ದ್ವೀತಿಯ ಸೇಮೆಸ್ಟರ್ ಪರೀಕ್ಷೆಯಲ್ಲಿ ಪ್ರಥಮ ಸೇಮೆಸ್ಟರ್ ಪಠ್ಯದ ಪ್ರಶ್ನೆಗಳು: ಸೂಕ್ತ ಕ್ರಮಕ್ಕೆ ಆಗ್ರಹಿಸಿ ಎಸ್ಐಓ ಮನವಿ
ಮಂಗಳೂರು: ಸೋಮವಾರ ದಂದು ನಡೆದ ಮಂಗಳೂರು ವಿಶ್ವವಿದ್ಯಾಲಯದ ಬಿಬಿಎ ದ್ವೀತಿಯ ಸೇಮೆಸ್ಟರ್ನ ಕನ್ನಡ ಪರೀಕ್ಷೆಯಲ್ಲಿ ಪ್ರಥಮ ಸೇಮೆಸ್ಟರ್ ಪಠ್ಯಕ್ರಮದ ಪ್ರಶ್ನೆಗಳು ಕಂಡುಬಂದಿದ್ದು ವಿವಿಯ ಬೇಜವಾಬ್ದಾರಿಯನ್ನು ಖಂಡಿಸಿ, ಈ ಅವಾಂತರಕ್ಕೆ ಕಾರಣವಾದವರನ್ನು ತಕ್ಷಣವೇ ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಮುಂದೆ ಈ ರೀತಿಯ ಅನಾನುಕೂಲ ಆಗದಂತೆ ನೋಡಿಕೊಳ್ಳಬೇಕೆಂದು ಎಸ್.ಐ.ಓ ಮಂಗಳೂರು ನಿಯೋಗವು ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದ ಅಧಿಕಾರಿಗಳಿಗೆ ಭೇಟಿ ನೀಡಿ ಆಗ್ರಹ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಮಂಗಳೂರು ನಗರ ಕಾರ್ಯದರ್ಶಿ ಅಯಾನ್ ಮತ್ತು ಶೀಕ್ರಾನ್ ಮತ್ತಿತರರು ಉಪಸ್ಥಿತರಿದ್ದರು.
Please follow and like us: