ಜೂನ್ ೧ರಿಂದ ಮನೆಯಲ್ಲಿಯೇ ೧೨ನೇ ತರಗತಿ ಪರೀಕ್ಷೆ

ರಾಯ್‌ಪುರ್: ಜೂನ್ ೧ರಿಂದ ೧೨ನೇ ತರಗತಿಯ ಪರೀಕ್ಷೆಗಳನ್ನು ನಡೆಸಲು ಛತ್ತೀಸ್‌ಗಢ ಸೆಕೆಂಡರಿ ಎಜುಕೇಶನ್ ಬೋರ್ಡ್ (ಸಿಜಿಬಿಎಸ್‌ಇ) ನಿರ್ಧರಿಸಿದೆ. ನಿಗದಿತ ಕೇಂದ್ರಗಳಿಂದ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಗಳನ್ನು ತೆಗೆದುಕೊಂಡು ಮನೆಗಳಲ್ಲಿಯೇ ಪರೀಕ್ಷೆ ಬರೆಯುವ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಜಿಬಿಎಸ್‌ಇ ಕಾರ್ಯದರ್ಶಿ ವಿ.ಕೆ.ಗೋಯಲ್ ಅವರು ದಿ:೨೨ ಮೇ ೨೦೨೧ರ ಶನಿವಾರದಂದು ಆದೇಶ ಹೊರಡಿಸಿದ್ದಾರೆ. ರಾಜ್ಯದ ೨.೮೬ ಲಕ್ಷ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮನೆಗಳಲ್ಲಿಯೇ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಆದೇಶದ ಪ್ರಕಾರ, ೧೨ನೇ ತರಗತಿಯ ವಿದ್ಯಾರ್ಥಿಗಳು ಜೂನ್ ೧ರಿಂದ ಐದು ದಿನಗಳವರೆಗೂ ಪ್ರಶ್ನೆಪತ್ರಿಕೆಗಳು ಮತ್ತು ಉತ್ತರ ಪತ್ರಿಕೆ ಖಾಲಿ ಹಾಳೆಗಳನ್ನು ನಿಗದಿತ ಕೇಂದ್ರಗಳಿಂದ ಪಡೆಯಬಹುದು. ಜೂನ್ ೧ರಿಂದ ೫ರೊಳಗೆ ಯಾವುದೇ ದಿನ ಪ್ರಶ್ನೆಪತ್ರಿಕೆಗಳನ್ನು ಪಡೆಯಬಹುದಾಗಿದ್ದು, ಪ್ರಶ್ನೆಪತ್ರಿಕೆ ತೆಗೆದುಕೊಂಡ ಐದು ದಿನಗಳ ಒಳಗಾಗಿ ಉತ್ತರ ಪತ್ರಿಕೆಗಳನ್ನು ನಿಗದಿತ ಕೇಂದ್ರಗಳಿಗೆ ಸಲ್ಲಿಸಬೇಕಾಗುತ್ತದೆ.
ಭಾನುವಾರ ಮತ್ತು ರಜೆ ದಿನಗಳಲ್ಲಿಯೂ ಉತ್ತರ ಪತ್ರಿಕೆಗಳನ್ನು ಸಲ್ಲಿಸಬಹುದಾಗಿದ್ದು, ನಿಗದಿತ ಅವಧಿಯೊಳಗೆ ಉತ್ತರ ಪತ್ರಿಕೆಗಳು ಸಲ್ಲಿಕೆಯಾಗದಿದ್ದರೆ, ಅಂತಹ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಗೈರು ಹಾಜರು ಎಂದು ಪರಿಗಣಿಸಲಾಗುತ್ತದೆ ಎಂದು ಸಿಜಿಬಿಎಸ್‌ಇ ಕಾರ್ಯದರ್ಶಿ ವಿ.ಕೆ.ಗೋಯಲ್ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!