ಶಿಕ್ಷಕರ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ : ಸಚಿವ ಬಿ ಸಿ. ನಾಗೇಶ್

ಕೊಪ್ಪಳ : ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಸರ್ವ ಸದಸ್ಯರ   ಮಹಾಸಭೆಯನ್ನು ವರ್ಚ್ಯವಲ್ ಮೂಲಕ ರಾಜ್ಯದ ನೂತನ ಶಿಕ್ಷಣ ಸಚಿವರಾದ  ಬಿ. ಸಿ. ನಾಗೇಶ್ ರವರು ಉದ್ಘಾಟಿಸಿ ಮಾತಾನಾಡುತ್ತಾ ಶಿಕ್ಷಕರ ಎಲ್ಲಾ ಸಮಸ್ಯೆಗಳನ್ನೂ ಹಂತ ಹಂತವಾಗಿ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು  ಶಿಕ್ಷಣ ಸಚಿವರು ತಿಳಿಸಿದರು.
ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಮೊಟ್ಟ ಮೊದಲ ಸಭೆಯು ಶಿಕ್ಷಣದ ಮೂಲ ವಾರಸುದಾರಾದ ಶಿಕ್ಷಕರೊಂದಿಗೆ ಮಾತನಾಡಲು ಅವಕಾಶ ಸಿಕ್ಕಿದ್ದಕ್ಕಾಗಿ ಮಾನ್ಯ ಸಚಿವರು ಹರ್ಷ ವ್ಯಕ್ತ ಪಡಿಸಿದರು,ಈ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯವನ್ನು ಶ್ಲಾಘಿಸಿದರು.
ಶಿಕ್ಷಕರಿಗೆ  ಅನೇಕ ಸಮಸ್ಯೆಗಳು ಇರಬಹುದು ಅವುಗಳಲ್ಲಿ  ವರ್ಗಾವಣೆ ಸೇರಿದಂತೆ ಪ್ರಮುಖ ಮೂರು ಸಮಸ್ಯೆಗಳು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯ ಮೂಲಕ ನನ್ನ ಗಮನಕ್ಕೆ ಬಂದಿದ್ದು ಅಧಿಕಾರಿಗಳು ಹಾಗೂ ಸಂಘಟನೆಯ ಜೊತೆ ಚರ್ಚಿಸಿ ಅವುಗಳನ್ನ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ ಮಾನ್ಯರು ಮುಂದುವರಿದು ಮಾತಾನಾಡುತ್ತಾ ಶಿಕ್ಷಕರು ಪ್ರಾಮಾಣಿಕವಾಗಿ ಭೋಧನೆ ಮಾಡುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಶಾಲೆಯಲ್ಲಿಯಲ್ಲಿರುವ ಕಟ್ಟಕಡೆಯ ಮಗುವೂ ಕೂಡ  ಪರಿಣಾಮಕಾರಿಯಾದ ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗುವಂತೆ ಮಾಡುವ ಪ್ರೇರಕ ಶಕ್ತಿ ಶಿಕ್ಷಕರಾಗಬೇಕು.ಎಂದು ಕರೆ ನೀಡಿದರು.
.ಶಂಭುಲಿಂಗನಗೌಡ ಪಾಟೀಲ್ ಅಧ್ಯಕ್ಷರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಶಿಕ್ಷಕರ ಬೇಕು ಬೇಡಿಕೆಗಳ ಬಗ್ಗೆ  ಮಾನ್ಯ ಸಚಿವರ ಮುಂದೆ ಮಂಡಿಸಿದರು, ಚಂದ್ರಶೇಖರ್ ನುಗ್ಲಿ ಪ್ರಧಾನ ಕಾರ್ಯದರ್ಶಿ ಅವರು ಸಭೆಗೆ ಸರ್ವರನ್ನು ಸ್ವಾಗತಿಸಿದರು  ಕಾರ್ಯಕ್ರಮದ ನಿರ್ವಹಣೆಯನ್ನು ಸಹ ಕಾರ್ಯದರ್ಶಿ ಹೆಚ್ ಎಸ್ ಚೇತನ್ ಅವರು ನಿರ್ವಹಿಸಿದರು.ಶಿಕ್ಷಣ ತಜ್ಙರಾದ ನಿರಂಜನರಾಧ್ಯ ಅವರು  ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವಿಷಯ ಮಂಡಿಸಿದರು.
ಅಖಿಲಭಾರತ ಶಿಕ್ಷಕರ ಫೆಡರೇಶನ ರಾಷ್ಟ್ರೀಯ ಉಪಾಧ್ಯಕ್ಷರಾದ  ಬಸವರಾಜ ಗುರಿಕಾರ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ವಿ.ಎಂ ನಾರಾಯಣಸ್ವಾಮಿಯವರು,  ಪ್ರಧಾನಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ,ರಾಜ್ಯ ಉಪಾಧ್ಯಕ್ಷರಾದ ಕೆ ನಾಗೇಶ,ಹಾಗೂ ಪದ್ಮಲತಾ ಜಿ,ಖಜಾಂಚಿ ಸುರೇಶ ಶಡಶ್ಯಾಳ,ಸಹಕಾರ್ಯದರ್ಶಿಗಳಾದ ಹೆಚ್ ಎಸ್ ಚೇತನ್,ಸುಮತಿ ಜಿ. ಸಂಘಟನಾ ಕಾರ್ಯದರ್ಶಿಗಳಾದ ನಾಗನಗೌಡ, ಪ್ರಮೀಳಾ ಕಾಮನಹಳ್ಳಿ, ಕೊಪ್ಪಳ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶರಣಬಸವನಗೌಡ ಪಾಟೀಲ ಹಲಗೇರಿ ,ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷರಾದ ಗಿರೀಶ ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!