ಹಸಿರು ಕ್ರಾಂತಿ ಹರಿಕಾರ ದಲಿತರ ಧೀಮಂತ ನಾಯಕ ಡಾ ಬಾಬು ಜಗಜೀವನ ರಾಮ್ ರವರ ಜಯಂತಿ

ನಾಡು ಕಂಡ ಶ್ರೇಷ್ಠ ರಾಜಕಾರಣಿ ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿರುವ ನಮ್ಮ ಭಾರತ ದೇಶದ ಮಾಜಿ ಉಪಪ್ರಧಾನಿ ಹಾಗೂ ಹಸಿರು ಕ್ರಾಂತಿ ಹರಿಕಾರ ದಲಿತರ ಧೀಮಂತ ನಾಯಕ ಬಡವರ ಬಂಧು ಸ್ವಾತಂತ್ರ್ಯ ಹೋರಾಟಗಾರ ಡಾ ಬಾಬು ಜಗಜೀವನ ರಾಮ್ ರವರ ಜಯಂತಿಯನ್ನು ಮುನಿರಾಬಾದ್ ಡ್ಯಾಂನ ಗ್ರಾಮಪಂಚಾಯತಿ ಆಚರಿಸಲಾಯಿತು, ಈ ಜಯಂತೋತ್ಸವದಲ್ಲಿ ಕೊಪ್ಪಳ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು ಬಾಲಚಂದ್ರನ್ ರವರು ಗ್ರಾಮ ಪಂಚಾಯತಿಯ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಅಧ್ಯಕ್ಷರು ಉಪಾಧ್ಯಕ್ಷರು ಗ್ರಾಮ ಪಂಚಾಯಿತಿಯ ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪದಾಧಿಕಾರಿಗಳು ಹಾಗೂ ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು, ಈ ಜಯಂತ್ಯೋತ್ಸವದಲ್ಲಿ ಬಾಬಾ ಜಗಜೀವನ್ ರಾಮ್ ರವರ ಬಗ್ಗೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರು ಎಮ್ ಆರ್ ವೆಂಕಟೇಶ್ ರವರಿಗೆ ಹಾಗೂ ನಮ್ಮ ಊರಿನ ಹಿರಿಯ ಮಾರ್ಗದರ್ಶನರಾದ ವೈರಾಮುಡು ಸರ್ ರವರಿಗೆ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಾಲಚಂದ್ರನ್ ರವರಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯಲಕ್ಷ್ಮಿ ಬಿ ಮೇಡಂ ರವರು ಧನ್ಯವಾದಗಳನ್ನು ತಿಳಿಸಿದರು

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!