ಸಖಿ–ಒನ್ ಸ್ಟಾಫ್ ಸೆಂಟರ್‌ ನಿಂದ ನಿರ್ಗತಿಕ ಮಹಿಳೆಯ ಸಂರಕ್ಷಣೆ


ಕೊಪ್ಪಳ: ನಿರ್ಗತಿಕ ಮತ್ತು ಮಾನಸಿಕ ಅಸ್ವಸ್ಥತೆ, ಅನಾರೋಗ್ಯ ಪೀಡಿತ ಮಹಿಳೆಯೋರ್ವಳನ್ನು ಕೊಪ್ಪಳ ಜಿಲ್ಲೆಯಲ್ಲಿನ ಸಖಿ–ಒನ್ ಸ್ಟಾಫ್ ಸೆಂಟರ್‌ನ ತಂಡವು ರಕ್ಷಣೆಯ ಮಾಡಿ, ಉಚಿತ ವೈದ್ಯಕೀಯ ತಪಾಸಣೆ, ಮನೋಚಿಕಿತ್ಸೆ, ಪೊಲೀಸ್ ಹಾಗೂ ಜಿಲ್ಲಾ ಆಸ್ಪತ್ರೆಯ ನೆರವಿನೂಂದಿಗೆ ಬಳ್ಳಾರಿಯ ರಾಜ್ಯ ಮಹಿಳಾ ವಸತಿ ನಿಲಯ (ಸ್ತಿçà ಸೇವಾ ನಿಕೇತನ) ದಲ್ಲಿ ಪೋಷಣೆ ಮತ್ತು ರಕ್ಷಣೆ ಭದ್ರತೆಯನ್ನು ಒದಗಿಸಲಾಗಿದೆ. ಮಹಿಳೆಗೆ ಇಬ್ಬರು ಮಕ್ಕಳಿದ್ದು, 15 ವರ್ಷದ ಮಗನನ್ನು ಬಾಲಕರ ಬಾಲಮಂದಿರದಲ್ಲಿ, 13 ವರ್ಷದ ಮಗಳನ್ನು ಬಾಲಕಿಯರ ಬಾಲಮಂದಿರ, ಕೊಪ್ಪಳದಲ್ಲಿ ಅಭಿರಕ್ಷಣೆ, ಪೋಷಣೆ ಮತ್ತು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಮಹಿಳೆಯು ಕುಕನೂರು ತಾಲ್ಲೂಕಿನವರೆಂದು ತಿಳಿದು ಬಂದಿದ್ದು, ಕುಕನೂರು ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೆರವಿನೊಂದಿಗೆ ಬಾಧಿತಳ ಕುಟುಂಬದ ಸಂಬAಧಿಕರನ್ನು ಪತ್ತೆಹಚ್ಚಲಾಗಿದ್ದು, ಆಕೆಯ ಗಂಡ ಮರಣ ಹೊಂದಿ 12 ವರ್ಷಗಳಾಗಿವೆ. ಕುಟುಂಬಸ್ಥರು ಬಾಧಿತಳಿಗೆ ಯಾವುದೇ ಆಶ್ರಯವನ್ನು ನೀಡದೆ ಮನೆಯಿಂದ ಹೊರಹಾಕಿದ್ದಾರೆ. ಬಾಧಿತಳು ಖಿನ್ನತೆಗೆ ಒಳಗಾಗಿ ಊರಿಂದ ಊರಿಗೆ ಅಲೆದಾಡುತ್ತಾ, ದೇವಸ್ಥಾನಗಳಲ್ಲಿ ಭಿಕ್ಷಾಟನೆ ಮಾಡುತ್ತಾ, ಊಟಕ್ಕೆ ಗತಿಯಿಲ್ಲದೇ ಪರಪುರುಷರ ದಾಸ್ಯತೆಗೆ ಒಳಗಾಗಿ ಅನಾರೋಗ್ಯಕ್ಕೆ ಒಳಗಾಗಿರುತ್ತಾರೆ.
ಸಖಿ ತಂಡವು ಜಿಲ್ಲಾ ಆಸ್ಪತ್ರೆಯ ವೈದ್ಯರ ನೆರವಿನೊಂದಿಗೆ, ಜಿಲ್ಲಾಧಿಕಾರಿಗಳ ಆದೇಶದೊಂದಿಗೆ ಮಹಿಳೆಯನ್ನು ಬಳ್ಳಾರಿಯ ಸ್ತಿçà ಸೇವಾ ನಿಕೇತನಕ್ಕೆ ದಾಖಲಿಸಲಾಗಿದೆ. ಈ ರಕ್ಷಣಾ ಕಾರ್ಯದಲ್ಲಿ ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳು, ಕುಕನೂರು ಪೊಲೀಸ್ ಸಬ್-ಇನ್ಸ್ಪೆಕ್ಟರ್, ಕೊಪ್ಪಳ ಮಹಿಳಾ ಪೊಲೀಸ್ ಠಾಣೆ, ಸಖಿ ಸೆಂಟರ್‌ನ ಆಡಳಿತಾಧಿಕಾರಿಗಳು, ಸಮಾಜ ಕಾರ್ಯಕರ್ತರು, ಸಖಿ ಸೆಂಟರ್‌ನ ಸಿಬ್ಬಂದಿಗಳು ಮತ್ತು 108 ಆರೋಗ್ಯ ಕವಚ ವಾಹನದ ಸಿಬ್ಬಂದಿಗಳು ಪಾಲ್ಗೊಂಡಿದ್ದರು ಎಂದು ಸಖಿ ಒನ್ ಸ್ಟಾಫ್ ಸೆಂಟರ್‌ನ ಘಟಕ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!