ಶ್ರೀ ಶಿವಶಾಂತ ಶಿವಯೋಗಿಗಳ ಸ್ಮರಣೆ

ಅಖಿಲ ವಾಣಿ ಸುದ್ದಿ:

ಕೊಪ್ಪಳ : ನಗರದ ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್ ಅಡಿಯಲ್ಲಿನ ಶ್ರೀಮತಿ ಶಾರದಮ್ಮ ವಿ ಕೊತಬಾಳ ಪದವಿ ಮಹಾವಿದ್ಯಾಲಯದಲ್ಲಿ ಶ್ರೀ ಲಿ. ಶಿವಶಾಂತವೀರ ಶಿವಯೋಗಿಗಳ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು. ಉಪನ್ಯಾಸಕರಾದ ಡಾ.ಪ್ರಕಾಶ ಬಳ್ಳಾರಿಯವರು ಮಾತನಾಡುತ್ತಾ ಶ್ರೀ ಶಿವಶಾಂತವೀರ ಶಿವಯೋಗಿಗಳು ಮೂಲತಃ ಶಿಕ್ಷಕರಾಗಿದ್ದ ಇವರು ಆಯುರ್ವೇದ ಪಂಡಿತರೂ, ಸ್ವತಃ ಕವಿಗಳೂ ಆಗಿದ್ದರು. ಆಧ್ಯಾತ್ಮದ ಸಂಪೂರ್ಣ ತಳಹದಿ ತಲುಪಿದ ಆಧ್ಯಾತ್ಮವೀರರಾಗಿದ್ದವರು. ನಡೆದಾಡುವ ದೇವರೆಂದು ಹೆಸರು ಪಡೆದವರು. ಶ್ರೀಗವಿಮಠದ ನೆರಳು ಇವರ ಕಾಲದಲ್ಲಿ ಇನ್ನಷ್ಟು ಚಾಚಿ ಈ ನೆಲದ ಎಲ್ಲ ಕ್ಷೇತ್ರಗಳು ಗಟ್ಟಿಯಾಗುವತ್ತ ಸಾಗಿದವು. ಇವರ ಕವಿಹೃದಯ ಅಪದಮನಿಯಾಗಿ ಜ್ಞಾನದ ಹರವಾಗಿ ಹರಿದು ಈ ನೆಲದ ಸಾಹಿತ್ಯ ಕ್ಷೇತ್ರ ಗಟ್ಟಿಯಾಗುತ್ತ ಸಾಗಿತು. ಇಷ್ಟೊಂದು ಇತಿಹಾಸವಿರುವ ಗವಿಮಠಕ್ಕೆ ಪ್ರಾಚೀನತೆಯ ಸೊಬಗು, ಅರಿವಿನ ಮೆರಗು ಇದೆ.

ಇವರ ಮೂಲ ಹೆಸರು ಉಮಾಪತಿದೇವರು. ಇವರ ಗುರುಗಳು ಮತ್ತು ಶ್ರೀ ಗವಿಮಠದ ೧೬ ನೇ ಪೀಠಾಧಿಪತಿಗಳು ಆದ ಶ್ರೀ.ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಮಹಾಸ್ವಾಮಿಗಳು ಇವರಿಗೆ ಶಿವಶಾಂತವೀರ ಮಹಾಸ್ವಾಮಿಗಳೆಂದು ಕರೆದರು. ಶಿಕ್ಷಕರಾಗಿ ಕೆಲಸ ಮಾಡಿದ್ದರಿಂದಲೇ ಅವರು ಗುರು ಮರಿಶಾಂತರು ಹೊತ್ತಿಸಿದ ಅಕ್ಷರ ಜ್ಯೋತಿಯನ್ನು ಈ ಪ್ರದೇಶದ ಎಲ್ಲ್ಲೆಡೆಗೆ ಬೆಳಗಿದರು. ಇವರ ಚರಿತ್ರೆ ತೆರೆದ ಪುಟ. ಲಿಂಗಪೂಜೆ, ಜಪ-ತಪ, ಶಿವಯೋಗ, ಪವಾಡ ಸದೃಶ್ಯ ಘಟನೆಗಳಿಗೆ ಗವಿಮಠವು ಸಾಕ್ಷಿಯಾಗಲು ಶಿವಶಾಂತವೀರ ಮಹಾಸ್ವಾಮಿಗಳ ಪಾತ್ರ ದೊಡ್ಡದು ಎಂದರು. ಪ್ರಾಚಾರ್ಯ ರಾಜರಾಜೇಶ್ವರರಾವ್ ಅಧ್ಯಕ್ಷತೆವಹಿಸಿ ಮಾತನಾಡಿದರು. ಉಪನ್ಯಾಸಕರಾದ ಜಯಸಿಂಹ, ಖಾಜಾವಲಿ, ಬಸವಂತಪ್ಪ, ಶಿವಪ್ರಸಾದ ಹಾದಿಮನಿ, ಪ್ರಮೋದ ಜೈನ್, ರಾಮು ವಡಕಿ ಮೊದಲಾದವರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!