ಮಮತಾ ಬ್ಯಾನರ್ಜಿಗೆ ಸಾಥ್ ನೀಡಲಿದ್ದೇನೆ: ಸಮಾಜವಾದಿ ಪಕ್ಷದ ನಾಯಕಿ, ಹಿರಿಯ ನಟಿ ಜಯಾ ಬಚ್ಚನ್
ಕೊಲ್ಕತ್ತಾ : ಸಮಾಜವಾದಿ ಪಕ್ಷದ ನಾಯಕಿಯಾದ ಜಯ ಬಚ್ಚನ್ ಅವರು ಬಂಗಾಳದ ತೃಣಮೂಲ ಕಾಂಗ್ರೇಸ್‌ನ ಮಮತಾ ಬ್ಯಾನರ್ಜಿ ಅವರ ಪರವಾಗಿ ಚುನಾವಣ ಪ್ರಚಾರದಲ್ಲಿ ಭಾಗವಹಿಸಲಿದ್ದೇನೆ ಎಂದು ಜಯ ಬಚ್ಚನ್ ಅವರು ತಿಳಿಸಿದ್ದಾರೆ. ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತ.
ನಮ್ಮ ಸಮಾಜವಾದಿ ಪಕ್ಷದ ನಾಯಕರಾದ ಅಖಿಲೇಶ್ ಯಾದವ ಅವರು ಹೇಳಿದರು ನಮ್ಮ ಬೆಂಬಲ ತೃಣಮೂಲ ಕಾಂಗ್ರೇಸ್ಗೆ,ಮಮತಾ ಬ್ಯಾನರ್ಜಿಪರವಾಗಿ ನೀವು ಚುನಾವಣಾ ಪ್ರರಚಾರದಲ್ಲಿ ಭಾಗವಹಿಸಿ ಎಂದು ಹೇಳಿದ್ದಾರೆ ಹಾಗಾಗಿ ನಾನು ಬಂಗಾಳದಲ್ಲಿ ದೀದಿಗೆ ಸಾತ್ ನೀಡಲಿದ್ದೇನೆ ಎಂದು ಹೇಳಿದ್ದಾರೆ.
ಬಾಲಿವುಡ್‌ನ ಹಿರಿಯ ನಟಿ ಹಾಗೂ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಅವರು ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಚುನಾವಣೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪರವಾಗಿ ಪ್ರಚಾರ ಕೈಗೊಳ್ಳಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ೮ ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಮೊದಲ ಎರಡು ಹಂತಗಳಲ್ಲಿ ಈಗಾಗಲೇ ೬೦ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಉಳಿದ ೨೩೪ ಸ್ಥಾನಗಳಿಗೆ ಚುನಾವಣೆ ಇನ್ನೂ ಆರು ಹಂತಗಳಲ್ಲಿ ಏಪ್ರಿಲ್ ೨೯ ರವರೆಗೆ ಮತದಾನ ನಡೆಯಲಿದೆ.’ಏಪ್ರಿಲ್ ೬ ಮತ್ತು ೭ ರಂದು ಬಚ್ಚನ್ ಕನಿಷ್ಠ ನಾಲ್ಕು ರೋಡ್ ಶೋಗಳಲ್ಲಿ ಭಾಗವಹಿಸಲಿದ್ದಾರೆ. ಏಪ್ರಿಲ್ ೮ ರಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಚುನಾವಣಾ ರ‍್ಯಾಲಿಯಲ್ಲಿ ವೇದಿಕೆ ಹಂಚಿಕೊಳ್ಳಬಹುದು’ ಎಂದು ಟಿಎಂಸಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.
ಬಂಗಾಳಿ ನಟರಾದ ಅನಿಲ್ ಚಟರ್ಜಿ ಮತ್ತು ಮಾಧಾಬಿ ಮುಖರ್ಜಿ ನಟಿಸಿದ್ದ, ಸತ್ಯಜಿತ್ ರೇ ಅವರ ಮಹಾನಗರ ಚಿತ್ರದಲ್ಲಿ ನಟಿಸುವ ಮೂಲಕ ಜಯಾ ಬಚ್ಚನ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅವರನ್ನು ಬಂಗಾಳಿ ಮತಗಳನ್ನು ಸೆಳೆಯಲು ಮತ್ತು ಟಿಎಂಸಿಯ ಚುನಾವಣಾ ಘೋಷವಾಕ್ಯವಾದ ‘ಬಂಗಾಳ ತನ್ನ ಸ್ವಂತ ಮಗಳನ್ನು ಬಯಸುತ್ತದೆ’ ಎಂಬುದನ್ನು ಪ್ರಚಾರ ಪಡಿಸಲು ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿಸಲಾಗಿದೆ ಎನ್ನಲಾಗುತ್ತಿದೆ.
ಇತ್ತ ಬಾಲಿವುಡ್‌ನ ಹಿರಿಯ ನಟ ಮಿಥುನ್ ಚಕ್ರವರ್ತಿ ಕೂಡ ಬಿಜೆಪಿ ಸೇರ್ಪಡೆಯಾಗಿ, ಪಕ್ಷಕ್ಕಾಗಿ ಪಶ್ಚಿಮ ಬಂಗಾಳದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಟಿಕೆಟ್ ನೀಡದೆ ಇದ್ದರು ಕೂಡ ಅವರಿಗೆ ಸ್ಟಾರ್ ಪ್ರಚಾರಕನ ಸ್ಥಾನ ನೀಡಿದೆ.