ವಿಧಾನ ಪರಿಷತ್ ಚುನಾವಣೆ:ವಿಶ್ವನಾಥ ಬನಹಟ್ಟಿ ಗೆಲುವು ಶತಸಿದ್ಧ: ಅಮರೇಶ ಕರಡಿ
ಕೊಪ್ಪಳ:ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಕಾರ್ಯಕ್ರಮ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಜನ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಯುವ ಮುಖಂಡ ಅಮರೇಶ ಕರಡಿ ಹೇಳಿದರು.
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ಅವರ ಪರವಾಗಿ ಕೊಪ್ಪಳ ತಾಲ್ಲೂಕಿನ ಕವಲೂರು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪ್ರಮುಖರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬನ್ನಹಟ್ಟಿ ಅವರ ಗೆಲ್ಲುವ ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಯಚೂರು- ಕೊಪ್ಪಳ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ಬಿಜೆಪಿ ಗೆ ಹೆಚ್ಚು ಬೆಂಬಲ ಸಿಕ್ಕಿದ್ದು, ಹಾಗೂ ಪಕ್ಷದ ಬೆಂಬಲಿತ ಸದಸ್ಯರು, ಚುನಾಯಿತ ಪ್ರತಿನಿಧಿಗಳು ಈ ಪ್ರದೇಶದ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಿ ಮತನೀಡಲಿದ್ದಾರೆ ಎಂದರು.ಬಳ್ಳಾರಿ ವಿಭಾಗದ ಸಹ ಪ್ರಭಾರಿ ಚಂದ್ರಶೇಖರ್ ಗೌಡ ಪಾಟೀಲ್ ಮಾತನಾಡಿ ಬಿಜೆಪಿ ಸಂಘಟನೆ, ಕಾರ್ಯಕರ್ತರ ಶ್ರಮದಿಂದ ನಮ್ಮ ಅಭ್ಯರ್ಥಿ ಜಯಸಾಧಿಸಲಿದ್ದಾರೆ, ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಸರ್ಕಾರದ ಯೋಜನೆಗಳಿಂದ ದೇಶ ಪ್ರಗತಿಯತ್ತ ಸಾಗಿದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಹಾಂತೇಶ ಪಾಟೀಲ್,ಗ್ರಾಮೀಣ ಘಟಕದ ಅಧ್ಯಕ್ಷ ಪ್ರದೀಪ್ ಹಿಟ್ನಾಳ್, ಹಿರಿಯ ಮುಖಂಡರಾದ
ಈಶಪ್ಪ ಮಾದಿನೂರು, ಬಸವರಾಜ ಓಜಿನಹಳ್ಳಿ, ನಾಗನಗೌಡ ಡಂಬ್ರಳ್ಳಿ ಮಂಜುನಾಥ್ ಪಾಟೀಲ್ ವೀರೇಶ್ ಸಜ್ಜನ್ ವೀರಯ್ಯ ಸಿಂದಗಿ ಮಠ ನಿಂಗಪ್ಪ ಬಳ್ಳೂಟಗಿ ತಿಮ್ಮಣ್ಣ ಸಿದ್ನೇಕೊಪ್ಪ, ಲಕ್ಷ್ಮಣ ಗೂಡಿ ಸಂತೋಷ ಗಡ್ಡದ ವಿಶ್ವನಾಥ ಹೇಬ್ಬಾಳ ಸೇರಿದಂತೆ ಗ್ರಾಮದ ಮುಖಂಡರು ಗ್ರಾಮ ಪಂಚಾಯತಿ ಸದಸ್ಯರು ,ಪ್ರಮುಖರು ಉಪಸ್ಥಿತರಿದ್ದರು.