ಭಾರತ ಜೋಡೋ ಯಶಸ್ವಿಗೊಳಿಸಲು ಕಾರ್ಯಕರ್ತರಿಗೆ ಕೆ,ಪಿ,ಸಿ,ಸಿ,ಉಪಾಧ್ಯಕ್ಷ ಬಸವರಾಜ ರಾಯರಡ್ಡಿ ಕರೆ


ಯಲಬುರ್ಗಾ : ಭಾರತದ ಸಮಗ್ರತೆ ಮತ್ತು ಐಕ್ಯತೆ ಹಾಗೂ ನಮ್ಮ ಮುಂದಿನ ಪೀಳಿಗೆಗಳ ಉತ್ತಮ ಭವಿಷ್ಯಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಪಾದಯಾತ್ರೆ (ಭಾರತ ಜೋಡೋ) ಯಲ್ಲಿ ನಾವೆಲ್ಲ ಹೆಜ್ಜೆ ಹಾಕಿ ಪಾದಯಾತ್ರೆ ಯಶಸ್ವಿಗೊಳಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಬಸವರಾಜ ರಾಯರಡ್ಡಿ ಕರೆ ನೀಡಿದರು. ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಯಲಬುರ್ಗಾ ಮತ್ತು ಕುಕನೂರ ಬ್ಲಾಕ್ ಕಾಂಗ್ರೆಸ್ ಘಟಕಗಳ ಭಾರತ ಜೋಡೋ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಭಾರತ ಜೋಡೋ ಪಾದಯಾತ್ರೆ ಈಗಾಗಲೇ ತಮಿಳುನಾಡು ಮತ್ತು ಕೇರಳದಲ್ಲಿ ಯಶಸ್ಸು ಕಂಡಿದೆ. ಅದೇ ಯಶಸ್ಸು ಕರ್ನಾಟಕದಲ್ಲಿ ಸಹ ಮುಂದುವರಿಯಬೇಕು ಎಂದರು. ಬಳ್ಳಾರಿ ನಗರ, ಬಳ್ಳಾರಿ ಗ್ರಾಮೀಣ, ಮೊಳಕಾಲ್ಮೂರು ಮತಕ್ಷೇತ್ರದಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಬೇಕು ಎಂದು ಅವರು ಹೇಳಿದರು. ೨೦೨೩ರಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಈಗಾಗಲೇ ತಯಾರಿ ನಡೆದಿದೆ. ಕಾರಣ ಎಲ್ಲಾ ಮುಂಚೂಣಿ ಘಟಕದ ಪದಾಧಿಕಾರಿಗಳು ಪಕ್ಷ ಸಂಘಟನೆಗೆ ಸಮಯ ಮೀಸಲಿಡಬೇಕು ಎಂದರು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಗ್ರಾಮೀಣ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹನಮಂತಗೌಡ ಪಾಟೀಲ್ ಮಹೀಳಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷೆ ಸಾವಿತ್ರಿ ಗೊಲ್ಲರ ಕುಕನೂರ ಮಹಿಳಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷೆ ಪರೀದಾಬೇಗಂ ಮಕಂದಾರ ಕೆ,ಪಿ,ಸಿ,ಸಿ,ಸದಸ್ಯ ಗಿರೀಜಾ ರೇವಣೇಪ್ಪ ಸಂಗಟಿ, ಮುಖಂಡರುಗಳಾದ ನಾರಾಯಣಪ್ಪ ಹರಪನಹಳ್ಳಿ,ಕಾಶಿಂಸಾಬ ತಳಕಲ್, ಡಾ,ಶರಣಪ್ಪ ಕೊಪ್ಪಳ, ಪಕ್ಷದ ವಕ್ತಾರ ಡಾ,ಶಿವನಗೌಡ ದಾನರಡ್ಡಿ,ಸಂಗಮೇಶ ಗುತ್ತಿ,ಶರಣಪ್ಪ ಉಪ್ಪಾರ,ಶರಣಮ್ಮ ಪೂಜಾರ,ಸುಧೀರ್ ಕೋರ್ಲಳ್ಳಿ ಸೇರಿದಂತೆ ಮತ್ತೀತರರು ಸಭೆಯಲ್ಲಿ ಪಾಲ್ಗೊಂಡಿದ್ದರು,

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!