ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮದಿನದ ಅಂಗವಾಗಿ:ಆ.21ರಂದು ರಕ್ತದಾನ ಶಿಬಿರ:ಜಿಶಾನ್ ಅಖಿಲ್

ಮಾನ್ವಿ: ಇಸ್ಲಾಮ್ ಧರ್ಮದ ಪರಮೋಚ್ಚ ಧರ್ಮಗುರುಗಳಾದ ಪ್ರವಾದಿ ಮುಹಮ್ಮದರ(ಸ) ಜನ್ಮ ದಿನದ ಅಂಗವಾಗಿ ಮುಸ್ಲಿಂ ಯುವಕರಿಂದ ನಗರದ ಆರೋಗ್ಯ ಅಸ್ಪತ್ರೆಯಲ್ಲಿ ಆಕ್ಟೊಬರ್ ೨೧ ರಂದು ಬೆಳಿಗ್ಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳ ಲಾಗಿದೆ ಎಂದು ಯುವ ಮುಖಂಡ ಹಾಗೂ ಎಸ್.ಐ.ಓ ರಾಜ್ಯ ಸಮಿತಿ ಸದಸ್ಯ ಜಿಶಾನ್ ಆಖಿಲ್ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು, ಪ್ರವಾದಿ ಮೂಹಮ್ಮದರು ತಮ್ಮ ಜೀವನದ ಮುಖಾಂತರ ಏಕತೆ ಮತ್ತು ಸಮಾನತೆಯನ್ನು ಸಾಧಿಸಿದರು. ನಿಮ್ಮ ಪೈಕಿ ಮಾನವ ಕುಲಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿರುವವನು ಅತ್ಯುತ್ತಮನಾಗಿದ್ದಾನೆ ಎಂಬ ಪ್ರವಾದಿ ಬೋಧನೆಗೆ ಅನ್ವಯವಾಗಿ ನಾವು ಈ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುತ್ತಿದ್ದೇವೆ.
ಇದು ಕೇವಲ ಸಾಂಕೇತಿಕ ಮಾತ್ರವಲ್ಲ ಹೊರತಾಗಿ ಸಮುದಾಯದಲ್ಲಿ ರಕ್ತದಾನ ಮನೋಭಾವವನ್ನು ಸೃಷ್ಟಿಸಲಿಕ್ಕೂ ಕೂಡ ಈ ಶಿಬಿರ ಸಹಾಯಕಾರಿವಾಗಲಿದೆ ಎಂದು ಹೇಳಿದರು.
ನಂತರ ಮುಹಮ್ಮದ್ ಬೇಗ್ ಮಾತನಾಡಿ ಪ್ರವಾದಿಯವರ ಜೀವನ ನಮಗೆ ತ್ಯಾಗವನ್ನು ಕಲಿಸಿಕೊಡುತ್ತದೆ ಆದ್ದರಿಂದ ಪ್ರೇರಿತರಾಗಿ ನಾವು ರಕ್ತದಾನ ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ರಕ್ತದಾನ ಶಿಬಿರದಲ್ಲಿ ೬೦ ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಲಿದ್ದಾರೆ. ಸಿಂಧನೂರಿನ ಬಾದರ್ಲಿ ಬ್ಲಡ್ ಬ್ಯಾಂಕ್ ಮತ್ತು ನಗರದ ಆರೋಗ್ಯ ಅಸ್ಪತ್ರೆಯವರ ಸಹಕಾರದೊಂದಿಗೆ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಮಾ ಮಿರ್ಜಾ, ಸಲ್ಮಾನ್ ಫಾರ್ಸಿ, ಮುಸ್ತಾಕ್ ಖಾದ್ರಿ, ಸುಹೆಲ್ ಖುರೇಶಿ, ಶೋಎಬ್ ಖುರೇಶಿ, ರಿಜ್ವಾನ್ ನೈಕ್, ಫರಾಜ್ ಬೇಗ್, ಸೈಯ್ಯದ್ ಮುಸಾಯಿಬ್, ಜಿಯಾರುಲ್ ಇಸ್ಲಾಮ್ ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!