ಮಸ್ಜಿದೆ ಆಲಾದಲ್ಲಿ ಎರಡನೇ ಸುತ್ತಿನ ಲಸಿಕಾ ಕಾರ್ಯಕ್ರಮ
ಕೊಪ್ಪಳ : ಹ್ಯುಮ್ಯಾನೆಟೇರಿಯನ್ ರಿಲೀಫ್ ಸೂಸೈಟಿ ವತಿಯಿಂದ ಸ್ಟೇಷನ್ ರೋಡನಲ್ಲಿರುವ ಮಸ್ಜೀದೆ ಆಲಾದಲ್ಲಿ ಎರಡನೇ ಸುತ್ತಿನ ಕೋವಿಡ್-೧೯ ಲಸಿಕಾ ಕಾರ್ಯಕ್ರಮ ಏರ್ಪಡಿಸಿದ್ದರು. ಮೊದಲ ಹಂತದ ಕೋವಿಡ್-೧೯ ಲಸಿಕೆಯನ್ನು ಜೂನ್ ೨೮ ರಂದು ೪೫ ವರ್ಷ ಮತ್ತು ೧೮ ವರ್ಷ ಮೇಲ್ಪಟ್ಟವರಿಗೆ ೨೧೬ ಕ್ಕಿಂತ ಹೆಚ್ಚಿನ ಜನರಿಗೆ ಲಸಿಕೆ ನೀಡಲಾಗಿತ್ತು. ಎರಡನೇ ಸುತ್ತಿನ ಲಸಿಕಾ ಕಾರ್ಯಕ್ರಮವನ್ನು ತಾಲೂಕಾ ವೈಧ್ಯಾಧಿಕಾರಿಯಾದ ಡಾ. ಮಹೇಶ್ ಉಮಚಗಿ ನೆತೃತ್ವದಲ್ಲಿ ವೈಧ್ಯರು ಮತ್ತು ಸಿಬ್ಬಂದ್ಧಿವರ್ಗದವರು ಲಸಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದರ ವ್ಯವಸ್ಥೆಯನ್ನು ಹ್ಯುಮ್ಯಾನೆಟೇರಿಯನ್ ರಿಲೀಫ್ ಸೂಸೈಟಿ (ಹೆಚ್ಆರ್ಎಸ್)ಯ ಸದಸ್ಯರಾದ ಗೌಸ್ ಪಟೇಲ್ ಹಾಗೂ ಅಜ್ಗರ್ ಖಾನ್ ಅವರ ಮುಖಂಡತ್ವದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಜಮಾಅತ್ನ ಅಧ್ಯಕ್ಷರಾದ ಸೈಯದ್ ಹಿದಾಯತ್ ಅಲಿ, ಕೊಪ್ಪಳ ಹೆಚ್ಆರ್ಎಸ್ನ ಗ್ರೂಪ್ ಲೀಡರ್ ಮೊಹಮ್ಮದ್ ಖಲೀಲ್ ಉಡೇವು, ಕಲಿಮುಲ್ಲಾ ಖಾನ್, ರಹಮತ್ ಹುಸೇನಿ, ಮೊಹಮ್ಮದ್ ಅಖೀಲ್ ಉಡೇವು, ಇನ್ನು ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.