ಸೂಕ್ಷ್ಮ ಹನಿ ನೀರಾವರಿ ಯೋಜನೆ ರದ್ದುಗೋಳಿಸಿ ಕಾಲುವೆ ಮೂಲಕ ರೈತರಿಗೆ ನೀರು ಕೊಡಿ:ಗೌಡರ

ಕೊಪ್ಪಳ:ಅವೈಜ್ಞಾನಿಕ ವಾಗಿರುವ ಮತ್ತು ಹಣಕೋಳ್ಳೆ ಹೋಡೆಯಲು ಭ್ರಷ್ಟರಿಗೆ ಅನುಕೂಲವಾಗಿರುವ ಶಿಂಗಟಾಲೂರು ಸೂಕ್ಷ್ಮ ಹನಿ ನೀರಾವರಿ ಯೋಜನೆಯನ್ನು ರದ್ದುಗೋಳಿಸಿ ಕಾಲುವೆ ಮೂಲಕ ರೈತರ ಹೊಲಗಳಿಗೆ ನೀರು ಪೂರೈಸುವ ಕಾಮಗಾರಿ ಜಾರಿಗೊಳಿಸುವಂತೆ ಮುಂಡರಗಿಯ ಹಿರಿಯ ಮುಖಂಡ ವೈ.ಎನ್ ಗೌಡರ ಸರಕಾರಕ್ಕೆ ಒತ್ತಾಯ ಪಡಿಸಿದ್ದಾರೆ.
ಅವರು ಗುರುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಶಿಂಗಟಾಲೂರು ಏತ ನೀರಾವರಿ ಯೋಜನೆ ಸಂಬಂದಿಸಿದ ಅಧಿಕಾರಿ ಮತ್ತು ಗುತ್ತೆದಾರರ ಮೋಸದಿಂದ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷದಿಂದ ಸೂಕ್ಷ್ಮ ಹನಿ ನೀರಾವರಿ ಯೋಜನೆ ಸಂಪೂರ್ಣ ವಿಪಲಗೊಂಡಿದೆ ರೈತರಿಗೆ ಗಾಳಿಗೋಪೂರವಾಗಿದೆ ನೂರಾರು ಕೊಟಿ ಹಣ ಪೋಲಾಗಿದೆ ಇದಕ್ಕೆ ಕಾರಣಿಕರ್ತ ಏಜೇನ್ಸಿ ಸಂಸ್ಥೆಗಳಾದ ನೆಟಾಫಿನ್, ಮೇಘಾ, ಜೈನ್, ಆರ್ ಎನ್ ಶೇಟ್ಟಿ ದಂತಹ ಸಂಸ್ಥೆ ಮತ್ತು ಗುತ್ತೆದಾರರ ಮೇಲೆ ತನಿಖೆ ನಡಸಬೇಕು ಕಪ್ಪು ಪಟ್ಟಿಗೆ ಸೇರಿಸಬೇಕು ಈ ಯೋಜನೆ ಅಡಿಯಲ್ಲಿ ಕೊಪ್ಪಳ ಯಲಬುರ್ಗಾ, ಗದಗ ಮುಂಡರಗಿ ಭಾಗದ ರೈತರಿಗೆ ತುಂಬಾ ಅನ್ಯಾಯವಾಗಿದೆ ಎಂದು ಟೀಕಿಸಿದರು.
ಬಳ್ಳಾರಿ ಜಿಲ್ಲೆ ಹುವಿನ ಹಡಗಲಿ ಸೇರಿದಂತೆ ಈ ಭಾಗದ ೨೬೫೨೨೯ ಎಕ್ಕರೆ ಭೂಮಿಗಳಿಗೆ ನೀರು ಉಣಿಸುವ ಈ ಯೋಜನೆ ಭ್ರಷ್ಠಾಚಾರದಲ್ಲಿ ತೋಡಗಿ ರೈತರಿಗೆ ಅನ್ಯಾಯಮಾಡಿದೆ ಬರದ ನಾಡು ಹಸಿರು ನಾಡನ್ನಾಗ್ಗಿ ಪರಿವರ್ಥಿಸಲು ಈ ಹಿಂದೆ ಸರಕಾರ ಇದಕ್ಕೆ ಅಡಿಗಲ್ಲು ಹಾಕಿದ್ದು ಸರಿ ಅಷ್ಟೆ ಆದರೆ ಕಳಪೆ ಕಾಮಗಾರಿಮಾಡಿ ಹಣ ಪಡೆಯುವರ ವಿರುದ್ದ ಮುಂದೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವದು ಜನಾಂದೋಲನವಾಗಿ ಪರಿವರ್ತಿಸಿ ತಪ್ಪಿಸ್ತರ ವಿರುದ್ದ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವದೆಂದು ವೈ.ಎನ್ ಗೌಡರ ಎಚ್ಚರಿಸಿದರು ಈ ಸಂದರ್ಭದಲ್ಲಿ ಹೋರಾಟಗಾರರಾದ ಟಿ ರತ್ನಕರ್, ರೇವಪ್ಪ ಕಟ್ಟಿಮನಿ, ನಿಂಗಪ್ಪ ಕುಂಬಾರ ಅನೇಕರು ಇದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!