ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತವನ್ನು ಜಾಗತಿಕ ಮಟ್ಟದಲ್ಲಿ ಒಂದು ಉತ್ತಮ ಜ್ಞಾನ
ಕೇಂದ್ರವನ್ನಾಗಿ ಪರಿವರ್ತಿಸಬಹುದು


ಕೊಪ್ಪಳ: ಕರ್ನಾಟಕವು ಮೊದಲ ಬಾರಿಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಕರಣೆ
ಮಾಡಿದ ರಾಜ್ಯವೆಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ
ಉಪಕುಲಪತಿಗಳಾದ ಪ್ರೊ. ಸಿದ್ದು ಪಿ ಆಲಗೂರ ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀ
ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಒಂದು ದಿನದ
ತರಬೇತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಿದ್ದರು. ಇದೇ ಶಿಕ್ಷಣ
ನೀತಿಯ ಅನುಸಾರವಾಗಿಯೇ ಪ್ರವೇಶಾತಿ ಪ್ರಕ್ರಿಯೆ, ಶೈಕ್ಷಣಿಕ ಅವಧಿಯ ನಿಗದಿ, ಹೊಸ
ಪಠ್ಯಕ್ರಮದ ಮಾದರಿಗಳು ಹಾಗೂ ಇನ್ನಿತರ ಚಟುವಟಿಕೆಗಳು ಸಾಗರೋಪಾಧಿಯಲ್ಲಿ
ಜರುಗುತ್ತಲಿವೆ. ಈ ಶಿಕ್ಷಣ ನೀತಿಯೂ ವಿದ್ಯಾರ್ಥಿಗಳಲ್ಲಿ ಉತ್ತಮ ಕೌಶಲ್ಯವನ್ನು, ಮೌಲ್ಯಗಳನ್ನು,
ನೈತಿಕತೆಯನ್ನು ಹಾಗೂ ವೈಚಾರಿಕತೆಯನ್ನು ನೀಡುವಲ್ಲಿ ಮತ್ತು ಶಿಕ್ಷಕರುಗಳಿಗೂ
ಕಲಿಕೆಯ ಹೊಸ ಹೊಸ ವಿಧಾನಗಳನ್ನು ತಿಳಿದುಕೊಳ್ಳುವಲ್ಲಿ ಸಹಕಾರಿಯಾಗಲಿದೆ. ಈ ಹೊಸ
ರಾಷ್ಟ್ರೀಯ ಶಿಕ್ಷಣ ನೀತಿಯು ಮುಂಬರುವ ದಿನಗಳಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ
ಒಂದು ಉತ್ತಮ ಜ್ಞಾನ ಕೇಂದ್ರವನ್ನಾಗಿ ಪರಿವರ್ತಿಸಬಹುದು ಎಂದರು. ಶ್ರೀ ಗವಿಸಿದ್ಧೇಶ್ವರ
ವಿದ್ಯಾವರ್ಧಕ ಟ್ರಸ್ಟ್ ಕಾರ್ಯದರ್ಶಿ ಡಾ. ಆರ್.ಮರೆಗೌಡ್ರ ಸಸಿಗೆ ನೀರೆರೆಯುವದರ ಮೂಲಕ
ಕಾರ್ಯಗಾರಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ವಿಜಯನಗರ ಶ್ರೀಕೃಷ್ಣದೇವರಾಯ
ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಎಸ್.ಸಿ ಪಾಟೀಲ ಮಾತನಾಡಿ ವಿದ್ರ್ಯಾರ್ಥಿಗಳ ಜೊತೆಗೆ
ಶಿಕ್ಷಕರು ಕಲಿಯುವ ಗುಣವನ್ನು ರೂಢಿಸಿಕೊಳ್ಳಬೇಕು. ಶಿಕ್ಷಣವನ್ನು ಕಲಿಸುವ ಪದ್ಧತಿ
ಬದಲಾಗುವ ಅಗತ್ಯ ಇತ್ತು. ಬದಲಾದ ಈ ಶಿಕ್ಷಣ ವ್ಯವಸ್ಥೆಗೆ ನಾವೆಲ್ಲ ಇಂದು
ಹೊಂದಿಕೊಳ್ಳಬೇಕಿದೆ ಎಂದರು. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ
ಸಿಂಡಿಕೇಟ್ ಸದಸ್ಯರುಗಳಾದ ಡಾ.ಬಸವರಾಜ್ ಪೂಜಾರ್ ಮತ್ತು ಕೃಷ್ಣದೇವರಾಯ್,
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ ಸದಸ್ಯರಾದ
ದೊಡ್ಡನಗೌಡ ಎಸ್ ತೋಟಗಟ್ಟಿ, ಡಾ.ಬಸವರಾಜ್ ಬೆಣ್ಣಿ, ಡಾ.ವೆಂಕಟಯ್ಯ ಸಿ ಇದ್ದರು. ಅಧ್ಯಕ್ಷತೆ
ಪದವಿ ಪ್ರಾಚಾರ್ಯರಾದ ಡಾ.ಚನ್ನಬಸವ ಸಾಹುಕಾರ ವಹಿಸಿ ಮಾತನಾಡಿದರು. ಪ್ರಾರ್ಥನೆ ವರ್ಷಿಣಿ
ಸಂಕ್ಲಾಪುರ, ಪ್ರಾಸ್ತಾವಿಕ ಮತ್ತು ಸ್ವಾಗತ ಪ್ರೊ ಶರಣಬಸಪ್ಪ ಬಿಳಿಯಲಿ , ವಂದನಾರ್ಪಣೆ
ಡಾ.ನಾಗರಾಜ ದಂಡೋತಿ, ನಿರೂಪಣೆ ಪ್ರೊ ಅರುಣ ನೆರವೇರಿಸಿದರು. ಕಾರ್ಯಗಾರದಲ್ಲಿ ಪದವಿ
ವಿಭಾUಗದ ಉಪನ್ಯಾಸಕ ಬಳಗ ಭಾಗವಹಿಸಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!