವಿರೋಧಿ ಜನಗಳು ಅವರ ಬಗ್ಗೆ ಅಪಪ್ರಚಾರವನ್ನು ಮಾಡುತ್ತಿದ್ದಾರೆ ಆದರೆ ಕ್ಷಣಕ್ಷಣಕ್ಕೂ ಪ್ರಚಾರ ಹೊಂದುತ್ತಿರುವ ವ್ಯಕ್ತಿ ಅವರಾಗಿದ್ದಾರೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ಮಾತಿನಂತೆ ಒಂದು ಜಾತಿಯನ್ನು ಪರಿಗಣಿಸದೇ ದೇಶದ ಪ್ರತಿಯೊಬ್ಬ ವ್ಯಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾನೂನು ರಚನೆ ಮಾಡಿದ್ದಾರೆ ಪ್ರತಿಯೊಬ್ಬ ವ್ಯಕ್ತಿಯೂ ಕಾನೂನಿಗೆ ಬದ್ಧರಾಗಿದ್ದಾರ ಎಂದರು. ಅಲ್ಲದೆ ಸಂವಿಧಾನ ಮೀಸಲಾತಿ ಸಮಾನತೆ ವಿಷಯಗಳ ಕುರಿತು ಸುದೀರ್ಘವಾಗಿ ಉಪನ್ಯಾಸವನ್ನು ನೀಡಿದರು.
ಇದೇ ಸಂದರ್ಭದಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ದಡೇಸುಗೂರು, ಕಾರಟಗಿಯ ಪುರಸಭೆಯ ಅಧ್ಯಕ್ಷರಾದ ಶರಣೇಶ ಸಾಲೋಣಿ, ಪರಿಶಿಷ್ಟ ಜಾತಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕೋಬ ತೊಂಡಿಹಾಳ, ಮುಖಂಡರಾದ ಗದ್ದೆಪ್ಪ ನಾಯಕ, ಶಿವರೆಡ್ಡಿ ನಾಯಕ ವಕೀಲರು, ಕನಕಪ್ಪ ಕನಕಗಿರಿ, ನಾಗರಾಜ ಈಳಿಗನೂರು, ಹುಲ್ಲೇಶ, ವಿರುಪಾಕ್ಷಿ ಕುಂಟೋಜಿ, ಯಲ್ಲಪ್ಪ, ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಮುಖಂಡರು ಇದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!