ಹೋರಾಟಗಾರರ ತ್ಯಾಗ ಬಲಿದಾನಗಳಿಂದ ಹೈದ್ರಾಬಾದ್-ಕರ್ನಾಟಕ ವಿಮೋಚನೆ : ಜಾಕೀರಹುಸೇನ ಕಿಲ್ಲೇದಾರ


ಕೊಪ್ಪಳ : ಈ ಭಾಗದ ಹೋರಾಟಗಾರರ ಪರಿಶ್ರಮ ತ್ಯಾಗ ಬಲಿದಾನಗಳಿಂದ ಹೈದ್ರಾಬಾದ್-ಕರ್ನಾಟಕ ವಿಮೋಚನೆಗೊಂಡಿತು ಎಂದು ನಗರಸಭೆ ಮಾಜಿ ಸದಸ್ಯ ಜಾಕೀರಹುಸೇನ ಕಿಲ್ಲೇದಾರ ಹೇಳಿದರು.
ಅವರು ನಗರದ ಗಣೇಶನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೭೪ನೇ ಕಲ್ಯಾಣ-ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೋಂಡು ಮಾತನಾಡಿ ಭಾರತ ದೇಶ ಬ್ರಿಟೀಷ್‌ರಿಂದ ವಿಮೋಚನೆಗೊಂಡರು ಹೈದ್ರಾಬಾದ್-ಕರ್ನಾಟಕದ ಭಾಗದ ಜಿಲ್ಲೆಗಳು ನಿಜಾಮನ ಆಡಳಿತಕ್ಕೆ ಒಳಪಟ್ಟು ಬ್ರಿಟೀಷರ ಪ್ರಚೋದನೆಯಿಂದ ಹೈದರಾಬಾದ್ ಪ್ರದೇಶವನ್ನು ಸ್ವತಂತ್ರ ರಾಜ್ಯವನ್ನಾಗಿ ಅಂದಿನ ನಿಜಾಮ ಘೋಷಿಸಿಕೊಂಡಿದ್ದರು, ದೇಶದ ಒಕ್ಕೂಟದಲ್ಲಿ ವಿಲೀನವಾಗಿರಲಿಲ್ಲ ನಂತರ ಅಂದಿನ ಗೃಹ ಸಚಿವ ಸರ್ದಾರ ವಲ್ಲಭಬಾಯಿ ಪಟೇಲ್‌ರು ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಭಾರತೀಯ ಸೈನ್ಯವನ್ನು ಕಳುಹಿಸಿ ನಿಜಾಮನ ಸಾಮ್ರಾಜ್ಯದ ಮೇಲೆ ಆಕ್ರಮಣ ಮಾಡಿದ ನಂತರ ಭಾರತೀಯ ಸೇನೆಗೆ ನಿಜಾಮ ಶರಣಾಗಿ ಒಕ್ಕೂಟದಲ್ಲಿ ೧೯೪೮ ಸೆಪ್ಟೆಂಬರ್ ೧೭ ರಂದು ವಿಲೀನಗೊಂಡರು ಹೀಗಾಗಿ ಭಾರತದೇಶ ಎಲ್ಲ ಭಾಗಗಳಲ್ಲಿ ಆಗಸ್ಟ್ ೧೫ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಿಸಿದರೆ, ನಮ್ಮ ಹೈದ್ರಾಬಾದ್-ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮಾತ್ರ ಆಗಸ್ಟ್ ೧೫ ಮತ್ತು ಸೆಪ್ಟೆಂಬರ್ ೧೭ ರಂದು ಹೀಗೆ ಎರಡೆರಡು ಬಾರಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಿಸಲಾಗುತ್ತಿದೆ ಇದು

ನಮ್ಮ ಭಾಗದ ಸುದೈವ ಎಂದರು.
ಈ ಸಂದರ್ಭದಲ್ಲಿ ಮಹಾಲಕ್ಷ್ಮೀ ಕಂದಾರಿ,ಗೀತಾ ಪಾಟೀಲ್,ಶಾಲೆಯ ಮುಖ್ಯ ಶಿಕ್ಷಕಿ ರುದ್ರಮ್ಮ, ಶಿಕ್ಷಕ ವೀರನಗೌಡ ಪಾಟೀಲ, ಶಿಕ್ಷಕಿಯರು, ವಿದ್ಯಾರ್ಥಿಗಳು, ವಾರ್ಡಿನ ಹಿರಿಯರು ಪಾಲ್ಗೋಂಡಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!