ಶ್ರೀ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಹೈ. ಕ ವಿಮೋಚನಾದಿನಾಚರಣೆ                 

               
ಕೊಪ್ಪಳ. ನಗರದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಈ ದಿನ ಮುಂಜಾನೆ  7.30 ಕ್ಕೆ ಹೈದರಾಬಾದ   (ಕಲ್ಯಾಣ ) ಕರ್ನಾಟಕ  ವಿಮೋಚನಾ ದಿನಾಚರಣೆಯನ್ನು  ಆಚರಣೆ ಮಾಡಲಾಯಿತು. ಪ್ರಾಚಾರ್ಯರಾದ  ಡಾ ಚೆನ್ನಬಸವ ಸಾಹುಕಾರ  ಧ್ವಜಾರೋಹಣ ನೆರವೇರಿಸಿ  ಈ ದಿನ ನಿಜಾಮಷಾಯಿ ಆಡಳಿತದಿಂದ ಮುಕ್ತಿ ಪಡೆದ ಸುದಿನ. ಬೀದರ್ , ಕಲಬುರ್ಗಿ, ರಾಯಚೂರು, ಕೊಪ್ಪಳ  ಜಿಲ್ಲೆಗಳಲ್ಲಿ  ರಜಾಕರ  ಉಪಟಳ  ಖಂಡಿಸುವ  ಮತ್ತು ಈ ಭಾಗವನ್ನು  ನಿಜಾಮಾಷಾಯಿಗಳಿಂದ  ಬಿಡುಗಡೆಗೊಳಿಸುವ  ಹೋರಾಟ ನೆಡೆಯಿತು  ಕೊಪ್ಪಳ  ಜಿಲ್ಲೆಯ ಪಂಚಾಕ್ಷರಿ  ಹಿರೇಮಠ್,  ಅನ್ನದಾನಿ ಹಿರೇಮಠ್,  ಶಿವಮೂರ್ತಿ  ಸ್ವಾಮಿ ಅಳವಂಡಿ  ಹಲವಾರು ಪ್ರಮುಖರು ತಮ್ಮನ್ನು  ಈ ವಿಮೋಚನಾ ಹೋರಾಟದಲ್ಲಿ  ತೊಡಗಿಸಿ ಕೊಂಡಿದ್ದರು. ಅಂತವರ ತ್ಯಾಗ- ಬಲಿದಾನದಿಂದ ಹೈದರಬಾದ್ ಕರ್ನಾಟಕ  ನಿಜಾಮರ  ಆಡಳಿತದಿಂದ ಬಿಡುಗಡೆಗೊಂಡು ಭಾರತ ಒಕ್ಕೂಟಕ್ಕೆ ಸೇರಲು ಸಾಧ್ಯವಾಗಿದೆ ಎಂದರು.. ಪದವಿ ಪೂರ್ವ ಪ್ರಾಚಾರ್ಯರಾದ ಡಾ.ವಿರೇಶ್ ಕುಮಾರ ಮಾತನಾಡಿ   ಸರದಾರ ವಲ್ಲಭಾಯಿ ಪಟೇಲ  ಇವರ ಇಚ್ಛಾ ಶಕ್ತಿಯಿಂದ  ಈ  ಭಾಗ  ನಿಜಮರ ಆಡಳಿತದಿಂದ  ವಿಮೋಚನೆ ಪಡೆದುಕೊಳ್ಳಲು  ಕಾರಣವಯಿತು ಎಂದರು.  ಎನ್. ಸಿ. ಸಿ ಅಧಿಕಾರಿಗಳಾದ ದಯಾನಂದ ಸಾಳಂಕಿ , ದೈಹಿಕ ನಿರ್ದೇಶಕರಾದ ವಿನೋದ್,  ಈಶಪ್ಪ ದೊಡ್ಡಮನಿ   ಹಾಗೂ ಸರ್ವ  ಸಿಬ್ಬಂದಿಗಳು , ವಿದ್ಯಾರ್ಥಿಗಳು ಇದ್ದರು.                              
          

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!