ಸಾರಿಗೆ ನೌಕರರ ಪ್ರತಿಭಟನೆ ಬಸ್ ಸಂಚಾರ ಸ್ಥಬ್ದ ಪ್ರಯಾಣಿಕರ ಪರದಾಟ

ಅಖಿಲ ವಾಣಿ ಸುದ್ದಿ
ಸಿಂಧನೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಆರನೇ ವೇತನ ಆಯೋಗ ಜಾರಿಗಾಗಿ ಒತ್ತಾಯಿಸಿ ಮುಷ್ಕರ ನೆಡೆಸಿದ ಹಿನ್ನಲೆಯಲ್ಲಿ ಸಿಂಧನೂರಿನಲ್ಲಿ ಸಂಪೂರ್ಣ ಸಾರಿಗೆ ಬಸ್ ಸಂಚಾರ ಸ್ಥಬ್ದ ವಾಗಿತ್ತು .ಇದರಿಂದ ಪ್ರಯಾಣಿಕರಿಗೆ ಬಸ್ ಗಳು ಸಂಚಾರವಿಲ್ಲದ ತುಂಬಾ ತೊಂದರೆ ಅನುಭವಿಸಬೇಕಾಯಿತು.
ತಾಲೂಕಿನಲ್ಲಿ ಬಸ್ ಸಂಚಾರ ಸ್ಥಗಿತ ಗೊಂಡಿದ್ದರಿಂದ ಜನರು ಖಾಸಗಿ ವಾಹನಗಳ ಮೂಲಕ ನಗರಕ್ಕೆ ಮತ್ತು ನಗರದಿಂದ ಹಳ್ಳಿಗಳಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಯಿತು.ಸಾರಿಗೆ ನೌಕರರ ಬೇಡಿಕೆಗಳಿಗೆ ಸ್ಪಂದನೆ ಮಾಡದ ಸರ್ಕಾರದ ವಿರುದ್ಧ ಪ್ರಯಾಣಿಕರು ಶ್ಯಾಪ ಹಾಕುವ ದೃಶ್ಯ ಕಂಡು ಬಂತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಇದೆ ಗತಿ.ಇವರು ಏನು ಮಾಡೋದಿಲ್ಲ. ಬರೀ ಸುಳ್ಳಿನ ಸರ್ಕಾರ ಎಂದು ಮಾತನಾಡುವ ಸಂದರ್ಭಗಳು ಕಂಡು ಬಂತು.ಸರ್ಕಾರ ಈ ಹಿಂದೆ ಸಾರಿಗೆ ನೌಕರರ ಬೇಡಿಕೆಗಳನ್ನೂ ಈಡೇರಿಸುವ ಭರವಸೆ ನೀಡಿತ್ತು.ಆದರೆ ಈಗ ಚುನಾವಣೆ ನೆಪ ಹೇಳುತ್ತಿರುವ ಪ್ರಸಂಗದಲ್ಲಿ ಸಾರಿಗೆ ನೌಕರರ ಮುಷ್ಕರ ಸರ್ಕಾರದ ಗಮನ ಸೆಳೆಯಲು ಮತ್ತಷ್ಟು ಪ್ರಯತ್ನ ಮಾಡಿದೆ. ಸಿಂಧನೂರಿನಲ್ಲಿ ಸಾರಿಗೆ ನೌಕರರು ಕೆಲಸಕ್ಕೆ ಗೈರು ಹಾಜರಾಗುವ ಮೂಲಕ ಸರ್ಕಾರದ ವಿರುದ್ಧ ಮತ್ತೊಮ್ಮೆ ಸಮರ ಸಾರಿರುವದೂ ಕಂಡುಬಂತು. ಈ ಮುಷ್ಕರದಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಬಾರದೆ ಹಾಗೂ ವ್ಯಾಪಾರ ವಹಿವಾಟುಗಳಿಗೆ ಮಂಕು ಕವಿದ ವಾತಾವರಣ ಸೃಷ್ಟಿ ಯಾಗಿತ್ತು. ಸರ್ಕಾರಿ ಬಸ್ ಸಂಚಾರಗಳು ಇಲ್ಲದ ಕಾರಣ ಪ್ರಯಾಣಿಕರು ಖಾಸಗಿ ವಾಹನಗಳ ಮೂಲಕ ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಮಾಡುವ ದೃಶ್ಯ ಸಾಮಾನ್ಯವಾಗಿತ್ತು.ಈ ಮುಷ್ಕರದಿಂದ ಸರ್ಕಾರಕ್ಕೆ ಲಕ್ಷಾಂತರ ರೂ ಗಳು ನಷ್ಟ ಸಂಭವಿಸಿದೆ. ಜನರಿಗೆ ಸರ್ಕಾರದ ತೊಂದರೆ ಒಂದುಕಡೆಯಾದರೆ ಇನ್ನೂ ಬೇಸಿಗೆ ಕಾಲದ ರಣ ಬಿಸಿಲಿನ ತೊಂದರೆ ಇನ್ನೊಂದು ಕಡೆಯಾಗಿತ್ತು.ಪ್ರಯಾಣಿಕರು ಸರ್ಕಾರಕ್ಕೆ ಶಾಪ ಹಾಕುತ್ತಾ ಪ್ರಯಾಣಿಸುವುದು ಕಂಡು ಬಂದಿದೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!