ಶ್ರೀ ಭಗೀರಥ ಜಯಂತ್ಯೊತ್ಸವ: ಭಗೀರಥನ ಸಾಧನೆ ಎಲ್ಲಾರಿಗೂ ಸ್ಪೂರ್ತಿ: ಪರಣ್ಣ ಮುನವಳ್ಳಿ

ಗಂಗಾವತಿ: ಗುರಿಯೊಂದಿಗೆ ಸತತ ಪ್ರಯತ್ನದ ಮೂಲಕ ದೇವಗಂಗೆಯನ್ನು ಧರೆಗಿಳಿಸಿದ ರಾಜ ಋಷಿ ಶ್ರೀ ಭಗೀರಥನ ಆದರ್ಶ, ಸಾಧನೆ ಮಾಡುವವರಿಗೆ ಸ್ಪೂರ್ತಿ ಎಂದು ಗಂಗಾವತಿ ವಿಧಾನ ಸಭಾ ಕ್ಷೇತ್ರದ ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ನಗರದ ಶ್ರೀಭಗೀರಥ ವೃತ್ತದಲ್ಲಿ ಭಗೀರಥ ಜಯಂತ್ಯೋತ್ಸವದ ನಿಮಿತ್ತ ರಾಜ ಋಷಿಯ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. ಆ ಬಳಿಕ ಮಾತನಾಡಿದ ಅವರು ಹಿಂದುಳಿದ ಉಪ್ಪಾರ ಜನಾಂಗ ಆತ್ಮಗೌರವದೊಂದಿಗೆ ಬದಕುವ ಜನಾಂಗವಾಗಿದ್ದು, ಈ ಸಮಾಜಕ್ಕೆ ರಾಜಕೀಯ, ಆರ್ಥಿಕ, ಸಾಮಾಜಿಕ ಪ್ರಾತಿನಿದ್ಯ ದೊರೆಯಬೇಕಿದೆ, ಶಿಕ್ಷಣಕ್ಕೆ ಹೆಚ್ಚುಹೊತ್ತು ನೀಡುವ ಮೂಲಕ ಜನಾಂಗ ಅಭಿವೃದ್ಧಿ ಹೊಂದಬೇಕಿದೆ ಎಂದು ಹೇಳಿದರು.
ಇದೆ ಸಮಯದಲ್ಲಿ ಉಪ್ಪಾರ ಸಮಾಜದ ಕೊಪ್ಪಳ ಜಿಲ್ಲಾ ಯುವ ಘಟಕದ ಜಿಲ್ಲಾಧ್ಯಕ್ಷರಾದ ಯಂಕಪ್ಪ ಕಟ್ಟಿಮನಿ ಮಾತನಾಡಿದರು ಒಗ್ಗಟಿನಿಂದ ನಾವು ಸರಕಾರಗಳ ಸೌಲಭ್ಯ ಪಡೆದುಕೊಳ್ಳಬಹುದಾಗಿದ್ದು, ನಿರಂತರ ಬೇಡಿಕೆ ಸಲ್ಲಿಸುವ ಮೂಲಕ ಅಗತ್ಯ ಗಮನಸೆಳೆಯಬೇಕಾಗಿದೆ, ಕೊವಿಡ್ ಮಹಾಮಾರಿಯಿಂದ ಬಚಾವಾಗುವುದು ಕಷ್ಟಕರವಾಗಿದ್ದು, ಅಗತ್ಯ ಜಾಗೃತಿ ವಹಿಸಬೇಕೆಂದು ಹೇಳಿ ದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಉಪ್ಪಾರ ಎಸ್ಟಿ ಹೋರಾಟ ಸಮಿತಿ ಜಿಲ್ಲಾ ಉಪಾಧ್ಯಕ್ಷ ನಾಗರಾಜ್ ಇಂಗಳಗಿ, ನಗರಸಭಾ ಸದಸ್ಯ ನೀಲಕಂಠ ಕಟ್ಟಿಮನಿ, ಗಂಗಾವತಿ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಶರಣಪ್ಪ ಕಟ್ಟಿಮನಿ, ಜಿಲ್ಲಾ ಯುವ ಕಾರ್ಯದರ್ಶಿ ಗವಿದೇವರ ಮನಿ, ಬಿಜೆಪಿ ಯುವ ಮುಖಂಡ ಭೀಮೇಶ್ ಉಪ್ಪಾರ, ಯುವ ಮುಖಂಡರಾದ ಮುಕ್ಕಣ್ಣ ಮಾನಳ್ಳಿ, ಹುಲಿಗಿ, ರಾಜಪ್ಪ
ಚಿಲಕಟ್ ಗೋವಿಂದ, ಗೋಪಾಲ್ ಇಂಗಳಗಿ, ಸೋಮಶೇಖರ್ ಗೌಡ, ಶ್ರೀಧರ ಇಂಗಳಗಿ ಇತರರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!