ಸ್ವಪಕ್ಷ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಕಾರ್ಯಕರ್ತರು


ಅಖಿಲ ವಾಣಿ ಸುದ್ದಿ
ಕಾರಟಗಿ : ತಾಲೂಕ ಜಾತ್ಯತೀತ ಜನತಾದಳ ಪಕ್ಷದ ಕಾರ್ಯಕರ್ತರ ಸಮಾವೇಶ ಹಾಗೂ ಸೇರ್ಪಡೆ ಕಾರ್ಯಕ್ರಮ ಕಾರಟಗಿ ನಗರದ ೨೩ನೇ ವಾರ್ಡ್ ದೇವಿ ಕ್ಯಾಂಪ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮಕ್ಕೆ ಆಗಮಿಸಿದ ವಾರ್ಡಿನ ಜನರು ತಮ್ಮ ಕುಂದುಕೊರತೆಗಳನ್ನು ಪಕ್ಷದ ಜಿಲ್ಲಾಧ್ಯಕ್ಷರಾದ ಅಮರೇಗೌಡ ಪಾಟೀಲ್ ಕುಷ್ಟಗಿ ಇವರಲ್ಲಿ ತಿಳಿಸಿ ಮುಂದಿನ ದಿನಗಳಲ್ಲಿ ಪರಿಹಾರಕ್ಕೆ ಮನವಿ ಮಾಡಿಕೊಂಡರು, ಮನವಿ ಆಲಿಸಿದ ನಂತರ ಜಿಲ್ಲಾಧ್ಯಕ್ಷರು ಮಾತನಾಡಿ ನಮ್ಮ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಆಡಳಿತದಲ್ಲಿ ಇರುವ ರಾಷ್ಟ್ರೀಯ ಪಕ್ಷಗಳ ಬಗ್ಗೆ ಜನರಿಗೆ ಮನವರಿಕೆ ಆಗುತ್ತದೆ ಕಾರಣ ಪೆಟ್ರೋಲ್ ಬೆಲೆ ಡೀಸೆಲ್ ಬೆಲೆ ನಿತ್ಯ ಉಪಯೋಗ ಮಾಡುವ ವಸ್ತುಗಳು ಪೂರ್ತಿ ದುಬಾರಿಯಾಗಿ ಆಡಳಿತ ಪಕ್ಷ ಹಾಗೂ ಹಿಂದಿನ ಕಾಂಗ್ರೆಸ್ ಪಕ್ಷಗಳು ದೇಶವನ್ನು ಹಾಳು ಮಾಡಿವೆಆದಕಾರಣ ಯಾವುದೇ ಕಾರಣಕ್ಕೂ ಮುಂದಿನ ದಿನಗಳಲ್ಲಿ ಚುನಾವಣೆ ಬಂದಾಗ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತಂದರೆ ಸಾರ್ವಜನಿಕರಿಗೆ ಒಳ್ಳೆಯ ಕೆಲಸ ಮಾಡಲುಅನುಕೂಲವಾಗುತ್ತದೆ ನಿಮ್ಮ ಗ್ರಾಮದಲ್ಲಿರುವ ಮುಖ್ಯವಾಗಿ ಗೋಮಾಳದ ಭೂಮಿ ಯಲ್ಲಿ ಸುಮಾರು ೪೦ ವರ್ಷಗಳಿಂದ ವಾಸವಿರುವ ಜನರಿಗೆ ಯಾವುದೇ ಪಟ್ಟಾಗಳು ಇಲ್ಲವೆಂದು ನನ್ನ ಗಮನಕ್ಕೆ ಬಂದಿದೆ ಮುಂದಿನ ದಿನಗಳಲ್ಲಿ ಈ ಸಮಸ್ಯೆಯನ್ನು ಸರಕಾರದಲ್ಲಿ ಯತ್ಹಿಡಿಯಲು ಮಾನ್ಯ ಮಾಜಿ ಮುಖ್ಯಮಂತ್ರಿಗಳಿಗೆ ಕುಮಾರಸ್ವಾಮಿಯವರಿಗೆ ನಿಮ್ಮನ್ನು ಕರೆದುಕೊಂಡು ಬೆಂಗಳೂರಿಗೆ ತೆರಳಿ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು ತದನಂತರ ಕಾರಟಗಿ ತಾಲೂಕ ಜೆಡಿಎಸ್ ಅಧ್ಯಕ್ಷರು ಇ.ಆನಂದ ಬಾಬು ಅವರು ಮಾತನಾಡಿ ಕಾರ್ಯಕರ್ತರಲ್ಲಿ ಪಕ್ಷವನ್ನು ಬಲಪಡಿಸಬೇಕೆಂದು ಮನೆವಿಮಾಡಿದರು. ಕಾರಟಗಿ ತಾಲೂಕು ಜೆಡಿಎಸ್ ಉಪಾಧ್ಯಕ್ಷರಾದ ವಿ.