‘ಭಾರತ್ ಜೋಡೋ : ಕೆಆರೆಸ್ ಫಂಕ್ಷನ್ ಹಾಲ್‌ನಲ್ಲಿ ವಸತಿ ಮತ್ತು ಊಟದ ವ್ಯವಸ್ಥೆ : ರಾವೂರ್ ಸುನೀಲ್


ಬಳ್ಳಾರಿ : ರಾಹುಲ್‌ಗಾಂಧಿ ನೇತೃತ್ವದ ‘ಭಾರತ್ ಜೋಡೋ ಯಾತ್ರೆ’ಯಲ್ಲಿ ಪಾಲ್ಗೊಳ್ಳಲು ಬಳ್ಳಾರಿಗೆ ಆಗಮಿಸುವ ಪಾದಾಯಾತ್ರಿಗಳಿಗಾಗಿ ಸಂಗನಕಲ್ಲು ರಸ್ತೆಯಲ್ಲಿ ಇರುವ ಕೆಆರೆಸ್ ಫಂಕ್ಷನ್ ಹಾಲ್‌ನಲ್ಲಿ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಶ್ರೀರಕ್ಷಾ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷರೂ, ‘ಭಾರತ್ ಜೋಡೋ ಯಾತ್ರೆ’ಯ ಸಂಚಾಲಕರೂ ಆಗಿರುವ ರಾವೂರ್ ಸುನೀಲ್ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೆಆರೆಸ್ ಫಂಕ್ಷನ್ ಹಾಲ್‌ನಲ್ಲಿ ೨೦೦೦ ಜನರಿಗೆ ವಸತಿ, ಮಹಿಳಾ ಮತ್ತು ಗಣ್ಯ ಕಾರ್ಯಕರ್ತರಿಗಾಗಿ ಪ್ರತ್ಯೇಕ ಕೋಣೆಗಳ ವ್ಯವಸ್ಥೆಯನ್ನು ಅಕ್ಟೋಬರ್ ೧೪ರ ಶುಕ್ರವಾರ ಮತ್ತು ಅಕ್ಟೋಬರ್ ೧೫ರ ಶನಿವಾರಕ್ಕೆ ಏರ್ಪಾಟು ಮಾಡಲಾಗಿದೆ. ಬಹಿರಂಗ ಸಭೆ ನಡೆಯುವ ಸ್ಥಳದಲ್ಲಿ ಊಟದ ಪೊಟ್ಟಣಗಳನ್ನು ಮತ್ತು ಶುದ್ಧವಾದ ಕುಡಿಯುವ ನೀರನ್ನು ವಿತರಣೆ ಮಾಡಲಾಗುತ್ತದೆ.
ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಿಂದ ಆಗಮಿಸುವ ಮತ್ತು ಕರ್ನಾಟಕದ ವಿವಿಧ ಸ್ಥಳಗಳಿಂದ ಬಳ್ಳಾರಿಗೆ ಆಗಮಿಸಿ, ಪಾದಯಾತ್ರೆ ಮತ್ತು ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳುವ ಪಾದಾಯಾತ್ರಿಗಳು – ಕಾಂಗ್ರೆಸ್ ಕಾರ್ಯಕರ್ತರು, ಮಹಿಳಾ ಮುಖಂಡರು ಈ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ರಾವೂರ್ ಸುನೀಲ್ ಅವರು ಮನವಿ ಮಾಡಿದ್ದಾರೆ.
ಈ ವ್ಯವಸ್ಥೇಯನ್ನು ಶ್ರೀರಕ್ಷಾ ಫೌಂಡೇಶನ್ ಮೂಲಕ ಕಲ್ಪಿಸಲಾಗುತ್ತಿದ್ದು, ಉಚಿತವಾಗಿರುತ್ತದೆ. ಆಸಕ್ತರು ವಸತಿ ಮತ್ತು ಊಟದ ವ್ಯವಸ್ಥೆಗಾಗಿ ನರೇಶ್ (ಬುಜ್ಜಿ) 9449380949,, ಭಾಸ್ಕರ್ 8496912555, ಎಸ್. ಚಂದು 9901566670,ಅಂಜಿ9980112965, ಗೋವರ್ಧನ್ 9611701539 ಗೆ ಸಂಪರ್ಕ ಮಾಡಿ ಸೌಲಭ್ಯಗಳನ್ನು ಪಡೆಯಲು ಕೋರಲಾಗಿದೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!