ಶ್ರೀಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆ


ಕೊಪ್ಪಳ. ನಗರದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್ ಕಾರ್ಯದರ್ಶಿಗಳಾದ ಡಾ ಆರ್. ಮರೇಗೌಡ್ರು ಧ್ವಜಾರೋಹಣ ನೆರವೇರಿಸಿ ಬಳಿಕ ಮಾತನಾಡಿ ದೇಶದ ಸ್ವಾತಂತ್ರ್ಯ ಕ್ಕಾಗಿ ತ್ಯಾಗ, ಬಲಿದಾನ ಮಾಡಿದವರನ್ನು ಸ್ಮರಣೆ ಮಾಡುವುದು ನಮ್ಮ ಪರಮ ಕರ್ತವ್ಯ. ಇಂತಹ ಪವಿತ್ರ ದೇಶದಲ್ಲಿ ಹುಟ್ಟಿದ ನಮ್ಮೆಲ್ಲರ ಬದುಕು ಸಾರ್ಥಕ. ಸಂವಿಧಾನ ನೀಡಲ್ಪಟ್ಟಿರುವ ಎಲ್ಲ ಹಕ್ಕುಗಳನ್ನು ಪಡೆದುಕೊಂಡು ನಮ್ಮ ಬದುಕನ್ನು ಕಟ್ಟಿಕೊಳ್ಳುವ ಅಗತ್ಯ ಇದೆ ಎಂದರು. ಪದವಿ ಮಹಾವಿದ್ಯಾಲಯ ಪ್ರಾಚಾರ್ಯರಾದ ಡಾ. ಜೆ. ಎಸ್ ಪಾಟೀಲ್, ಪದವಿ ಪೂರ್ವ ಪ್ರಾಚಾರ್ಯ ರಾದ ಡಾ.ವಿರೇಶ ಕುಮಾರ್ , ಎನ್. ಸಿ. ಸಿ ಅಧಿಕಾರಿಗಳಾದ ಡಾ ದಯಾನಂದ ಸಾಳಂಕಿ, ದೈಹಿಕ ನಿರ್ದೇಶಕ ರಾದ ವಿನೋದ ಅಲ್ಲದೇ ಪದವಿ ಹಾಗೂ ಪದವಿಪೂರ್ವ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಮತ್ತು ಎನ್. ಸಿ. ಸಿ . ಎನ್ ಎಸ್ ಎಸ್ ವಿದ್ಯಾರ್ಥಿ ಗಳು ಇದ್ದರು. ನಿರೂಪಣೆ ಡಾ. ನಾಗರಾಜ್ ದಂಡೋತಿ , ವಂದನಾರ್ಪಣೆ ಯನ್ನು ಉಪನ್ಯಾಸಕಿ ದೀಪಾ ಬೆಟಗೇರಿ ನೆರೆವೇರಿಸಿದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!