ಶೈಕ್ಷಣಿಕ ಕಾರ್ಯಪಡೆಗಳು ದತ್ತು ನೀಡಲಾದ ಶಾಲೆಗೆ ಭೇಟಿ ನೀಡಿ: ಫೌಜೀಯಾ ತರನ್ನುಮ್

ಕೊಪ್ಪಳ : ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ನೇಮಿಸಲ್ಪಟ್ಟ 40 ಜನರ ಶೈಕ್ಷಣಿಕ ಕಾರ್ಯಪಡೆಯಗಳು ಕಡ್ಡಾಯವಾಗಿ ತಮ್ಮಗೆ ದತ್ತು ನೀಡಲಾಗಿರುವ  ಶಾಲೆಗಳಿಗೆ ವಾರದಲ್ಲಿ 1 ಶಾಲೆಗಾದರು ಕಡ್ಡಾಯವಾಗಿ ಭೇಟಿ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೌಜೀಯಾ ತರನ್ನುಮ್ ಹೇಳಿದರು.
ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲಾಡಳಿತ ಭವನದ ಕೃಷಿ ಇಲಾಖೆ ಕಚೇರಿಯ ಸಮಿತಿ ಕೊಠಡಿಯಲ್ಲಿ ಶನಿವಾರ  (ಸೆ. 18)ರಂದು ನಡೆದ ‘ಜ್ಞಾನ ಜೋತಿ’ ಶೀರ್ಷಿಕೆಯ ಅಡಿಯಲ್ಲಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಶೈಕ್ಷಣಿಕ ಗುಣಮಟ್ಟ ಸುಧಾರಣಾ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಿಗೂ 5 ಶಾಲೆಗಳನ್ನು ನೀಡಲಾಗಿದೆ. ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳ ಹಾಜರಾತಿ, ದಾಖಲಾತಿ, ಶಾಲೆಯಿಂದ ಹೊರಗುಳಿದ ಮಕ್ಕಳ ಮನೆ ಭೇಟಿ ನೀಡಿದ ಮಾಹಿತಿಯನ್ನು ಪಡೆಯಬೇಕು. ಸ್ಮಾರ್ಟ್ ಕ್ಲಾಸ್ ತರಬೇತಿ ವೀಕ್ಷಣೆ ಸೇತು ಬಂದು ಕಾರ್ಯಕ್ರಮದ ಅನುಪಾಲನೆ ಈ ಸಮಯದ ತರಗತಿಗಳ ವಿಕ್ಷಣೆ ಕಡ್ಡಾಯವಾಗಿ ಎಸ್.ಓ.ಪಿ (SOP) ಪಾಲನೆ ಮಾಡುವುದನ್ನು ಪರಿಶೀಲನೆ ಮಾಡಬೇಕು.
ಕಲಿಕಾ ಮಿತ್ರರು ಸಿದ್ದಪಡಿಸಿರುವ ಚಿಗುರು ಪುಸ್ತಕವನ್ನು ಅಕ್ಟೋಬರ್ 2 ರಂದು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಿಂದ ಬಿಡುಗಡೆ ಗೊಳಿಸಲು ಸೂಕ್ತ ಕ್ರಮವಹಿಸಬೇಕು. ಪ್ರತಿಯೊಂದು ನಗರ ಪಟ್ಟಣ ಗ್ರಾಮ ಪಂಚಾಯತಿಯಲ್ಲಿ ಇರುವ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ನಗರ ಪಟ್ಟಣ ಗ್ರಾಮ ಪಂಚಾಯತಿಗಳು ಕ್ರಮವಹಿಸಬೇಕು.  ನವೆಂಬರ್ 23 ರಿಂದ 25 ರವರಗೆ ಜಿಲ್ಲೆಯ ಎಲ್ಲಾ ಪ್ರೌಢಶಾಲಾ ಶಿಕ್ಷಕರುಗಳಿಗೆ ತಾಲ್ಲೂಕು ಮಟ್ಟದಲ್ಲಿ ವಿಷಯ ಆಧಾರಿತ ತರಬೇತಿ ನಡೆಸಬೇಕು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಅಮೀನ್ ಸಾಬ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದೊಡ್ಡಬಸಪ್ಪ ನಿರಲಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶೈಕ್ಷಣಿಕ ಕಾರ್ಯಪಡೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!