ಸಾರಿಗೆ ನೌಕರರ ಹೋರಾಟಕ್ಕೆ ಬೆಂಬಲಿಸಿ ಹಸಿರು ಸೇನೆಯಿಂದ ಜಿಲ್ಲಾಧಿಕಾರಿಗೆ ಮನವಿ

ಅಖಿಲ ವಾಣಿ ಸುದ್ದಿ
ಕೊಪ್ಪಳ : ಇಂದು ರಾಜ್ಯಾದ್ಯಂತ ಸಾರಿಗೆ ನೌಕರರು ಹಮ್ಮಿಕೊಂಡಿರುವ ಅನಿರ್ಧಿಷ್ಟ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಂಬಲ ವ್ಯಕ್ತಪಡಿಸಿದೆ.
ಸಾರಿಗೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ನೌಕರರು ಕೂಡಾ ರೈತರ ಮಕ್ಕಳಾಗಿದ್ದು, ಅವರ ಬಹುದಿನದಿಂದ ಬೇಡಿಕೆಗಳನ್ನು ಸರ್ಕಾರ ನಿರ್ಲಕ್ಷಿಸಿದ್ದು ಕಾರಣ ಕಳೆದ ಮೂರು ತಿಂಗಳ ಹಿಂದೆ ಕರ್ನಾಟಕ ರಾಜ್ಯ ಸಂಘ ಹಾಗೂ ಹಸಿರುಸೇನೆ ಬೆಂಬಲಿಸಿದ್ದು, ಈಗ ರಾಜ್ಯ ಸರ್ಕಾರವು ಈ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದು ಸರ್ಕಾರ ಕೊಟ್ಟ ಮಾತನ್ನು ನಡೆಸದೆ ಅನ್ಯ ಮಾರ್ಗಕ್ಕೆ ಹೋಗುತ್ತಿರುವ ಸರ್ಕಾರವನ್ನು ಸರಿಯಾದ ದಾರಿಗೆ ತರಬೇಕಾಗಿದೆ ದುಡಿಯುವ ವರ್ಗಕ್ಕೆ ನ್ಯಾಯ ದೊರಕಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ದುಡಿಯುವ ಕಾರ್ಮಿಕರ ಪರವಾಗಿ ನಿಲ್ಲುವುದು ರೈತ ಸಂಘದ ಧರ್ಮವಾಗಿದೆ.
ಕಾರಣ ಇಂದು ಪ್ರಾರಂಭವಾಗಿರುವ ಸಾರಿಗೆ ನೌಕರರ ಹೋರಾಟಕ್ಕೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಪೂರ್ಣ ಬೆಂಬಲಿಸುತ್ತಾ ಚಳುವಳಿಯ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಹನುಮಂತಪ್ಪ ಹೊಳೆಯಾಚೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಇಸ್ಮಾಯಿಲ್ ನಾಲಬಂದ್, ತಾಲೂಕ ಅಧ್ಯಕ್ಷ ಶ್ರೀನಿವಾಸ ಎಂ ವಡ್ಡರ, , ಹುಲಗಪ್ಪ ಹೇರೂರು, ಶ್ರೀಧರಗೌಡ ಪೋಲಿಸ್ ಪಾಟೀಲ್, ಹುಲಗಪ್ಪ ಆಡಿನ್, ಅಯ್ಯಪ್ಪ ಯಾಧವ, ಭೋಜಪ್ಪ ಕಾರಟಗಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!