ಪುಟ್ಟರಾಜ ಕವಿ ಗವಾಯಿಗಳ ೧೨ ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮ
ಯಲಬುರ್ಗಾ : ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ರವೀವಾರ ಬೆಳಿಗ್ಗೆ ತ್ರಿಭಾಷಾ ಕವಿ ಗಾನಯೋಗಿ ಎಂದೇ ಚಿರಪರಿಚಿತರಾದ ಪೂಜ್ಯನೀಯ ಲಿಂಗೈಕ್ಯರಾದ ಶ್ರೀಪುಟ್ಟರಾಜ ಕವಿಗವಾಯಿಗಳವರ ೧೨ ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮದ ನಿಮಿತ್ಯ ಬೆಳಿಗ್ಗೆ ೯ ಗಂಟೆಗೆ ಪುಟ್ಟರಾಜ ಕವಿ ಗವಾಯಿಗಳ ಭಾವಚಿತ್ರಕ್ಕೆ ಪೂಜಾ ಕಾರ್ಯಕ್ರಮ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ಸಂಗಮ್ಮ ಈಶಪ್ಪ ಗಡಾದ ಶೆಟ್ರ ಇವರ ಕುಟುಂಬದವರಿಂದ ನೇರವೇರಿತು ,ಗ್ರಾಮದಸ್ಥರಿಂದ ಪ್ರಮುಖ ರಾಜ ಬೀದಿಗಳಲ್ಲಿ ಪುಟ್ಟರಾಜರಕವಿ ಗವಾಯಿಗಳ ಭಾವಚಿತ್ರ ಮೇರವಣಿಗೆ ಜರುಗೀತು ಸಮಾರಂಭದ ಸಾನಿಧ್ಯವನ್ನ ವಿರೇಶ್ವರ ಪುಣ್ಯಾಶ್ರಮ ಗದಗ ಮತ್ತು ಬ್ರಹ್ಮನ್ಮಠ ಭುವನೇಶ್ವರ ತಾತನವರು ಸೂಳೇಕಲ್ ವಹಿಸಿದ್ದರು,ನಂತರ ಉಭಯ ಶ್ರೀಗಳಿಗೆ ಸನ್ಮಾನಿಸಲಾಯಿತು ,ತದನಂತರ ಕಲಾವಿದರುಗಳಾದ ಹನಮಂತ ಕುಮಾರ ನರೇಗಲ್, ಸುಜಾತ ಮಹೇಶ ಮಂಗಳೂರ, ತಬಲವಾದಕ ಪ್ರತಾಪ ಕುಮಾರ ಹಿರೇಮಠ ರವರಿಂದ ಸಂಗೀತ ಕಾರ್ಮಕ್ರಮ ಜರುಗೀತು.
ಕಾರ್ಯಕ್ರಮದಲ್ಲಿ,ವೀರುಪಯ್ಯ ಹಿರೇಮಠ,ಮಲ್ಲೀಕಾರ್ಜುನ ಮಂಗಳೂರ,ವೆಂಕಟೇಶ ಈಳಿಗೇರ,ಅಶೋಕ ,ಎಸ್,ಹರ್ಲಾಪುರ,ಶರಣಗೌಡ ಮಾಲಿ ಪಾಟೀಲ್ ,ಸಂಗಮೇಶ ಬಂಗಾರಿ,ಸಾವಿತ್ರಿ ಮಂಗಳೂರ ಸೇರಿದಂತೆ ಮತ್ತೀತರರು ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು,