ನೂರಾರು ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ


ಕನಕಗಿರಿ: ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರಗಳು ಜನ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ರೈತರು, ಬಡವರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವಿರೋಧಿವಾಗಿವೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ದೂರಿದರು.
ಇಲ್ಲಿಗೆ ಸಮೀಪದ ನವಲಿ ಗ್ರಾಮದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೂರಿಯಾ, ರಸಗೊಬ್ಬರ, ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್, ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ರೋಸಿ ಹೋಗಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಮಾಡಿದ ದೇಶದ ಆಸ್ತಿಯನ್ನು ಬಿಜೆಪಿಯವರು ಮಾರಾಟ ಮಾಡುತ್ತಿದ್ದಾರೆ, ಎರಡು ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದರು.
ತಮ್ಮ ಅಧಿಕಾರದವಧಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ತರಲಾಗಿದೆ. ರೈಸ್ ಟೆಕಾಲ್ನಜಿ ಪಾರ್ಕ್ ಅಭಿವೃದ್ದಿಗೆ ನೂರಾರು ಕೋಟಿ ರೂಪಾಯಿ ಅನುದಾನ ನೀಡಲಾಗಿದೆ, ಕ್ಷೇತ್ರದಲ್ಲಿ ಎರಡು ತಾಲ್ಲೂಕು ಕೇಂದ್ರಗಳನ್ನು ರಚಿಸಲಾಗಿದೆ, ಪುರಸಭೆ, ಪಟ್ಟಣ ಪಂಚಾಯಿತಿಗಳಾಗಿವೆ ಎಂದರು.
ಬಡವರಿಗೆ ಸರ್ಕಾರದಿಂದ ವಸತಿ ಯೋಜನೆಯ ಸೌಲಭ್ಯ ಸಿಗುತ್ತಿಲ್ಲ, ಬಡ ರೈತರ ಸಾಲ ಮನ್ನಾ ಮಾಡುವ ಬದಲಾಗಿ ಅಗರ್ಭ ಶ್ರೀಮಂತರಾದ ಅದಾನಿ, ಅಂಬಾನಿ ಅವರ ಸಾಲ ಮನ್ನಾ ಮಾಡುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಸೇರ್ಪಡೆಗೊಂಡ ವಿಶೇಷ ಮಾರುಕಟ್ಟೆ ಸಮಿತಿ ಮಾಜಿ ಉಪಾಧ್ಯಕ್ಷ ವಿರುಪಣ್ಣ ಕಲ್ಲೂರು ಅವರು ಶಾಸಕ ಬಸವರಾಜ ದಢೇಸೂಗೂರು ಅವರ ಆಡಳಿತ ವೈಖರಿ ವಿರುದ್ದ ಹರಿ ಹಾಯ್ದರು.
ಕೆಪಿಸಿಸಿ ಯುವ ಘಟಕದ ಮಾಜಿ ರಾಜ್ಯ ಅಧ್ಯಕ್ಷ ಬಸನಗೌಡ ಬಾದರ್ಲಿ,
ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾಧರಸ್ವಾಮಿ ಮಾತನಾಡಿದರು.
ಗ್ರಾಪಂ ಮಾಜಿ ಉಪಾಧ್ಯಕ್ಷರಾದ ಬಸವರಾಜ ಸಂಕನಾಳ, ಮಲ್ಲಿಕಾರ್ಜುನ ರಾಠೋಡ್, ಮಾಜಿ ಸದಸ್ಯರಾದ ಮಲ್ಲಿಕಾರ್ಜುನ ಕುದುರಿಕುಣಿತ, ಪ್ರಮುಖರಾದ ಪ್ರಕಾಶ ಖ್ಯಾಡೆದ ಚೇತನಕುಮಾರ ಶ್ರೇಷ್ಠಿ, ವೆಂಕಟೇಶ ನಾಯಕ, ಶಂಕರ ಭಜಂತ್ರಿ, ವೀರೇಶ ಆದಾಫುರ, ಶಂಕರ ನಾಯಕ್ ಸೇರಿದಂತೆ ಗ್ರಾಪಂ ವ್ಯಾಪ್ತಿಯ ನೂರಾರು ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಕಾರಟಗಿ ಬ್ಲಾಕ್ ಅಧ್ಯಕ್ಷ ಶರಣೆಗೌಡ ಪಾಟೀಲ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ಪ್ರಮುಖರಾದ ಶಿವರೆಡ್ಡಿ ನಾಯಕ, ರೆಡ್ಡಿಶ್ರೀನಿವಾಸ, ಅಮರೇಶ ಗೋನಾಳ, ಗಂಗಾಧರಗೌಡ, ತಾಯಪ್ಪ ಕೋಟ್ಯಾಳ, ಗಂಗಾಧರಗೌಡ, ಶಿವರೆಡ್ಡಿ ಖ್ಯಾಡೆದ, ಸಿದ್ದನಗೌಡ ಮಾಲಿ ಪಾಟೀಲ, ಪ್ಯಾಟೆಪ್ಪ ನಾಯಕ ನಿಂಗಪ್ಪ ದೇವರಗುಡಿ, ಜಡಿಯಪ್ಪ ಭೋವಿ, ಖಾಜಾಸಾಬ ಗುರಿಕಾರ, ಹಾಗೂ ಇತರರು ಇದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!