ಶಾಲೆಗೆ ರಸ್ತೆ ಕಲ್ಪಿಸಲು ಸ್ವಚ್ಛತೆ ಕಾರ್ಯ

ಕೊಪ್ಪಳ : ನಗರದ ಸರದಾರಗಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಅನುಕೂಲಕ್ಕಾಗಿ ದಕ್ಷಿಣ ಭಾಗದ ಗಾವಠಾಣಾ ಜಾಗೆಯಿಂದ ಶಾಲೆಗೆ ರಸ್ತೆ ನಿರ್ಮಿಸಲು ಗುರುವಾರದಂದು ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ಶಾಲೆಗೆ ೧೬ನೇ ವಾರ್ಡಿನ ಕುರುಬರ ಓಣಿಯಿಂದ ಬಹಳಷ್ಟು ಮಕ್ಕಳು ಶಾಲೆಗೆ ಬರುತ್ತಿದ್ದು ಮಕ್ಕಳು ಶಾಲೆಗೆ ಬರಲು ಸೂಕ್ತವಾದ ರಸ್ತೆಯ ವ್ಯವಸ್ಥೆ ಇರುವುದಿಲ್ಲ, ಮಕ್ಕಳು ಶಾಲೆಗೆ ಬರಲು ತಾಲೂಕಾ ಪಂಚಾಯಿತಿಯ ಮುಖ್ಯರಸ್ತೆ ಹಾಗೂ ತಾಲೂಕಾ ಕ್ರೀಡಾಂಗಣದ ಮೂಲಕ ಶಾಲೆಗೆ ಬರುತ್ತಿದ್ದು ಮುಖ್ಯ ರಸ್ತೆಯ ಮೂಲಕ ಶಾಲೆಗೆ ಮಕ್ಕಳು ಬರುವಾಗ ಅಪಘಾತವಾಗುವ ಭಯ ಕಾಡುತ್ತಿದೆ ಆದಕಾರಣ ಮಕ್ಕಳ ಸುರಕ್ಷತಾ ಹಿತದೃಷ್ಠಿಯಿಂದ ಶಾಲೆಯ ದಕ್ಷಿಣ ಭಾಗಕ್ಕೆ ಗಾವಠಾಣಾ ಪ್ರದೇಶದ ಮೂಲಕ ಶಾಲೆಗೆ ಒಂದು ರಸ್ತೆಯನ್ನು ಕಲ್ಪಿಸಿ ಅನುಕೂಲ ಮಾಡಿಕೊಡಲು ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ದಪ್ಪ ಚಿನ್ನೂರು, ಉಪಾಧ್ಯಕ್ಷೆ ಜರೀನಾಬೇಗಂ ಅರಗಂಜಿ, ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಗಮನಕ್ಕೆ ತರಲಾಗಿತ್ತು ಕಾಮಗಾರಿ ನಿರ್ಮಿಸಲು ತ್ವರಿತವಾಗಿ ನಿರ್ಮಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವುದಾಗಿ ತಿಳಿಸಿದ್ದರು ಎಂದು ನಗರಸಭೆ ಸದಸ್ಯ ಸೋಮಣ್ಣ ಹಳ್ಳಿ ಹೇಳಿದರು.
ಈ ಸಂದರ್ಭದಲ್ಲಿ ವಾರ್ಡಿನ ಸಾರ್ವಜನಿಕರು,ಹಿರಿಯರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!