ವೆಂಕಟೇಶ್ವರ ರಾವ್ ಮಾತನಾಡಿ ಮುಂದಿನ ಕಾರಟಗಿ ಪುರಸಭೆ ಚುನಾವಣೆಯಲ್ಲಿ ೨೩ನೇ ವಾರ್ಡ್ ಒಂದು ಮಾದರಿ ವಾರ್ಡ ಆಗಿ ಮಾಡಲು ಜೆಡಿಎಸ್ ಪಕ್ಷದಿಂದ ಸದಸ್ಯರನ್ನು ಗೆಲ್ಲಿಸಿ ತರಬೇಕೆಂದು ಮನವಿ ಮಾಡಿದರು ನಿಮ್ಮಗ್ರಾಮದ ನೀರಿನ ಟ್ಯಾಂಕಿನ ಸಮಸ್ಯೆಯನ್ನು ಪುರಸಭೆಯಲ್ಲಿ ತಿಳಿಸಿ ಪರಿಹಾರ ಮಾಡುವುದಾಗಿ ಇದಕ್ಕೆ ಗ್ರಾಮದ ಸಂಪೂರ್ಣ ಜನರ ಬೆಂಬಲ ಎಂದು ಕೋರಿದರು ಜೆಡಿಎಸ್ ಪಕ್ಷಕ್ಕೆ ಗ್ರಾಮದ ಅನೇಕ ಜನರು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಿಂದ ೩೦ ಜನರು ಜೆಡಿಎಸ್ ಸೇರ್ಪಡೆಗೊಂಡರು. ಮುಖಂಡರಾದ ತಿರುಪತಿ ಪವಾರ, ಛತ್ರಪ್ಪ ಅಮರಾಪುರ ಭದಯ್ಯ ಆರ್ ಗಂಗಾರಾವು ಬಸವರಾಜ ನಾಯಕ, ಅಮರೇಶ ಗುಲ್ಬರ್ಗ, ಸಂತೋಷ, ಪ್ರದೀಪ ಶುಭಾಶ್, ಗದೆಪ್ಪ ನಾಯಕ, ಸಂಗಪ್ಪ ನಾಯಕ, ಖಜಾಸಾಬ್ ಚಿಕನ್ ಸಾಬ್ ಕೊಟ್ರೇಶ ರಾಂಬಾಬು ರಾಜು ಪಕ್ಷಕ್ಕೆ ಸೇರಿದಂತೆ ಅನೇಕ ಮುಖಂಡರು ಸೇರಿ ಯುವಕರು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಅಮರೇಗೌಡ ಪಾಟೀಲ್, ಜಿಲ್ಲಾ ಉಪಾಧ್ಯಕ್ಷರಾದ ಪಂಪಯ್ಯ ಸ್ವಾಮಿ, ಗೌರವ ಅಧ್ಯಕ್ಷರಾದ ಕೃಷ್ಣಪ್ಪ, ತಾಲೂಕ ಅಧ್ಯಕ್ಷರಾದ ಈ ಆನಂದ ಬಾಬು ಉಪಾಧ್ಯಕ್ಷರಾದ ವಿ. ವೆಂಕಟೇಶ್ವರ ರಾವ್, ಪ್ರಧಾನ ಕಾರ್ಯದರ್ಶಿ ಮಲ್ಲೇಶಪ್ಪ ಈಚನಾಳ, ತಾಲೂಕ ಯುವಘಟಕ ಅಧ್ಯಕ್ಷ ಉರಕುಂದಪ್ಪ ನಾಯಕ್, ನಗರ ಘಟಕ ಅಧ್ಯಕ್ಷರಾದ ಗಣೇಶ ಪ್ರಭು ಶೆಟ್ಟರ್, ಶಿವಣ್ಣ ಪನ್ನಪೂರ, ಅಲ್ಪಸಂಖ್ಯಾತರ ಅಧ್ಯಕ್ಷರಾದ ಮಹಮ್ಮದ್ ಹನೀಫ್, ಶೇಖರಪ್ಪ, ಬಸವಣ್ಣಕ್ಯಾಂಪ್, ವೀರೇಶ ಬಸಾಪುರ, ಸತೀಶ ಜೆಪಿ ನಗರ, ರವಿ ಟೈಲರ್ ಇನ್ನಿತರರು ಉಪಸ್ಥಿತರಿದ್ದರು.

Please follow and like us:

One thought on “ಸ್ವಪಕ್ಷ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಕಾರ್ಯಕರ್ತರು

  • April 6, 2021 at 2:23 pm
    Permalink

    Super 💖

    News

    Reply

Leave a Reply

Your email address will not be published. Required fields are marked *

WhatsApp
error: Content is protected !!