ಸೈಕಲ್ ಮೂಲಕ ಮತದಾನ ಕೇಂದ್ರಕ್ಕೆ ತೆರಳಿದ ನಟ ವಿಜಯ್

ತಮಿಳುನಾಡು: ವಿಧಾನಸಭಾ ಚುನಾವಣೆ ಪ್ರಾರಂಭವಾಗಿದ್ದು, ಖ್ಯಾತ ನಟ ವಿಜಯ್ ತಮ್ಮ ಮನೆಯಿಂದ ನೀಲಂಗರೈನ ಮತದಾನ ಕೇಂದ್ರಕ್ಕೆ ಸೈಕಲ್ ಮೂಲಕ ತೆರಳಿ ಮತ ಚಲಾಯಿಸಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ವಿರೋಧಿಸಿ ಅವರು ಸೈಕಲ್‌ನಲ್ಲಿ ತೆರಳಿ ಮತದಾನ ಮಾಡಿದ್ದಾರೆ ಎಂದು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ನಟ ವಿಜಯ್ ಮತದಾನ ಕೇಂದ್ರಕ್ಕೆ ಸೈಕಲ್‌ನಲ್ಲಿ ಆಗಮಿಸುತ್ತಿದ್ದಂತೆ ಅವರೊಂದಿಗೆ ಅಭಿಮಾನಿಗಳು ಕೂಡಾ ಕಿಕ್ಕಿರಿದು ನರೆದಿದ್ದರು. ಅವರು ಮತ ಚಲಾಯಿಸಿದ ನಂತರ, ಅವರನ್ನು ನೋಡಲು ಜನರು ಗುಂಪುಗೂಡತೊಡಗಿದ್ದು, ಪೊಲೀಸರು ಜನಸಂದಣಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ನಂತರ ನಟ ಸಿಬ್ಬಂದಿಯೊಬ್ಬರ ದ್ವಿಚಕ್ರ ವಾಹನದ ಮೂಲಕ ವಾಪಾಸು ಹೊರಡಬೇಕಾಯಿತು.
ಮಂಗಳವಾರ ಬೆಳಿಗ್ಗೆ ಚೆನ್ನೈ ಸುತ್ತಮುತ್ತಲಿನ ವಿವಿಧ ಮತದಾನ ಕೇಂದ್ರಗಳಲ್ಲಿ ಖ್ಯಾತ ನಟರಾದ ರಜನಿಕಾಂತ್, ಎಂಎನ್‌ಎಂ ನಾಯಕ ಕಮಲ್ ಹಾಸನ್,ಅಜಿತ್ ಮತ ಚಲಾಯಿಸಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆ ಇಂದು ಒಂದೆ ಹಂತದಲ್ಲಿ ನಡೆಯಲಿದೆ. ಮೇ ೨ ಚುನಾವಣಾ ಫಲಿತಾಂಶ ಹೊರಬೀಳಲಿದೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!