ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಂ


ದೇಶ ಕಂಡ iಹಾ ನಾಯಕರಲ್ಲಿ ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಿ, ಶೋಷಿತರ ಧ್ವನಿ ಬಾಬು ಜಗಜೀವನರಾಮ್‌ರು ಒಬ್ಬರು. ಇವರು ೧೯೦೮ ಏಪ್ರೀಲ್ ೦೫ ರಂದು ಬಿಹಾರ್ ರಾಜ್ಯದ ಶಹಬಾದ್ ಜಿಲ್ಲೆಯ ಚಾಂದವಾ ಗ್ರಾಮದಲ್ಲಿ ಶೋಭಿರಾಮ್ ಹಾಗೂ ವಾಸಂತಿ ದೇವಿ ಅವರ ಸುಪುತ್ರರಾಗಿ ಜನಿಸಿದರು.
ತಂದೆ ಶೋಭಿರಾಮ್‌ರಲ್ಲಿರುವ ಹಸ್ತಪ್ರತಿ ತಯಾರಿಸುವ, ಚಿತ್ರಬಿಡಿಸುವ ಹವ್ಯಾಸವನ್ನು ಬಾಬು ಜಗಜೀವನರಾಮ್ ಅಳವಡಿಸಿಕೊಂಡಾಗ ತಂದೆಯವರು ಸಿಟ್ಟಾಗಿ ಅಭ್ಯಾಸದ ಕಡೆಗೆ ಗಮನಹರಿಸಿ ಅಂತ ಹೇಳುತ್ತಾರೆ ಬಾಬು ಜಗಜೀವನರಾಮ್‌ರು ಪ್ರಾಥಮಿಕ ಶಾಲೆಯಲ್ಲಿ ಓದುವಾಗಲೇ ಅವರ ತಂದೆ ನಿಧನ ಹೊಂದುತ್ತಾರೆ. ವಿದ್ಯಾರ್ಥಿ ಜೀವನದಲ್ಲಿ ಹಲವಾರು ಕಷ್ಟಗನ್ನು ಪಟ್ಟು ಸಾಧನೆ ಮಾಡುವುದಕ್ಕಾಗಿ ದೃಢ ಸಂಕಲ್ಪದಿಂದ ಪರಿಶ್ರಮದಿಂದ ಜಗಜೀವನರಾಮ ಅವರು ವ್ಯಾಸಂಗ ಮಾಡಿ ಉತ್ತಮ ಅಂಕಗಳನ್ನು ಗಳಿಸುತ್ತಾರೆ. ವಿದ್ಯಾರ್ಜನೆಯ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯವರಿಗೆ ನೀಡುವ ಶುಲ್ಕ ವಿನಾಯ್ತಿಯನ್ನು ತಿರಸ್ಕರಿಸಿ ಹೆಚ್ಚು ಅಂಕಗಳನ್ನು ಪಡೆದು ಮೆರಿಟ್ ಸ್ಕಾಲರ್‌ಷೀಪ್ ಪಡೆದುಕೊಂಡ ಸ್ವಾಭಿಮಾನಿ ಬಾಬು ಜಗಜೀವನರಾಮ ಅವರು.
ಬಾಲ್ಯದಲ್ಲಿಯೇ ಜಾತಿ ಆಚರಣೆಯನ್ನು ಧಿಕ್ಕರಿಸಿದ ಬಾಲಕ ಬಾಬು ಜಗಜೀವನರಾಮ ಅವರು ಸಾಮಾಜಿಕ ಸಮಾನತೆಗಾಗಿ ಚಿಂತಿಸುತ್ತಾರೆ ಅನ್ಯಾಯ, ಅಸ್ಪೃಶ್ಯತೆಯ ವಿರುದ್ಧ ಕೆಳವರ್ಗದ ಜನರ ಸಂಘಟನೆ ಮಾಡಿ ಹೋರಾಡುತ್ತಾರೆ. ಜಗಜೀವನರಾಮ ಅವರು ತುಂಬಾ ಜಾಣ ವಿದ್ಯಾರ್ಥಿಯಾಗಿದ್ದರು ಇವರು ೧೯೨೬ ರಲ್ಲಿ ನಡೆದ ಮೆಟ್ರಿಕ್ಯೂಲೇಷನ್ ಪರೀಕ್ಷೇಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತಿರ್ಣನಾದರು. ಗಣಿತ ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದರು.
