ನಗರದಲ್ಲಿ ಡಾ.ಬಾಬು ಜಗಜೀವನರಾಮ್ ಜಯಂತಿ ಆಚರಣೆ
ಅಖಿಲ ವಾಣಿ ಸುದ್ದಿ
ಯಲಬುರ್ಗಾ: ಪಟ್ಟಣದ ಬಿಸಿಎಂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ
ಡಾ.ಬಾಬು ಜಗಜೀವನರಾಮ್ ಜಯಂತಿಯನ್ನು ಸೋಮವಾರ ಆಚರಿಸಲಾಯಿತು. ತಾಲೂಕು ಬಿಸಿಎಂ ಅಧಿಕಾರಿ ಎಸ್.ವಿ.ಭಜಂತ್ರಿ ಮಾತನಾಡಿ,ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರು ಅಸ್ಪೃಶ್ಯತೆ ಸಾಮಾಜಿಕ ವ್ಯವಸ್ಥೆಯಲ್ಲಿ ತಾರತ್ಯಮ ವಿರುದ್ಧ ಹೋರಾಡಿದ ಧೀಮಂತ ನಾಯಕರಾಗಿದ್ದು, ಸಾಮಾಜಿಕ ವ್ಯವಸ್ಥೆಯಲ್ಲಿ ಅನೇಕ ಸಮಸ್ಯೆಗಳನ್ನು ಸವಲಾಗಿ ಸ್ವೀಕರಿಸಿಕೊಂಡು ಇಡೀ ದೇಶಕ್ಕೆ ಅತ್ಯುತ್ತಮವಾದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ನಿಲಯ ಮೇಲ್ವಿಚಾರಕ ಶಂಕರ ಸಕ್ರಿ, ಮಹೆಬೂಬಸಾಬ್ ಗಾಜಿಬಾಯಿ, ಸಿಬ್ಬಂದಿಗಳಾದ ಯಮನೂರಸಾಬ್ ನಾಯಕ್, ಚಂದ್ರಹಾಸ ತಟ್ಟಿ, ಬಸವರಾಜ ಜತ್ತಿ ಸೇರಿದಂತೆ ಇನ್ನಿತರರು ಇದ್ದರು.
ಹಿರೇವಂಕಲಕುಂಟಾ: ತಾಲೂಕಿನ ಹಿರೇವಂಕಲಕುಂಟಾ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ದಿ.ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಜಯಂತಿಯನ್ನು ಆಚರಿಸಿದರು. ಗ್ರಾಮ ಪಂಚಾಯಿತಿ ಪಿಡಿಒ ಜಮಲಸಾಬ್ ಜಮಾದಾರ್, ಸಿಬ್ಬಂದಿಗಳಾದ ಬಸಯ್ಯ ಹಿರೇಮಠ, ಸಂಗಮೇಶ ಬಂಗಾರಿ,ಶಿವಶರಣಪ್ಪ ಹಳ್ಳಿ ಸೇರಿದಂತೆ ಇನ್ನಿತರರು ಇದ್ದರು.