ದಾದೀಜಿಯವರ ವ್ಯಕ್ತಿತ್ವ ಗುರುತಿಸಿ ಅಂಚೆಚೀಟಿ ಪ್ರಕಟಿಸಿದ್ದು ಸ್ತುತ್ಯರ್ಹ: ಸಂಗಣ್ಣ

ಕೊಪ್ಪಳ:ವಿಶ್ವಶಾಂತಿಗಾಗಿ ತಪಸ್ಸು ಮಾಡಿ ನಮ್ಮ ದೇಶದ ಅಧ್ಯಾತ್ಮ ಮೌಲ್ಯವನ್ನು ವಿಶ್ವದಲ್ಲಿ ಸಾರಿದ ಧೀರ ಮಹಿಳೆ ರಾಜಯೋಗಿನಿ ಬ್ರಹ್ಮಕುಮಾರಿ ಜಾನಕಿ ದಾದೀಜಿಯವರು. ಭಾರತೀಯ ಅಂಚೆ ಇಲಾಖೆ ಅವರ ಸೇವೆ ಹಾಗೂ ವ್ಯಕ್ತಿತ್ವ ಗುರುತಿಸಿ ಅಂಚೆಚೀಟಿ ಪ್ರಕಟಿಸಿದ್ದು ಸ್ತುತ್ಯರ್ಹ ಎಂದು ಮಾನ್ಯ ಸಂಸದರಾದ ಸಂಗಣ್ಣ ಕರಡಿ ಹೇಳಿದರು. ಕೊಪ್ಪಳದ ದೇವರಾಜ್ ಅರಸ್ ಕಾಲೋನಿಯಲ್ಲಿರುವ ಈಶ್ವರೀಯ ವಿಶ್ವವಿದ್ಯಾಲಯದ ಶಿವ ಸ್ಮೃತಿ ಭವನದಲ್ಲಿ ನಡೆದ ಬ್ರಹ್ಮಕುಮಾರಿ ಜಾನಕಿ ದಾದೀಜಿಯವರ ಅಂಚೆಚೀಟಿ ಬಿಡುಗಡೆ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯ ತನ್ನ ಜೀವನದುದ್ದಕ್ಕೂ ಆಸೆ ಸ್ವಾರ್ಥದ ಹಿಂದೆ ಬಿದ್ದಿರುತ್ತಾನೆ ಆದರೆ ಜಾನಕಿ ದಾದೀಜಿ ಅವರು ಸುಮಾರು ೭೦ ರಾಷ್ಟ್ರಗಳಲ್ಲಿ ಸಂಚರಿಸಿ ನಮ್ಮ ದೇಶದ ಅಧ್ಯಾತ್ಮ ಜ್ಞಾನ ಬೀಜವನ್ನು ಬಿತ್ತುವುದುರ ಜೊತೆಗೆ ಮೆಡಿಟೇಶನ್ ಮಾಡುವ ವಿಧಿಯನ್ನು ಕಲಿಸಿದರು ಎಂದರು. ಜಗತ್ತಿನಲ್ಲಿ ಸತ್ಯವಾದ ಶಾಂತಿ ಏಕತೆ ಸದ್ಭಾವನೆ ತರಲು ಕೇವಲ ಆಧ್ಯಾತ್ಮಿಕ ಜ್ಞಾನಕ್ಕೆ ಮಾತ್ರ ಶಕ್ತಿ ಇದೆ ಎಂದರು. ಜಾನಕಿ ದಾದೀಜಿಯವರ ಅಂಚೆ ಚೀಟಿ ಬಿಡುಗಡೆ ಮಾಡಿದ್ದು ಅಂಚೆ ಇಲಾಖೆಯ ಗೌರವವನ್ನು ಹೆಚ್ಚಿಸಿದೆ ಎಂದರು.ಆಧ್ಯಾತ್ಮಿಕ ನೆಲೆಯಲ್ಲಿ ಜೀವನವನ್ನು ಕಟ್ಟಿಕೊಂಡಿರುವವರ ಬದುಕು ಮಾತ್ರ ತೃಪ್ತಿ ನೆಮ್ಮದಿ ಕಾಣಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶ್ವದಲ್ಲೇ ಏಕರಸ ಮನಸ್ಥಿತಿಯನ್ನು ಹೊಂದಿರುವ ಏಕೈಕ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಧೀರ ಮಹಿಳೆ ಜಾನಕಿ ದಾದೀಜಿ ಅವರು ಎಂದು ಡಿ ವೈ ಎ ಸ್ ಪಿ ಗೀತಾ ಬೇನಾಳ ಹೇಳಿದರು. ಆಧ್ಯಾತ್ಮ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮ ಮನಸ್ಸನ್ನು ಖುಷಿಯಾಗಿ ಇಟ್ಟುಕೊಳ್ಳಲು ಸಾಧ್ಯ ಎಂದರು.
ಅಂಚೆ ಇಲಾಖೆಯ ಅಧಿಕಾರಿಗಳಾದ ಸುರೇಶ್ ಮಾತನಾಡಿ ವಿಶ್ವದೆಲ್ಲೆಡೆ ಆಧ್ಯಾತ್ಮಿಕ ಆಂದೋಲನದಲ್ಲಿ ದಾದೀಜಿಯವರ ಅವಿರತ ಶ್ರಮ ಅವರ್ಣನೀಯ ಎಂದರು.
ಸಾನ್ನಿಧ್ಯವಹಿಸಿದ ಬ್ರಹ್ಮಕುಮಾರಿ ಯೋಗಿನಿ ಅಕ್ಕ ಮಾತನಾಡಿ ಮಾನವ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಲು ತಮ್ಮ ಜೀವನವನ್ನೇ ಸಮರ್ಪಿಸಿಕೊಂಡಿರುವ ಸಾವಿರಾರು ಬ್ರಹ್ಮಕುಮಾರಿಯರು ಜೊತೆಗೆ ದಾದೀಜಿಯವರ ಪ್ರೇರಣಾಯುಕ್ತ ಜೀವನವನ್ನು ಸರ್ಕಾರ ಗುರುತಿಸಿರುವುದು ಖುಷಿಯ ಸಂಗತಿ. ದಾದೀಜಿಯವರ ಅಂಚೆ ಚೀಟಿ ಬಿಡುಗಡೆ ಮಾಡಿರುವುದು ಇಡೀ ಸಂಸ್ಥೆಗೆ ಭಾರತ ಸರ್ಕಾರ ಗೌರವ ಸಲ್ಲಿಸಿದಂತೆ ಎಂದರು.
ಇದೇ ಸಂದರ್ಭದಲ್ಲಿ ಮಾನ್ಯ ಸಂಸದರನ್ನು ಹಾಗೂ ಅತಿಥಿ ಗಣ್ಯರನ್ನು ಪರಮಾತ್ಮನ ದರ್ಬಾರಿನಲ್ಲಿ ಸನ್ಮಾನಿಸಲಾಯಿತು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!