ಸಮಾಜದ ಕಡೆಗೆ ಒಲವು ಹರಿಸಿ ಬಾಲ್ಯದಿಂದಲೇ ತನ್ನ ಜನರ ಸಮಸ್ಯೆಗಳನ್ನು ಕಾಣುತ್ತಾ, ಅಗತ್ಯ ಸಂದರ್ಭದಲ್ಲಿ ಸ್ಪಂದಿಸುತ್ತಾ ದಲಿತರಿಗೆ ಸವರ್ಣಿಯರಿಂದ ಆಗುತ್ತಿರುವ ಅನ್ಯಾಯಗಳ ವಿರುದ್ಧ ಹೋರಾಡುತ್ತ ಮತ್ತು ದಲಿತರು ದುಶ್ಚಟಗಳಿಂದ ದೂರಾಗುವಂತಹ ಹಲವಾರು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಕೊಂಡು ಅಮೂಲ್ಯವಾದ ಹಾಗೂ ಅಪರೂಪದ ಸೇವೆಯನ್ನು ಮಾಡಿದರು.

      ಸಮಾಜಸೇವೆಯ ಫಲವಾಗಿ ಅವರು ರಾಜಕೀಯದೆಡೆಗೆ ತಮ್ಮ ಒಲವನ್ನು ಹರಿಸಿದರು. ೧೯೩೨ ರಲ್ಲಿ ಅಸ್ಪೃಶ್ಯತಾ ನಿವಾರಣಾ ಲೀಗು ಎಂಬ ಸಂಸ್ಥೆ ಹುಟ್ಟಿಕೊಂಡಿತು. ಮುಂದೆ ಹರಿಜನ ಸೇವಕ ಸಂಘ ವೆಂದು ಅದರ ಹೆಸರನ್ನು ಬದಲಾಯಿಸಿಲಾಯಿತು ಮುಂದೆ ಅದರ ಕಾರ್ಯಭಾರವನ್ನು ಬಾಬು ಜಗಜೀವನರಾಮ್‌ರಿಗೆ ವಹಿಸಿಕೊಳ್ಳಲು ಗಾಂಧೀಜಿಯವರು ಹೇಳಿದರು ಅದರಂತೆ ಆ ಕಾರ್ಯವನ್ನು ವಹಿಸಿಕೊಂಡು ಹಳ್ಳಿ ಹಳ್ಳಿಗಳಲ್ಲಿ ತಿರುಗಾಡಿ ಜನರ ಕಷ್ಟ ನಷ್ಟಗಳನ್ನು ಅರಿತುಕೊಂಡು ಆ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತ ಜನರ ಪ್ರೀತಿಗೆ ಪಾತ್ರರಾದರು ೧೯೩೪ ರಲ್ಲಿ ಬಿಹಾರ್‌ದಲ್ಲಿ ಭಾರಿ ಭೂಕಂಪವಾದಾಗ ಲಕ್ಷಾಂತರ ಜನರು ಮನೆಗಳನ್ನು ಕಳೆದುಕೊಂಡರು ರಾಜೇಂದ್ರ ಪ್ರಸಾದ್ ಅವರ ಜೊತೆ ಸೇರಿ ಬಾಬು ಜಗಜೀನವರಾಮ್ ಅವರು ನೊಂದ ಜನರಿಗೆ ಸಾಂತ್ವನ ಹೇಳುತ್ತ ಅವರಿಗೆ ಪರಿಹಾರ ಒದಗಿಸುವಲ್ಲಿ ಪ್ರಮುಖಪಾತ್ರ ವಹಿಸಿದರು. ೧೯೩೫ ಇವರು ಇಂದ್ರಾಣಿ ಅವರನ್ನು ವಿವಾಹವಾದರು ಇವರ ಪುತ್ರ ಸುರೇಶಕುಮಾರ  ಹಾಗೂ ಪುತ್ರಿ ಮೀರಾಕುಮಾರ ಅವರು ಲೋಕ ಸಭೆ ಸ್ಪೀಕರ್ ಆಗಿ ಪ್ರಸಿದ್ಧರಾಗಿದ್ದಾರೆ.  
