ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಯುವಕರು ಶ್ರಮಿಸಬೇಕು : ಉಮಾದೇವಿ ಸೊನ್ನದ


ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ಮಹಿಳೆಯರ ಸಾಕ್ಷರತಾ ಪ್ರಮಾಣ ಕಡಿಮೆ ಇದ್ದು, ಈ ಸಾಕ್ಷರತಾ ಪ್ರಮಾಣವನ್ನು ಹೆಚ್ಚಿಸಲು ಕಲಿತ ಯುವಕ ಯುವತಿಯರು ಶ್ರಮಿಸಬೇಕು ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ಉಮಾದೇವಿ ಸೊನ್ನದ ಅವರು ಹೇಳಿದರು.
ಅಂತಾರಾಷ್ಟಿçÃಯ ಸಾಕ್ಷರತಾ ದಿನಾಚರಣೆಯ ಅಂಗವಾಗಿ ನಗರದ ತಾಲ್ಲೂಕು ಪಂಚಾಯತಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸಂಪೂರ್ಣ ಸಾಕ್ಷರತಾ ಗ್ರಾಮ ಪಂಚಾಯತಿಗಳನ್ನಾಗಿಸಲು ಗ್ರಾಮ ಪಂಚಾಯತಿಯವರು, ಸ್ಥಳೀಯ ಇಲಾಖೆಯವರು ಸಹಕಾರ ನೀಡಬೇಕು. ಮಹಿಳಾ ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಸ್ವಸಹಾಯ ಸಂಘದವರು ಹೆಚ್ಚಿನ ಆಸಕ್ತಿ ವಹಿಸಿ ಕಲಿಯಲು ಪ್ರೇರೇಪಣೆ ನೀಡಬೇಕು ಎಂದು ಹೇಳಿದರು.
ನವ ಸಾಕ್ಷರರಿಗೆ ಪ್ರಮಾಣ ವಚನ ಬೋಧಿಸಿ, ಮಾತನಾಡಿದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಎಂ. ಮಲ್ಲಿಕಾರ್ಜುನ ಅವರು, ಅತೀ ಹೆಚ್ಚು ಅನಕ್ಷರಸ್ಥರಿರುವ ಗ್ರಾಮ ಪಂಚಾಯತಿಗಳನ್ನು ಗುರುತಿಸಿ ಅಲ್ಲಿರುವ 15 ರಿಂದ 50 ವರ್ಷ ವಯೋಮಾನದ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸಲು ಶ್ರಮಿಸಬೇಕು. ಕಲಿತವರು ತಮ್ಮ ಗ್ರಾಮದಲ್ಲಿನ, ತಮ್ಮ ಮನೆಯಲ್ಲಿಯ ಅನಕ್ಷರಸ್ಥ ಬಾಂಧವರಿಗೆ ಸ್ವ-ಇಚ್ಛೆಯಿಂದ ಕಲಿಸಿದರೆ ಕಲಿತ ಋಣವನ್ನು ತೀರಿಸಿದಂತೆ ಆಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕಿನ ಹಿಂದಿನ ಪ್ರೇರಕರು ಮತ್ತು ಸಾಕ್ಷರತಾ ಸಿಬ್ಬಂದಿಗಳಾದ ಸೋಮಶೇಖರ ತುಪ್ಪದ, ಅಮರೇಶ ಕರಡಿ ಹಾಗೂ ತಾಲ್ಲೂಕು ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!