ಶ್ರೀಗಳ ನೇತೃತ್ವದಲ್ಲಿ ವೃಕ್ಷ ಕ್ರಾಂತಿ ನಡೆಯುತ್ತಿದೆ: ರಾಘವೇಂದ್ರ ಹಿಟ್ನಾಳ ಮನೆ, ದೇವರ ಮನೆ ಸಣ್ಣದಾದರೂ ಸರಿ ಆದರೆ ಮನೆಗೊಂದು ಗಿಡ ಬೆಳೆಸಿ: ಗವಿಶ್ರೀ

ಕೊಪ್ಪಳ : ಕೆರೆಗಳ ಅಭಿವೃದ್ಧಿ ಕಾರ್ಯ ನೀರು, ನಿಲ್ಲಿಸುವ ಕಾರ್ಯ,ಅಂತರ್ಜಲ ಹೆಚ್ಚಿಸುವುದು,ಗಿಡಗಳನ್ನು ನೆಡುವುದು, ಶ್ರೀ ಮಠದ ಗವಿಶ್ರೀ ಗಳಿಂದ ಕ್ರಾಂತಿ ನಡೆಯುತ್ತಿದೆ, ನಾವೆಲ್ಲರೂ ಬರಿ ಸುಮ್ಮನೆ ಗಿಡಗಳನ್ನು ನೆಟ್ಟು ಹೋದರೆ ಉಪಯೋಗವಿಲ್ಲ ಅವುಗಳನ್ನು ಸಂರಕ್ಷಣೆ ಮಾಡುವುದುಕೂಡ ನಮ್ಮ ಜವಾಬ್ದಾರಿಯಾಗಿದೆ, ಬರಿ ನಗರ ಪ್ರದೇಶದಲ್ಲಿ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿಕೂಡ ಸಂಪೂರ್ಣ ಗಿಡಗಳನ್ನು ಬೆಳಸುವುದನ್ನು ಪೂಜ್ಯರ ನೇತೃತ್ವದಲ್ಲಿ ಮಾಡೋಣ ಎಂದು ಕೊಪ್ಪಳದ ಶಾಸಕರಾದ ರಾಘವೇಂದ್ರ ಹಿಟ್ನಾಳ ಹೇಳಿದರು.
ಮನೆಗೊಂದು ಗಿಡ ಬೆಳೆಸಿ:ಕೊವಿಡ್ ಬಂದಾಗ ಎಲ್ಲರಿಗೂ ಗೊತ್ತಾಗಿದೆ ಆಕ್ಸಿಜನ್ ಬೆಲೆ ಎಷ್ಟು ಎಂದು, ಒಂದು ಮರ ದೇವರು ಇಟ್ಟ ವರ,ಊರಿನಲ್ಲಿ ಬಹಳ ಸಂಧಿಗಳಿಲ್ಲ ದೊಡ್ಡ ದೊಡ್ಡ ರೋಡುಗಳಿವೆ ನೋಡಲು ಭಾಗ್ಯನಗರ ಚಂಡೀಗಢ ದಂತೆ ಕಾಣುತ್ತದೆ ಪ್ರತಿಯೊಬ್ಬರೂ ಗಿಡಗಳನ್ನು ಬೆರೆಸಿದರೆ ಇನ್ನೂ ಸುಂದರವಾಗಿ ಊರು ಕಾಣುತ್ತದೆ ಎಂದು ಗವಿಶ್ರೀಗಳು ಹೇಳಿದರು.
ಕೊಪ್ಪಳದ ಭಾಗ್ಯನಗರ ಪಟ್ಟಣ ಪಂಚಾಯತ ಆವರಣದಲ್ಲಿ ಇಂದು ನಡೆದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬರಿ ಗಿಡಗಳನ್ನು ಹಚ್ಚುವದು ಅಷ್ಟೇ ಅಲ್ಲದೇ ಅವುಗಳನ್ನು ಪಾಲನೆ ಮಾಡಬೇಕು ಬರಿ ಕಾರ್ಯಕ್ರಮ ಗಳಲ್ಲಿ ಫೊಟೊ ತಗೆಸಿಕೊಂಡು ಅದನ್ನು ತಿರುಗಿಸಹ ನೋಡುವುದಿಲ್ಲ ಅದಕ್ಕೆ ದಯವಿಟ್ಟು ಗಿಡಗಳನ್ನು ಹಚ್ಚಿ ಅದನ್ನು ಬೆಳೆಸಿರಿ ನಾವು ನಿಸರ್ಗಕ್ಕೆ ಏನಾದರೂ ಒಂದು ಕಾಣಿಕೆಯನ್ನು ಕೊಡುವುದಾದರೆ ಒಂದು ಗಿಡವನ್ನು ಹಚ್ಚಿ ಬೆಳೆಸಿರಿ, ಎಂದು ಅಭಿನವ ಗವಿಶ್ರೀಗಳು ಹೇಳಿದರು. ಈ ಸಂದರ್ಭದಲ್ಲಿ ಕೊಪ್ಪಳ ಶಾಸಕರಾದ ರಾಘವೇಂದ್ರ ಹಿಟ್ಲಾಳ, ಜಿಲ್ಲಾ ಪಂಚಾಯತ ಸದಸ್ಯರಾದ ಗವಿಸಿದ್ದಪ್ಪ ಕರಡಿ, ಮಾಜಿ ಪಟ್ಟಣ ಪಂಚಾಯತ ಅಧ್ಯಕ್ಷರಾದ ಹುಲಿಗೆಮ್ಮ ತಟ್ಟಿ ಹಾಗೂ ಮಾಜಿ ಸದಸ್ಯರುಗಲು ಊರಿನ ಮುಖಂಡರು ಹಾಗು ಪಟ್ಟಣ ಪಂಚಾಯತ ಸಿಬ್ಬಂದಿಗಳು ಭಾಗವಹಿಸಿದ್ದರು
ಕೊಪ್ಪಳದ ಭಾಗ್ಯನಗರ ಪಟ್ಟಣ ಪಂಚಾಯತ ಆವರಣದಲ್ಲಿ ಇಂದು ನಡೆದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು, ಜಿಲ್ಲಾ ಪಂಚಾಯತ ಸದಸ್ಯರಾದ ಗವಿಸಿದ್ದಪ್ಪ ಕರಡಿ, ಮಾಜಿ ಪಟ್ಟಣ ಪಂಚಾಯತ ಅಧ್ಯಕ್ಷರಾದ ಹುಲಿಗೆಮ್ಮ ತಟ್ಟಿ ಹಾಗೂ ಮಾಜಿ ಸದಸ್ಯರು ಊರಿನ ಮುಖಂಡರು ಹಾಗು ಪಟ್ಟಣ ಪಂಚಾಯತ ಸಿಬ್ಬಂದಿಗಳು ಭಾಗವಹಿಸಿದ್ದರು

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!