  ರಾಜಕೀಯದಲ್ಲಿ ವಿದಾನ ಪರಿಷತ್ ಸದಸ್ಯರಾಗಿ ಕೇಂದ್ರ ಸರ್ಕಾರದಲ್ಲಿ       ೧೯೪೬-೫೨ ರ ವರೆಗೆ ಸಚಿವರಾಗಿ ಕಾರ್ಮಿಕರ ಕಲ್ಯಾಣ ಕಾರ್ಯ ಅವರ ವೇತನ ಬೋನಸ್ ಮುಂತಾದವುಗಳನ್ನು ಸರಿಮಾಡಿಸಿದರು ಕಾರ್ಮಿಕರಲ್ಲಿ ಒಕ್ಕಟ್ಟು ಬರುವಂತೆ ಮಾಡಿದರು. ೧೯೫೨-೫೬ ರವರೆಗೆ ಸಂಪರ್ಕ ಖಾತೆ ಸಚಿವರಾಗಿ ೧೯೫೬ ರಲ್ಲಿ ರೇಲ್ವೆ ಮಂತ್ರಿಯಾಗಿ,೧೯೬೬ ರಲ್ಲಿ ಪುನ: ಕೇಂದ್ರದ ಕಾರ್ಮಿಕ ಹಾಗೂ ಉದ್ಯೋಗಮಂತ್ರಿಯಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದರು. ೧೯೬೭ ರಲ್ಲಿ ಆಹಾರ ಮತ್ತು ಕೃಷಿ ಖಾತೆಯ ಮಂತ್ರಿಗಳಾಗಿ ಅನುಪಮ ಸೇವೆ ಸಲ್ಲಿಸಿದರು. ಕೃಷಿ ಖಾತೆಯ ಸಚಿವರಾದ ಸಂದರ್ಭದಲ್ಲಿ ರೈತರಿಗೆ ಬೀಜ, ಗೊಬ್ಬರ ವಿನಾಯ್ತಿ ದರದಲ್ಲಿ ಪೂರೈಸಿ ಆಹಾರ ಧಾನ್ಯಗಳ ಬೆಳವಣಿಗೆಯಲ್ಲಿ ಅಪಾರ ಸಾಧನೆ ಮಾಡಿದ್ದರಿಂದ ’ ಹಸಿರು ಕ್ರಾಂತಿಯ ಹರಿಕಾರ’ ಎಂಬ ಬಿರುದನ್ನು ಹೊಂದಿದರು. ೧೯೭೦ ರಲ್ಲಿ ರಕ್ಷಣಾ ಖಾತೆಯ ಸಚಿವರಾಗಿ, ೧೯೭೯ ರಲ್ಲಿ ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ತಮ್ಮ ಅಧಿಕಾರವಧಿಯಲ್ಲಿ ಯಾವುದೇ ಖಾತೆ ನೀಡಿದರು ಅದನ್ನು ಸಮರ್ಥವಾಗಿ ನಿರ್ವಹಿಸಿ ಉತ್ತಮ ಸಾಧನೆ ಮಾಡಿದರು. ಬದುಕಿನುದ್ದಕ್ಕೂ ಸಮಾನತೆ, ನ್ಯಾಯ, ಪ್ರಾಮಾಣಿಕತೆಗಾಗಿ ಹೋರಾಡಿ ಎಲ್ಲರ ಮನದಲ್ಲಿ ಹಸಿರಾಗಿ ಉಳಿದ ಹಸಿರು ಕ್ರಾಂತಿಯ ಹರಿಕಾರ iಲ್ಲಿಗೆ ಸ್ವಭಾವದ ಮಮತೆಯ ಮಹಾನ್ ನೇತಾರ ಬಾಬು ಜಗಜೀವನ್ ರಾಮ್ ಅವರು  ೧೯೮೬ ಜುಲೈ ೬ ರಂದು ನಮ್ಮನ್ನು ಬಿಟ್ಟು ಅಗಲಿದರು ಅವರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಪ್ರಸ್ತುತ ದಿನಗಳಲ್ಲಿ ನಾವೆಲ್ಲರು ಸೌಹಾರ್ದ ಹಾಗೂ ಸಮಾನತೆಯಿಂದ ಜೀವನ ಸಾಗಿಸೋಣ. 

ಲೇಖನ: ಬೀರಪ್ಪ ಶಂಭೋಜಿ,
ಸಿಂಧನೂರು

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!