ದೀಪಾವಳಿವರೆಗೆ ೮೦ ಕೋಟಿ ಬಡವರಿಗೆ ಉಚಿತ ಆಹಾರ ಧಾನ್ಯ: ಪ್ರಧಾನಿ ಮೋದಿ
ದೆಹಲಿ: ಕೊರೋನಾ ಎನ್ನುವುದು ಈ ಶತಮಾನದ ಅತಿದೊಡ್ಡ ಮಹಾಮಾರಿ.ಆಧುನಿಕ ಜಗತ್ತು ಹಿಂದೆಂದೂ ಇಂಥ ಸಂಕಷ್ಟ ಅನುಭವಿಸಿರಲಿಲ್ಲ. ಕೊರೋನಾ ಎನ್ನುವುದು ಇಡೀ ಜಗತ್ತನ್ನೇ ಕಂಗೆಡಿಸಿದೆ. ಕಳೆದ ನೂರು ವರ್ಷಗಳಲ್ಲೇ ಅತ್ಯಂತ ದೊಡ್ಡ ಸಾಂಕ್ರಾಮಿಕ ರೋಗ ಇದಾಗಿದೆ.
ಭಾರತ ತನ್ನ ಶಕ್ತಿಮೀರಿ ಕೊರೊನಾ ವಿರುದ್ಧ ಹೋರಾಡಿದೆ . ಇಷ್ಟೊಂದು ಮಟ್ಟದಲ್ಲಿ ಆಕ್ಸಿಜನ್ ಅನಿವಾರ್ಯತೆ ಇದೆ ಮೊದಲ ಬಾರಿಗೆ ಎದುರಾಗಿದೆ.
ಏಪ್ರಿಲ್ ಮತ್ತು ಮೇನಲ್ಲಿ ಮೆಡಿಕಲ್ ಆಕ್ಸಿಜನ್ ಬೇಡಿಕೆ ಹೆಚ್ಚಳ ಬೇಡಿಕೆ ಈಡೇರಿಸಲು ಯುದ್ಧೋಪಾದಿಯಲ್ಲಿ ಕೆಲಸ ನಡೆದಿದೆ. ಕೊರೋನಾದಿಂದ ನಮ್ಮ ಜತೆಗಿದ್ದವರನ್ನು ಕಳೆದುಕೊಂಡಿದ್ದೇವೆ.
ಅಗತ್ಯವಿರುವ ಔಷಧಿ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಲಸಿಕೆ ಎಲ್ಲರಿಗೂ ನೀಡುವ ಕೆಲಸ ನಡೆದಿದೆ. ಭಾರತದಲ್ಲಿ ನೂರ ಮೂವತ್ತು ಕೋಟಿಗೂ ಅಧಿಕ ಜನರಿಗೆ ವ್ಯಾಕ್ಸಿನ್ ನೀಡುವುದು ದೊಡ್ಡ ಸವಾಲಾಗಿದೆ.
ಜಗತ್ತಿನ ಹಲವು ದೇಶಗಳಲ್ಲಿ ವ್ಯಾಕ್ಸಿನೇಷನ್ ಉತ್ಪಾದನೆ ನಿಧಾನಗತಿಯಲ್ಲಿದೆ. ಆದರೆ ಭಾರತದಲ್ಲಿ ವೇಗವಾಗಿ ವ್ಯಾಕ್ಸಿನ್ ಉತ್ಪಾದಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲರಿಗೂ ವ್ಯಾಕ್ಸಿನ್ ನೀಡಲು ಬದ್ಧವಾಗಿದೆ. ಲಸಿಕೆ ನಮ್ಮ ಸುರಕ್ಷ ಕವಚ. ವಿದೇಶಗಳಲ್ಲಿ ಉತ್ಪಾದನೆಯಾದರೂ ನಮಗೆ ಸಿಕ್ಕಿರಲಿಲ್ಲ. ನಮ್ಮ ದೇಶದಲ್ಲಿ ವ್ಯಾಕ್ಸಿನ್ ಉತ್ಪಾದಿಸಿದ್ದರಿಂದ ಹಲವು ಜೀವಗಳು ಉಳಿದಿವೆ. ಇಂಥ ರೋಗವನ್ನು ಯಾರೂ ನೋಡಿಲ್ಲ. ಕೇಳಿಯೂ ಇಲ್ಲ. ಆಕ್ಸಿಜನ್ ವಿಮಾನ ಮತ್ತು ರೈಲು ಮೂಲಕ ಸರಬರಾಜು ಆಗಿದೆ ಅಗತ್ಯವಿರುವ ಔಷಧ ಉತ್ಪಾದನೆ ಹೆಚ್ಚಳ ಮಾಡಲಾಗಿದೆ.
