ಸಿರಿಧಾನ್ಯಗಳ ಮಹತ್ವ ಹಾಗೂ ಆಹಾರದ ಅರಿವು


ಎಲ್ಲರ ಹಾಡುಭಾಷೆಯಾಗಿದೆ ಆರೋಗ್ಯವೆ ಭಾಗ್ಯ ಎಂದು ಆದರೆ ಆರೋಗ್ಯವನ್ನೆ ಕಾಪಾಡದ ಜನರ ಮರೆವು, ಆಹಾರಗಳ ಬಗ್ಗೆ ಇಲ್ಲದ ಅರಿವು, ಸಿರಿಧಾನ್ಯಗಳನ್ನು ಹುಡುಕುವ ಆರೋಗ್ಯ ಕೆಟ್ಟ ಸಿರಿವಂತರ ಅಳವು, ಮೂವತ್ತು ವರ್ಷದ ಹಿಂದಕ್ಕೆ ನಾವು ತಿರುಗಿ ನೋಡಿದರೆ ನವಣೆ ಅನ್ನ ಯಾರ ಮನೆಯಲ್ಲಿ ಇರುತ್ತದೆ ಆ ಮನೆ ಬಡತನದಲ್ಲಿದೆ ಎಂದು ತೋರಿಸುತ್ತಿತ್ತು ಆದರೆ ಈಗಿನ ದಿನಗಳಲ್ಲಿ ಈ ವಾಕ್ಯ ಸಂಪೂರ್ಣ ಬದಲಾಗಿದೆ. ಹಿಂದಿನ ದಿನಗಳಲ್ಲಿ ಶ್ರೀಮಂತರ ಮನೆಯಲ್ಲಿ ಬಿಳಿ ಅನ್ನ ಇದ್ದರೆ ಬಡವರ ಮನೆಯಲ್ಲಿ ನವಣೆ ಅನ್ನ ಇರುತ್ತಿತ್ತು, ಈಗಿನ ದಿನಗಳಲ್ಲಿ ಬಡವನ ಮನೆಯಲ್ಲಿ ಬಿಳಿ ಅನ್ನ ಇದ್ದರೆ ಸಿರಿವಂತರ ಮನೆಗಳಲ್ಲಿ ಸಿರಿಧಾನ್ಯಗಳ ಉಗ್ಗಿ ಇರುತ್ತದೆ. ಸಿರಿಧಾನ್ಯಗಳ ಉಗ್ಗಿ ಪ್ರತಿಯೊಬ್ಬರ ಮನೆಯಲ್ಲಿರಬೇಕು ಎಂಬ ಆಶಯದಿಂದ ಇಂದು ದಿನಾಂಕ 29.03.2022 ರಂದು ಬೈಫ್ ಗ್ರಾಮೀಣಾಭಿವೃದ್ಧಿ ಕೊಪ್ಪಳ ಸಂಸ್ಥೆಯಿಂದ ಯಲಬುರ್ಗಾ ತಾಲ್ಲೂಕಿನ ಗುತ್ತೂರು ಗ್ರಾಮದಲ್ಲಿ ಸಿರಿಧಾನ್ಯಗಳ ಮಹತ್ವ ಎಂಬ ವಿಷಯದ ಕುರಿತು ಕಾರ್ಯಕ್ರಮವನ್ನು ಅಲ್ಲಿನ ರೈತರಿಗಾಗಿ ಏರ್ಪಡಿಸಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳದ ಕೃಷಿ ವಿಸ್ತರಣಾ ವಿಜ್ಞಾನಿ ಡಾಕ್ಟರ್ ನಾಗೇಶ್ ಬಸಪ್ಪ ಜಾನೇಕಲರವರು ಆ ವಿಷಯದ ಕುರಿತು ಸೇರಿದ ರೈತರಿಗೆ ಎಲ್ಲಾ ಸಿರಿಧಾನ್ಯಗಳ ಆಹಾರದ ಮಹತ್ವವನ್ನು ಬೋಧನೆಯ ಮೂಲಕ ಭಾಗವಹಿಸಿದ ಗುತ್ತೂರು ರೈತ ಅನ್ನದಾತರಿಗೆ ಸಂವಹನದ ಮೂಲಕ ಉಣಬಡಿಸಲಾಯಿತು. ಇದೇ ಸಂದರ್ಭದಲ್ಲಿ ಬೈಫ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕೋರ್ಡಿನೇಟರ್ ಆಗಿರತಕ್ಕಂತಹ ಶ್ರೀಮತಿ ಸುನಿತಾ ಕುಸುಗಲ, ಎತ್ತಿನಮನಿಯವರು, ಮಂಜುನಾಥ್ ರವರು ಗ್ರಾಮದ ಪ್ರಮುಖ ರೈತರಾದ ಯಮನೂರಪ್ಪ ರವರು ಹಾಗೂ ಒಟ್ಟಾರೆ 40 ಪ್ರಗತಿಪರ ರೈತರು ಕಾರ್ಯಕ್ರಮದಲ್ಲಿ ಉಪಸ್ಥಿತರಾಗಿ ಯಶಸ್ವಿಗೊಳಿಸಿದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!