ಸಂತ್ರಸ್ತ ದೇಶದ ಒಂದೇ ಮೊರೆ ಅಧಿಕಾರ ಬಿಡಿ ಮೋದಿ ದೊರೆ: ವೆಲ್ಫೇರ್ ಪಾರ್ಟಿಯ ರಾಷ್ಟ್ರೀಯ ಅಭಿಯಾನ

ಕೊಪ್ಪಳ: ಆಡಳಿತ ನಡೆಸಲು ಸಂಪೂರ್ಣ ವಿಫಲ ಗೊಂಡಿರುವ ಕೆಂದ್ರದ ಮೋದಿ ಸರ್ಕಾರದ ಆಡಳಿತ ಮೆ ೩೦ರಂದು ಎರಡು ವರ್ಷ ಪೂರ್ಣಗೊಂಡಿರುವ ಸಂದರ್ಭದಲ್ಲಿ ದೇಶದ ಯುವಕರಿಗೆ, ಕಾರ್ಮಿಕರಿಗೆ ಹಾಗೂ ಬಡವರನ್ನು ನಿರುದ್ಯೊಗಿಗಳನ್ನಾಗಿ ಮಾಡಿ ಕೇಂದ್ರ ಸರಕಾರದ ವಿರುದ್ಧ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ರಾಜಿನಾಮೆ ಕೊಡಬೇಕೆಂದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಉಚಿತವಾಗಿ ರೇಷನ್ ನೀಡಿ ಜೀವನ ರಕ್ಷಿಸಿ, ಸರ್ಕಾರದ ನಿರ್ಲಕ್ಷ್ಯದಿಂದ ಸಾವಿಗೆ ತುತ್ತಾದ ಶಿಕ್ಷಕರ ಕುಟುಂಬಕ್ಕೆ ಪರಿಹಾರ ಮತ್ತು ಭದ್ರತೆ ಒದಗಿಸಿ ಹಾಗೂ ಇನ್ನು ಅನೇಕ ಘೋಷಣೆಗಳೊಂದಿಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಮೇ ೩೦ ರಿಂದ ರಾಷ್ಟ್ರೀಯ ಅಭಿಯಾನವನ್ನು ನಡೆಸಿರುವ ರಾಷ್ಟ್ರ ಮಟ್ಟದ ಅಭಿಯಾನಕ್ಕೆ ಕೊಪ್ಪಳ ನಗರದ ಯುವಕರು, ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಿಗಳು ಪಕ್ಷದ ಪೋಸ್ಟರ್ ಮತ್ತು ಪ್ಲೇ ಕಾರ್ಡ್ ತೋರಿಸುವ ಮೂಲಕ ಪಕ್ಷದ ಅಭಿಯಾನಕ್ಕೆ ಬೆಂಬಲ ಸೂಚಿಸಿದರು ಹಾಗೂ ಮೇ ೩೧ ರಂದು ರಾಷ್ಟ್ರ ಪತಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿಯನ್ನು ಸಲ್ಲಿಸಲಾಗುವುದು ಎಂದು ಜಿಲ್ಲಾಧ್ಯಕ್ಷರಾದ ಅದಿಲ್ ಪಟೇಲ್ ಅವರು ತಿಳಿಸಿದರು.

Please follow and like us:

Leave a Reply

Your email address will not be published. Required fields are marked *

WhatsApp