ಶಿವಶರಣ ನೂಲಿಯ ಚಂದಯ್ಯ ಜಯಂತಿ ಆಚರಣೆ

ಕೊಪ್ಪಳ : ನಗರದ ೧೪ನೇ ವಾರ್ಡಿನ ಭಜಂತ್ರಿ ಓಣಿಯಲ್ಲಿ ಶಿವಶರಣ ನೂಲಿಯ ಚಂದಯ್ಯ ಜಯಂತಿಯನ್ನು ಕೊರಮ ಸಮಾಜದ ವತಿಯಿಂದ ಇತ್ತೀಚಿಗೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದ ಅಖಿಲ ಕರ್ನಾಟಕ ಕುಳುವ ಮಹಾಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ಕಂಬಣ್ಣ ಭಜಂತ್ರಿ ಮಾತನಾಡಿ ಶೈಕ್ಷಣೀಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಕೊರಮ ಜನಾಂಗದವರು ಸರಕಾರದ ಸೌಲಭ್ಯಗಳನ್ನು ಬಳಸಿಕೊಂಡು ಶೈಕ್ಷಣೀಕವಂತರಾಗಬೇಕು ಅಂದಾಗ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಕೊರಮ ಸಮಾಜದ ಕೊಪ್ಪಳ ತಾಲೂಕಾಧ್ಯಕ್ಷ ನಾಗಪ್ಪ ಭಜಂತ್ರಿ ಕೊಪ್ಪಳ ಮಾತನಾಡಿ ೧೨ನೇ ಶತಮಾನದ ಶಿವಶರಣ ಶ್ರೀನೂಲಿಯ ಚಂದಯ್ಯನವರು ಅನೇಕ ವಚನಗಳನ್ನು ರಚಿಸುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಕುಳುವ ಮಹಾಸಂಘದ ಜಿಲ್ಲಾ ಗೌರವಧ್ಯಕ್ಷ ಮಹೇಶ ಭಜಂತ್ರಿ, ಬಿಜೆಪಿ ಮುಖಂಡ ಶಿವಕುಮಾರ ಕುಕನೂರು, ಕೊರಮ ಸಮಾಜದ ಮುಖಂಡರಾದ ಹನುಮಂತಪ್ಪ, ಬಸವರಾಜ ಓಜಿನಹಳ್ಳಿ ಸೇರಿದಂತೆ ಓಣಿಯ ಗುರು ಹಿರಿಯರು ಸಮಾಜದ ಮುಖಂಡರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!