ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಸವರಾಜ ಮ್ಯಾಗಳಮನಿ ಮನವಿ

ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬರುವ ಸಾರ್ವಜನಿಕರಿಗೆ ಈ ಕೊಠಡಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು
ಆಗುತ್ತಿಲ್ಲ.
ಕೂಡಲೇ ಈ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ದೊಡ್ಡ ಕೊಠಡಿಗೆ ಸ್ಥಳಾಂತರಿಸಬೇಕು ಎಂದು ಸಮಾಜ ಸೇವಕ ಬಸವರಾಜ ಮ್ಯಾಗಳಮನಿ ಮನವಿ ಮಾಡಿದರು.
ಅವರು ದಿ.ಮೇ ೨೦೨೧ ರಂದು ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಸಂದರ್ಭದಲ್ಲಿ ಮಾತನಾಡುತ್ತಿದ್ದರು.
ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಕೋವಿಡ್ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಸಾರ್ವಜನಿಕರು ಸರ್ಕಾರವನ್ನು ದೋಷಾರೋಪಣೆ ಮಾಡದೇ ಸ್ವತಃ ತಾವೇ ಜಾಗ್ರತೆಗೊಂಡು ಸರ್ಕಾರದಿಂದಾಗಲೀ ಅಥವಾ ಹಣದಿಂದಾಗಲೀ ಕೊರೋನಾವನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಆದರೆ ಸರ್ಕಾರದ ನಿಯಮಗಳಾದ ಮಾಸ್ಕ್ ಸ್ಯಾನಿಟೈಸರ್ ಮತ್ತು ಸಮಾಜಿಕ ಅಂತರ ಕಾಪಾಡಿಕೊಳ್ಳುವ
ಮೂಲಕ ಅಲ್ಲದೇ ಅನಾವಶ್ಯಕವಾಗಿ ಮನೆಯಿಂದ ಹೊರಬರದೇ ಕೊರೋ ನಾವನ್ನು ಹಿಮ್ಮೆಟ್ಟಿಸಬಹುದು ಮತ್ತು ನಮ್ಮ ಜೀವವನ್ನು ನಾವು ಕಾಪಾಡಿಕೊಂಡು ಇತರರ ಜೀವವನ್ನು ಉಳಿಸಲು ಸಹಕರಿಸಬೇಕಿದೆ ಎಂದರು.
ಹಾಗೆಯೇ ಎಲ್ಲಾ ಸಾರ್ವಜ ನಿಕರು
ಯಾವುದೇ ಭಯವಿಲ್ಲದೇ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೋವಿಡ್ ಹರಡುತ್ತಿರುವುದನ್ನು ನಿಯಂ ತ್ರಿಸಬೇಕು,
ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಲಸಿಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ತಿಳಿಸಿದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!