ಶಿವಶಾಂತವೀರ ಸ್ವಾಮಿ ಜನಸೇವೆಯೇ ಜನಾರ್ಧನ ಸೇವೆ ಎಂದು ಬದುಕಿದವರು: ಡಾ. ನಾಗರಾಜ ದಂಡೋತಿ

ಅಖಿಲ ವಾಣಿ ಸುದ್ದಿ:
ಕೊಪ್ಪಳ: ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿ ’ಜನಸೇವೆಯೇ ಜನಾರ್ಧನ ಸೇವೆ’ ಎಂದು ಬದುಕು ಸವೆಸಿದ, ನಮ್ಮೆಲ್ಲರ ಆರಾಧ್ಯ ದೈವರಾಗಿ ಎಲ್ಲರ ಮನೆ, ಮನದಲ್ಲಿ ನೆಲೆಸಿದವರು ಸಂಸ್ಥಾನ ಶ್ರೀ ಗವಿಮಠದ  ೧೭ನೇ ಪೀಠಾಧಿಪತಿಗಳಾದ  ಮಹಾಮಹಿಮ ಪೂಜ್ಯ ಲಿಂ. ಶಿವಶಾಂತವೀರ ಮಹಾಶಿವಯೋಗಿಗಳವರು. ಅವರ ನಡೆ-ನುಡಿ, ಮಾರ್ಗದರ್ಶನ ನಮಗೆ ಸದಾ ಸ್ಮರಣೀಯ ಎಂದು ಪ್ರಾಧ್ಯಾಪಕ ಡಾ.ನಾಗರಾಜ ದಂಡೋತಿ ಆಭಿಪ್ರಾಯ ವ್ಯಕ್ತಪಡಿಸಿದರು. ಶ್ರೀ ಗವಿಸಿದ್ಧೇಶ್ವರ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳು ಜಂಟಿಯಾಗಿ ಆಯೋಜಿಸಿದ ಶ್ರೀ ಲಿಂ.ಶಿವಶಾಂತವೀರ ಶಿವಯೋಗಿಗಳ ೧೮ ನೇ ಪುಣ್ಯ ಸ್ಮರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಲ್ಲದೇ ಪೂಜ್ಯ ಲಿಂಗೈಕ್ಯ ಶಿವಶಾಂತವೀರ ಮಹಾಸ್ವಾಮಿಗಳವರು ಆಧ್ಯಾತ್ಮಿಗಳು ಉತ್ತಮ ಕವಿಗಳೂ, ಮಹಾಪಂಡಿತರು, ವೈದ್ಯರು ಹಾಗೂ ಶಿಕ್ಷಣ ಪ್ರೇಮಿಗಳು ಆಗಿದ್ದರು. ಅಲ್ಪ ಬದುಕಿದರೂ ಕಲ್ಪಿಸುವಂತೆ, ಆರಾಧಿಸುವಂತೆ ಬದುಕಬೇಕು ಎಂಬಂತೆ ಪೂಜ್ಯರ ಬದುಕು ಸದಾ ಸ್ಮರಣೀಯ. ಸಾಹಿತ್ಯ ಸೇವೆ ಅತ್ಯಂತ ಮಹತ್ವ್ವ ಮತ್ತು ಮೌಲಿಕತೆ ಹೊಂದಿದ್ದು ಪೂಜ್ಯರ ಸಾಹಿತ್ಯ ಸೇವೆಯ ವಿಶೇಷತೆಯಾಗಿದೆ.  ಪೂಜ್ಯರು ರಚಿಸಿದ ಗವಿಸಿದ್ಧೇಶ್ವರ ಸುಪ್ರಭಾತವು ಅತ್ಯುತ್ತಮ ಕೃತಿಯಾಗಿದೆ. ನಕ್ಷತ್ರ ಮಾಲಿಕೆಯಂತೆ ೨೭ ಚೌಪದಿಗಳಲ್ಲಿ ಕರ್ತೃ ಗವಿಸಿದ್ಧೇಶ್ವರರ ಲೀಲೆಗಳನ್ನು ಹಾಡಿ, ಹಾಗೆಯೇ ೨೮ನೇ ನುಡಿಯಲ್ಲಿ ಗುರುಗಳೆಲ್ಲರಿಗೂ ಮಂಗಳ ಹಾಡಿದ್ದಾರೆ. ಇಂತಹ ಮಹಾಂತ ಸಂತರ ಚರಿತ್ರೆ ಓದುವುದೇ ನಮ್ಮ ಪುಣ್ಯವೆಂದರು.
ಇದೇ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ಸಂಯೋಜಕರಾದ ಪರೀಕ್ಷಿತರಾಜ ಸಹ ಮಾತನಾಡಿದರು. ಅಧ್ಯಕ್ಷತೆಯನ್ನು ಪದವಿ ಪ್ರಾಚಾರ್ಯ ಡಾ.ಜೆ.ಎಸ್ ಪಾಟೀಲ ವಹಿಸಿ ಲಿಂ.ಪೂಜ್ಯ ಶ್ರೀಶಿವಶಾಂತವೀರ ಶಿವಯೋಗಿಗಳ ಬದುಕು ಆದರ್ಶಮಯ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪದವಿ ಪೂರ್ವ ಪ್ರಾಚಾರ್ಯರಾದ ಡಾ.ವಿರೇಶಕುಮಾರ್ ಉಪಸ್ಥಿತರಿದ್ದರು. ಕು. ವೈದೇಹಿ ಪ್ರಾರ್ಥಿಸಿದರು. ಉಪನ್ಯಾಸಕರಾದ ಟಿ.ಬಿ ದೇಸಾಯಿ ಸ್ವಾಗತಿಸಿದರು, ಹನುಮಪ್ಪ ಶೆಲೋಡಿ ವಂದಿಸಿದರು, ಡಾ.ಪ್ರಕಾಶ ಬಳ್ಳಾರಿ ನಿರೂಪಿಸಿದರು. ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.  

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!