ಸಾಲಬಾಧೆ ವಿಷ ಸೇವಿಸಿ ರೈತನ ಆತ್ಮಹತ್ಯೆ

ಕಾರಟಗಿ : ಸಮೀಪದ ಚಳ್ಳೂರು ಗ್ರಾಮದ ನಿವಾಸಿ ರೈತ ಶಿವರೆಡ್ಡಪ್ಪ ವಯಸ್ಸು(೬೮) ಸಾಲ ಬಾಧೆಯಿಂದ ವಿಷ ಸೇವಿಸಿ ಸಾವಿಗೆ ಶರಣಗಿದ್ದಾರೆ.ಶಿವರೆಡ್ಡಿಪ್ಪ ತಂದೆ ಭೀಮಣ್ಣ ಪ್ಯಾಟಿ ಇವರ ಹೆಸರಿನಲ್ಲಿ ಚಳ್ಳೂರು ಗ್ರಾಮದ ಸರ್ವೆ ನಂಬರ್ ೨೦ರಲ್ಲಿ ಒಂದು ಎಕರೆ ಜಮೀನು ಇದ್ದು ಜಮೀನನ್ನು ಸಾಗುವಳಿ ಮಾಡುತ್ತಿದ್ದರು ಸದರಿ ಜಮೀನಿನ ಮೇಲೆ ವಿಎಸ್‌ಎಸ್‌ಎನ್’ನಲ್ಲಿ ೨೦ ಸಾವಿರಗಳ ಸಾಲ ಮಾಡಿದ್ದು ಹಾಗೆ ಖಾಸಗಿಯವರಲ್ಲಿ ಸುಮಾರು ೬ ಲಕ್ಷ ಸಾಲ ಮಾಡಿದ್ದು ಈ ಸಾಲದ ಸಂಬಂಧ ತುಂಬಾ ಚಿಂತೆಗೀಡಾಗಿ ಇತ್ತೀಚೆಗೆ ಮಾನಸಿಕವಾಗಿ ನೊಂದಿದ್ದರು. ಜುಲೈ-೨೨ ಗುರುವಾರದಂದು ರಾತ್ರಿ ೮ರ ಸುಮಾರಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!