ಶಿಕ್ಷಕರ ವೈಯಕ್ತಿಕ ಜೀವನ ತೆರೆದ ಪುಸ್ತಕದಂತಿರಬೇಕು : ಉಮೇಶ ಪೂಜಾರ್


ಕೊಪ್ಪಳ : ಸೆಪ್ಟೆಂಬರ್ ೫ ಬಂದರೆ ಮಾಜಿ ರಾಷ್ಟ್ರಪತಿ, ಶಿಕ್ಷಣತಜ್ಞ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತೇವಷ್ಟೇ. ಎಷ್ಟೋ ಸಂವತ್ಸರಗಳು ಉರುಳಿದರೂ ಇಂದಿಗೂ ಕೂಡ ಆದರ್ಶ ಶಿಕ್ಷಕ ಎಂದರೆ ರಾಧಾಕೃಷ್ಣನ್ ಅವರ ಹೆಸರು ಗುರು ಪರಂಪರೆಯ ನಮ್ಮ ದೇಶದಲ್ಲಿ ಗುರುಗಳು ಯಾವಾಗಲೂ ಇತರರಿಗೆ ಆದರ್ಶವಾಗಿರಬೇಕು ಎಂದು ಸಮಾಜ ಬಯಸುತ್ತದೆ ಎಂದು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಉಮೇಶ ಪೂಜಾರ್ ಹೇಳಿದರು.
ಅವರು ನಗರದ ಶಾದಿ ಮಹಾಲ್‌ನಲ್ಲಿ ಐಟಾ, ಎಸ್.ಐ.ಒ, ಮತ್ತು ಮುಸ್ಲಿಮ್ ಕ್ಷೇಮಾಭಿವೃಧಿ ನೌಕರರ ಸಂಘದ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು,
ಇಪ್ಪತ್ತು ವರ್ಷದ ಹಿಂದೆ ಗುರುವಿಗೆ ಅದೇ ರೀತಿಯ ಮಹತ್ವ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಗುರುವಿನ ಬಗ್ಗೆ ಮೊದಲಿದ್ದಷ್ಟು ಗೌರವ ಸಮಾಜಕ್ಕೆ ಇಲ್ಲ ಮತ್ತು ಅದು ಕಡಿಮೆಯಾಗುತ್ತಾ ಇದೆ. ಅದು ಹಿಂದಿನ ಸಮಾಜದಲ್ಲಿ ಶಿಕ್ಷಕರ ಬಗ್ಗೆ ಗೌರವ ಇತ್ತು. ಇಂದು ಶಿಕ್ಷಕ ಹುದ್ದೆ ಕೊಡುಕೊಳ್ಳುವ ವ್ಯವಹಾರಕ್ಕೆ ಸೀಮಿತವಾಗಿದೆ. ಶಿಕ್ಷಕರ ವೈಯಕ್ತಿಕ ಜೀವನ ತೆರೆದ ಪುಸ್ತಕದಂತೆ ಇರಬೇಕು. ಅದು ಉಳಿದಿವರಿಗೆ ಮಾದರಿಯಾಗಬೇಕು. ಇದು ನಿಜಕ್ಕೂ ದುರದೃಷ್ಟಕರ. ಸಮಾಜ ಸಹಾ ಹಿಂದೆ ಇದ್ದ ಗುರುವಿನಂತೆ ಈಗಿನ ಶಿಕ್ಷಕರು ಇರಬೇಕೆಂದು ಅಪೇಕ್ಷೆ ಮಾಡುವುದು ಸೂಕ್ತವಲ್ಲ. ಎಲ್ಲಾ ಕ್ಷೇತ್ರಗಳಲ್ಲಿಯೂ ಅಮೂಲಾಗ್ರ ಬದಲಾವಣೆ ಆಗುತ್ತಿದೆ ಅದರಂತೆ ಹೋಸ ಶಿಕ್ಷಣ ನೀತಿಯಿಂದ ಸಾಕಷ್ಟು ಮಕ್ಕಳಿಗೆ ಒಳ್ಳೆಯದಾಗಲಿದೆ ಎಂದರು.

ಯೂಸುಫೀಯ ಮಸೀದಿಯ ಇಮಾಮರು ಹಾಗೂ ಮುಫ್ತಿ ನಜೀರ್ ಅಹ್ಮದ್ ಅವರು ಮಾತನಾಡಿ ಪ್ರವಾದಿಯವರು ತಮ್ಮ ವಚನದಲ್ಲಿ ಹೇಳಿದ ಹಾಗೆ ವಿಧ್ಯಾರ್ಥಿಗಳಿಗೆ ಮೂರು ಜನ ತಂದೆಯರು ಇರುತ್ತಾರೆ ಆ ಮೂರು ಜನ ಯಾರು ಎಂದರೆ ನಮ್ಮನ್ನು ಸೃಷ್ಟಿಸಿದ ದೇವರು, ಜನ್ಮ ಕೊಟ್ಟ ತಂದೆ, ನಮ್ಮನ್ನು ವಿಧ್ಯಾ ಕಲಿಸಿದ ಗುರು, ಗುರುವಿಗೆ ಸಮಾಜದಲ್ಲಿ ಬಹಳ ಉನ್ನತವಾದ ಸ್ಥಾನ ಇದೆ, ಅದಕ್ಕೆ ತಕ್ಕಂತೆ ಗುರುವಿನ ಕಾರ್ಯನಿರ್ವಹಣೆ ಕೂಡ ಬದಲಾಗಿದೆ. ಹಿಂದಿನ ಗುರುಗಳು ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಇಡೀ ಸಮಾಜಕ್ಕೆ ಮಾದರಿಯಾಗಿರುತ್ತಿದ್ದರು. ಶಿಕ್ಷಕ ದಿನಾಚರಣೆಯ ಈ ಸಂದರ್ಭದಲ್ಲಿ ಸಮುದಾಯ ಶಿಕ್ಷಕವರ್ಗದಿಂದ ನಿರೀಕ್ಷಿಸುವ ಅಂಶಗಳು, ಶಿಕ್ಷಕರು ಇರುವ ರೀತಿ ಈ ಬಗ್ಗೆ ಅವಲೋಕಿಸ ಬೇಕಾದ ಅಗತ್ಯವಿದೆ. ಮಕ್ಕಳಿಗೆ ಉತ್ತಮ ನೀತಿಯನ್ನು ತಿಳಿಸಬೇಕಾದ ಎಲ್ಲರೂ ಮೊದಲು ತಾವು ವಯ್ಯಕ್ತಿಕವಾಗಿ ನೈತಿಕವಾಗಿರಬೇಕು ಎಂದರು.
ಈ ಸಂದರ್ಭದಲ್ಲಿ ಉತ್ತಮ ಶಿಕ್ಷಕರಿಗೆ ಸನ್ಮಾನಿಸಲಾಯಿತು ಮತ್ತು ಮೊಹಮ್ಮದ್ ಅಲಿಮುದ್ದಿನ್, ಶಾಹಿದ್ ಹುಸೇನ್, ಸಲಿಂ ಪಾಷ, ಸೈಯದ್ ಹಿದಾಯತ್ ಅಲಿ, ಇಲ್ಯಾಯಸ್ ನಾಲಬಂದ್ ಹಾಗೂ ಇನ್ನು ಮುಂತಾದವರು ಉಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!