ರೂಪಾಂತರ ಅದೃಶ್ಯ ವೈರಿ ಆಗಿದೆ. ದೇಶದ ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ನೀಡಲು ಸರಕಾರ ಶ್ರಮ ವಹಿಸುತ್ತಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಲಸಿಕೆ ಭಾರತದಲ್ಲಿ ನೀಡಲಾಗಿದೆ.
ಇದುವರೆಗೆ ೨೩ ಕೋಟಿ ಜನರಿಗೆ ವ್ಯಾಕ್ಸಿನ್ ನೀಡಿದ್ದೇವೆ.ವ್ಯಾಕ್ಸಿನೇಷನ್ ಬಳಿಕ ಜನರು ಧೈರ್ಯದಿಂದ
ಇದ್ದಾರೆ. ರಾಜ್ಯಗಳ ಸಲಹೆಯನ್ನು ಕೇಂದ್ರ ಸರ್ಕಾರ ಸ್ವೀಕರಿಸಿದೆ. ಕೆಲ ರಾಜ್ಯಗಳಿಂದ ಲಸಿಕೆ ವಿಕೇಂದ್ರಿಕರಣಕ್ಕೆ ಸಲಹೆ ಬಂದಿದೆ. ರಾಜ್ಯಗಳಿಗೆ ಈಗ ಸಮಸ್ಯೆ ಏನೆಂದು ಗೊತ್ತಾಗಿದೆ. ಇದರಿಂದ ರಾಜ್ಯಗಳು ಮೊದಲಿದ್ದ ವ್ಯವಸ್ಥೆ ಚೆನ್ನಾಗಿತ್ತು ಎನ್ನುತ್ತಿದ್ದಾರೆ ಇನ್ನು ಮುಂದೆ ಕೇಂದ್ರ ಸರ್ಕಾರವೇ ರಾಜ್ಯ ಸರಕಾರಗಳಿಗೆ ಲಸಿಕೆ ಪೂರೈಸಲಿದೆ.ರಾಜ್ಯ ಸರಕಾರಗಳ ಲಸಿಕೆ ಬೇಡಿಕೆಯನ್ನು ಕೇಂದ್ರ ಸರ್ಕಾರ ಪೂರೈಸಲಿದೆ. ಕೇಂದ್ರ ಸರ್ಕಾರ ರಾಜ್ಯಗಳಿಗೆ ಉಚಿತ ಲಸಿಕೆ ನೀಡಲಿದೆ.
ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಲಸಿಕೆ ಪೂರೈಸಲಿದೆ.ದೇಶದ ಎಲ್ಲ ಜನರಿಗೂ ಕೇಂದ್ರ ಸರಕಾರವೇ ಉಚಿತ ಲಸಿಕೆ ನೀಡಲಿದೆ.
ರಾಜ್ಯ ಸರ್ಕಾರಗಳ ಲಸಿಕೆ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಲಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ೧೫೦ ಮಾತ್ರ ಸೇವಾ ಶುಲ್ಕ ಪಡೆಯಬೇಕು. ಜೂನ್ ೨೧ ರಿಂದ ದೇಶದ ಎಲ್ಲರಿಗೂ ಉಚಿತ ಲಸಿಕೆ ನೀಡಲಿದೆ.
ದೀಪಾವಳಿ ಅಂದರೆ ನವೆಂಬರ್ ವರೆಗೂ ಬಡವರಿಗೆ ಉಚಿತ ಆಹಾರಧಾನ್ಯ ಪೂರೈಸ ಲಾಗುವುದು.
ದೇಶದ ೮೦ ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ನೀಡಲಾಗುತ್ತದೆ. ಯಾವೊಬ್ಬ ನಾಗರಿಕ ಹಸಿವಿನಿಂದ ಬಳಲಬಾರದು.