೨೫ ರಂದು ಮಾದಿಗ ಸಮಾಜದ ಪೂರ್ವಭಾವಿ ಸಭೆ : ಗಣೇಶ ಹೊರತಟ್ನಾಳ

ಕೊಪ್ಪಳ : ನಗರದ ಸರ್ಕೀಟ್ ಹೌಸ್ ಕೊಪ್ಪಳದಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ದಡೇಸೂಗುರ ಮತ್ತು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಗೂಳಪ್ಪ ಹಲಿಗೇರಿ ಅವರುಗಳ ನೇತೃತ್ವದಲ್ಲಿ ದಿ ೨೫/೦೭/೨೦೨೧ ರ ರವಿವಾರ ಬೆಳಗ್ಗೆ ೧೦-೩೦ ಗಂಟೆಗೆ ಮಾದಿಗ ಸಮಾಜದ ಪೂರ್ವಭಾವಿ ಸಭೆ ಕರೆಯಲಾಗಿದೆ.
ನೂತನವಾಗಿ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದ ಎ ನಾರಾಯಣ್ ಸ್ವಾಮಿ, ಸಚಿವರು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರು ಪ್ರಥಮ ಭಾರಿಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಸಂದರ್ಭದಲ್ಲಿ ಸ್ವಾಗತಿಸಲು ರಾಜ್ಯಾದ್ಯಂತ ಮಾದಿಗ ಸಮಾಜ ಹಿರಿಯರು,ಮುಖಂಡರು, ಯುವ ನಾಯಕರು ಪಕ್ಷಾತೀತವಾಗಿ ಸೇರಿಕೊಂಡು ಸ್ವಾಗತಿಸಬೇಕು ಎಂದು ತೀರ್ಮಾನಿಸಲಾಗಿದೆ ಹಾಗಾಗಿ ಮೇಲೆ ತಿಳಿಸಿದ ದಿನಾಂಕದಂದು ಕೊಪ್ಪಳ ಜಿಲ್ಲೆಯ ಮಾದಿಗ ಸಮಾಜದ ಹಿರಿಯರು ಪೂರ್ವಭಾವಿ ಸಭೆ ಮಾಡಲು ನಿರ್ಧರಿಸಲಾಗಿದ್ದು ಕೊಪ್ಪಳ ಜಿಲ್ಲೆಯ ಕನಗಿರಿಯ ಶಾಸಕರಾದ ಬಸವರಾಜ್ ದಡೇಸುಗೂರ್ ಹಾಲಿ ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು,ತಾಲೂಕ ಪಂಚಾಯತ್ ಸದಸ್ಯರು, ನಗರಸಭೆ ಸದಸ್ಯರು, ಪಟ್ಟಣ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು,ಒಟ್ಟಾರೆ ಸಾರ್ವಜನಿಕ ಜನಪ್ರತಿನಿಧಿಗಳು, ಮಾದಿಗ ಹೋರಾಟಗಾರರು, ಮಾದಿಗ ಮುಖಂಡರು,ದಲಿತ ಸಂಘ? ಸಮೀತಿಯ ಮುಖಂಡರು, ಗುರು ಹಿರಿಯರು, ಯುವ ಮಿತ್ರರು, ಪಾಲ್ಗೊಂಡು ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಯುವ ಮುಖಂಡ ಗಣೇಶ್ ಹೊರತಟ್ನಾಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!