ಶೀಲ್ಡ್ ಡೌನ್ ಪ್ರದೇಶದ ಜನತೆಗೆ ಆಹಾರ ಕಿಟ್ ವಿತರಣೆ

ಯಲಬುರ್ಗಾ: ಸಮೀಪದ ಬಿನ್ನಾಳ ಗ್ರಾಮದಲ್ಲಿ ಶಿಲ್ಡ್ ಡೌನ್ ಪ್ರದೇಶದ ಜನತೆಗೆ ಯಲಬುರ್ಗಾ ಪಟ್ಟಣದ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಶರಣಪ್ಪ ಗುಂಗಾಡಿ ಭಾನುವಾರ ಆಹಾರ್ ಕಿಟ್ ವಿತರಣೆ ಮಾಡಿದರು.
ಬಳಿಕ ಮಾತನಾಡಿ, ದೇಶಾದ್ಯಾಂತ ಅತ್ಯಂತ ವೇಗವಾಗಿ ಹರಡುತ್ತಿರುವ ಮಹಾಮಾರಿ ಕೊರೊನಾ ರೋಗಕ್ಕೆ ಯಾರು ಭಯ ಪಡಬಾರದೇ ಅಗತ್ಯ ಮುನ್ನೇಚ್ಚರಿಕೆ ಕ್ರಮಗಳನ್ನು ಅನುಸರಿಸಿ ಕೊರೊನಾ ವಿರುದ್ಧ ಗೆಲ್ಲಬೇಕು.ಕುಕನೂರು ತಾಲೂಕಿನ ಗ್ರಾಮೀಣ ಭಾಗದ ಈ ಹಳ್ಳಿಯಲ್ಲಿ ಕೋವಿಡ್ ಹಿನ್ನೆಲೆ ಶೀಲ್ಡ್‌ನ್ ಎದುರಿಸುವ ಪ್ರದೇಶದ ನಾಗರಿಕರಿಗೆ ಅಡಚಣೆ ಉಂಟಾಗದಂತೆ ಜನತೆ ದೈರ್ಯವಾಗಿ ಜೀವನ ನಡೆಸಬೇಕು.ಯಾರೊಬ್ಬರೂ ಎದೆಗುಂದದೆ ಬದುಕನ್ನು ಕಳೆಯಬೇಕು. ಕೊರೊನಾ ಸಂಕಷ್ಟದಿಂದ ಜನರನ್ನು ಪಾರು ಮಾಡಲು ಸರಕಾರಗಳು ಹಗಲು-ರಾತ್ರಿ ಎನ್ನದೆ ಶ್ರಮಿಸುತ್ತಿವೆ. ನಿಮ್ಮ ಕುಟುಂಬದ ಬಗ್ಗೆ ಕಾಳಜಿಯನ್ನು ಮಾಡಲು ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ ಅವರು ಹೇಳಿದಂತೆ ನಡೆದುಕೊಂಡಾಗ ಮಾತ್ರ ನೀವು ಬೇಗನೆ ಗುಣಮುಖರಾಗುತ್ತೀರಿ.ಪ್ರತಿಯೊಬ್ಬರು ಮಾಸ್ಕ್ ಬಳಸಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಅತ್ಯಂತ ಜಾಗೃತರಾಗಿರಬೇಕು, ಈ ಗ್ರಾಮದಲ್ಲಿ ಜನರಿಗೆ ಅನುಕೂಲವಾಗಿ ವೈಯಕ್ತಿಕವಾಗಿ ಆಹಾರ್ ಕಿಟ್ ಹಂಚಿಕೆ ಮಾಡಲಾಗಿದೆ. ಜನರಿಗೆ ಆ ಭಗವಂತೆ ಕರುಣೆ ತೋರಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಪಿಡಿಒ ಶೇಖರಪ್ಪ ಚಿಂಚಲಿ, ಗ್ರಾಮ ಲೆಕ್ಕಾಧಿಕಾರಿ ಜಯಶ್ರೀ. ಗ್ರಾ.ಪಂ ಕರವಸೂಲಿಗಾರ ಶರಬಣ್ಣ ಕೋಳೂರು. ಗ್ರಾಪಂ ಸದಸ್ಯರಾದ ಲಕ್ಷ್ಮಪ್ಪ ಛಲವಾದಿ, ಮಹಮ್ಮದ್ ಸಾಬ್ ವಾಲಿಕಾರ್, ಗುರಪ್ಪ ಪಂತರ್, ಮುಖಂಡರಾದ ಸಂಗಪ್ಪ ತಹಸೀಲ್ದಾರ್,ಈರಪ್ಪ ಮುತ್ತಾಳ, ಶಿವಪುತ್ರಪ್ಪ ಕಂಬಳಿ, ಬಸವರಾಜ ಬನ್ನಿಕೋಪ್ಪ, ಗ್ರಾ.ಪಂ. ಸಿಬ್ಬಂದಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!